27 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಿಲ್ ಗೇಟ್ಸ್ ದಂಪತಿ

0
673

ಸನ್ಮಾರ್ಗ ವಾರ್ತೆ

ಅಮೆರಿಕ: ಮೈಕ್ರೋ ಸಾಪ್ಟ್ ಕಂಪೆನಿಯ ಸ್ಥಾಪಕ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡ ಗೇಟ್ಸ್ 27 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ದಾಂಪತ್ಯ ಜೀವನದಿಂದ ಬೇರೆ ಬೇರೆಯಾದರೂ ಬಿಲ್-ಮೆಲಿಂಡ ಫೌಂಡೇಶನ್ ಚಾರಿಟಿ ಚಟುವಟಿಕೆಯನ್ನು ಮುಂದುವರಿಸಲು ಇಬ್ಬರೂ ತೀರ್ಮಾನಿಸಿದ್ದಾರೆ.

ಬಹಳ ಯೋಚಿಸಿದೆವು. ನಂತರ ಈ ತೀರ್ಮಾನಕ್ಕೆ ಬಂದೆವು. ದಂಪತಿ ಎಂಬ ನೆಲೆಯಲ್ಲಿ ಜೀವನ ಒಟ್ಟಿಗೆ ಕೊಂಡು ಹೋಗಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಈಗ ವಿಚ್ಛೇದನ ಪಡೆದುಕೊಂಡಿದ್ದೇವೆ. ಹೊಸ ಜೀವನ ಆರಂಭವಾಗಲಿದೆ ಎಂದು ಇಬ್ಬರೂ ಸೇರಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬ್ಲೂಂಬರ್ಗ್ ಬಿಸಿನೆಸ್ ಇಂಡೆಕ್ಸ್ ಲೆಕ್ಕದಂತೆ ಇಬ್ಬರಿಗೂ 145 ಬಿಲಿಯನ್ ಡಾಲರ್ ಆಸ್ತಿ ಇದೆ. ಬಿಲ್-ಮೆಲಿಂಡ ಫೌಂಡೇಶನ್ ಜಗತ್ತಿನ ಅತ್ಯುನ್ನತ ಚ್ಯಾರಿಟಿ ಸಂಸ್ಥೆಯಲ್ಲಿ ಒಂದು ಆಗಿದೆ. ಮಹಿಳಾ ಹಕ್ಕು ರಕ್ಷಣೆ, ಹವಾಮಾನ ವೈಪರೀತ್ಯದ ವಿರುದ್ಧ ಕೆಲಸ ಮಾಡುತ್ತಿರುವ ಫೌಂಡೇಶನ್ ಕೊರೋನ ಪ್ರತಿರೋಧಕ್ಕೆ 50 ದಶಲಕ್ಷ ಡಾಲರ್ ವ್ಯಯಿಸಿತ್ತು. 65 ವರ್ಷದ ಬಿಲ್ ಗೇಟ್ಸ್ ಜಾಗತಿಕ ಅತೀ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೆಯವರು. ಮೆಲಿಂಡರಿಗೆ 56 ವರ್ಷ. ಇವರು ಮೊದಲು ಮೈಕ್ರೊ ಸಾಫ್ಟ್ ಮೆನೇಜರ್ ಆಗಿದ್ದರು. ಬಿಲ್ ಮತ್ತು ಮೆಲಿಂಡ ಫೌಂಡೇಶನ್‍ನ ಕೊ ಚೇರ್‍ಮೆನ್ ಮತ್ತು ಟ್ರಸ್ಟಿಯಾಗಿ ಮುಂದುವರಿಯುತ್ತಾರೆ ಎಂದು ಫೌಂಡೇಶನ್ ಹೇಳಿದೆ.

ಈ ಹಿಂದೆ ಅಮೆಝಾನ್‍ನ ಸಂಸ್ಥಾಪಕ ಜೆಫ್ ಬೆಸೊಸ್ ಕೂಡ ಪತ್ನಿಯೊಂದಿಗೆ ವಿಚ್ಛೇದನ ಮಾಡಿಕೊಂಡಿದ್ದರು. ಮದುವೆ ವಿಚ್ಛೇದಿಸಿದ ಮೇಲೆ ಅವರ ಪತ್ನಿ ಮೆಕೆಂಝಿ ಸ್ಕೋಟ್ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತ ಮಹಿಳೆಯಾಗಿ ಬದಲಾಗಿದ್ದರು.