ವಾಷಿಂಗ್ಟನ್, ಜೂ.17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಮತ್ತು ಪತಿ ಜರಾದ್ ಕ್ರುಷ್ಣರ್ ಕಳೆದ ವರ್ಷ 13.5 ಕೋಟಿ ಡಾಲರ್ ಸಂಪಾದಿಸಿದ್ದಾರೆಂದು ವರದಿಯಾಗಿದೆ. ಇವರಿಬ್ಬರೂ ಟ್ರಂಪ್‍ರ ಸಲಹೆಗಾರರು ಆಗಿದ್ದು , ಸಂಬಳ ಪಡೆದಿಲ್ಲ. ರಿಯಲ್ ಎಸ್ಟೇಟ್ , ಹೋರ್ಡಿಂಗ್‍ಗಳು, ಸ್ಟೋಕ್‍ಗಳು, ಬಾಂಡ್‍ಗಳ ಮೂಲಕ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಇವಾಂಕಾರ ವಾಷಿಂಗ್ಟನ್ ಡಿಸಿಯ ಹೊಟೇಲ್‍ನಿಂದ 2018ರಲ್ಲಿ 39.5 ಲಕ್ಷ ಆದಾಯ ದೊರಕಿದೆ.
ಈ ಹೊಟೇಲ್ ವಿದೇಶಿ ರಾಜತಾಂತ್ರಿಕರು ಉಳಿದುಕೊಳ್ಳುವ ಪ್ರಧಾನ ತಾಣವಾಗಿದೆ. ಹ್ಯಾಂಡ್ ಬ್ಯಾಗ್, ಶೂ ಮೊದಲಾದ ಉತ್ಪಾದಿಸುವ ಇನ್ನೊಂದು ಕಂಪೆನಿಯಿಂದ 10 ಲಕ್ಷ ಡಾಲರ್ ಆದಾಯ ಇವಾಂಕಾರಿಗೆ ದೊರಕಿದೆ. ನ್ಯೂಯಾರ್ಕ್ ಸಿಟಿ ಅಪಾರ್ಟ್‍ಮೆಂಟ್ ನಿಂದ ಲಕ್ಷಾಂತರ ಡಾಲರ್ ಆದಾಯ ಕ್ರುಷ್ಣರ್ ಲಭಿಸಿದೆ. ರಿಯಲ್ ಎಸ್ಟೇಟ್ ಹೂಡಿಕೆ ಸಂಸ್ಥೆ ಕೆಡರ್ ನ ಶೇರಿನಿಂದ 2.5 ಕೋಟಿ ಡಾಲರ್ ಸಂಪಾದಿಸಿಕೊಂಡಿದ್ದಾರೆ. ದಂಪತಿಗಳ ಕಳೆದ ವರ್ಷದ ಆದಾಯ 2.8 ಕೋಟಿ ಡಾಲರ್ ಆಗಿದೆ. ಅಮೆರಿಕದಲ್ಲಿ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.












