ತಮಿಳುನಾಡಿನಲ್ಲಿ ಇನ್ನು ಪತ್ರಕರ್ತರು ಫ್ರಂಟ್ ಲೈನ್ ವರ್ಕರ್ಸ್ : ಸ್ಟಾಲಿನ್ ಘೋಷಣೆ

0
257

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳುನಾಡಿನಲ್ಲಿ ಇನ್ನು ಪತ್ರಕರ್ತರು ಫ್ರಂಟ್ ಲೈನ್ ವರ್ಕರ್ಸ್ ಎಂಬ ಪಟ್ಟಿಗೆ ಸೇರಿಸಲು ಅಧಿಕಾರಕ್ಕೆ ಬಂದಿರುವ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ನಿರ್ಧರಿಸಿದ್ದಾರೆ. ಈ ವಿಷಯವನ್ನು ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಪತ್ರಿಕೆ, ದೃಶ್ಯ, ಶ್ರಾವ್ಯ ಪತ್ರಕರ್ತರ ಜೀವನ ಅಪಾಯದಲ್ಲಿದೆ. ಮಳೆ ಬಿಸಿಲು , ನೆರೆಯಲ್ಲಿಯೂ ಕೆಲಸ ಮಾಡಿ ಜನರಿಗೆ ಸುದ್ದಿ ಮುಟ್ಟಿಸುತ್ತಾರೆ. ಅವರನ್ನು ಇನ್ನು ಮುಂದೆ ತಮಿಳುನಾಡಿನಲ್ಲಿ ಮುಂಚೂಣಿ ಹೋರಾಟಗಾರರೆಂದು ಘೋಷಿಸಲಾಗುವುದು ಎಂದು ಎಂ. ಕೆ. ಸ್ಟಾಲಿನ್ ಹೇಳಿದ್ದಾರೆ.

ಮುಂಚೂಣಿ ಯೋಧರೆಂದು ಘೋಷಿಸಿದ್ದರಿಂದ ಪತ್ರಕರ್ತರಿಗೂ ಎಲ್ಲ ಸವಲತ್ತು ಸಿಗಲಿದೆ. ಕೊರೊನ ವೈರಸ್ ಪ್ರತಿರೋಧ ವ್ಯಾಕ್ಸಿನ್ ವಿತರಣೆಯಲ್ಲಿ ಆದ್ಯತೆ ಸಿಗುವುದು. ಬಿಹಾರ, ಪಂಜಾಬ್ , ಮಧ್ಯಪ್ರದೇಶ ಕೂಡ ಪತ್ರಕರ್ತರನ್ನು ಫ್ರಂಟ್ ಲೈನ್ ವರ್ಕರ್ಸ್ ಗಳ ಸಾಲಿಗೆ ಸೇರ್ಪಡೆ ಮಾಡಿದೆ.

LEAVE A REPLY

Please enter your comment!
Please enter your name here