‘ಫ್ರೀ ಫೆಲೆಸ್ತೀನ್’ ಘೋಷನೆ: ಗೂಗಲ್‌ ಸಿಇಒ ಸುಂದರ್ ಪಿಚೈ ಭಾಷಣದ ಸಮಯದಲ್ಲಿ ಸ್ಟ್ಯಾನ್‌ಫೋರ್ಡ್ ಪದವೀಧರರಿಂದ ಸಭಾತ್ಯಾಗ

0
253

ಸನ್ಮಾರ್ಗ ವಾರ್ತೆ

ಅಮೇರಿಕಾ: ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಂದು ವರ್ಗವು ಭಾನುವಾರ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಭಾಷಣದ ವೇಳೆ, ಕಂಪನಿಯು ಇಸ್ರೇಲ್‌ನೊಂದಿಗೆ ಹೊಂದಿದೆ ಎನ್ನಲಾದ ಸಂಬಂಧಗಳನ್ನು ಪ್ರತಿಭಟಿಸಿ ಮತ್ತು ಫೆಲೆಸ್ತೀನ್‌ಗೆ ಬೆಂಬಲವನ್ನು ಸೂಚಿಸಿ ಸಭಾತ್ಯಾಗ (walkout) ಮಾಡಿತು.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾದ ಪಿಚೈ, 2026 ರ ಪದವಿ ತರಗತಿಯನ್ನುದ್ದೇಶಿಸಿ ಭಾಷಣ ಮಾಡಲು ತಮ್ಮ ಮಾತೃಸಂಸ್ಥೆಗೆ ಮರಳಿದ್ದರು.

ಪಿಚೈ ಅವರು ತಮ್ಮ ಭಾಷಣವನ್ನು ಮುಂದುವರಿಸುತ್ತಿದ್ದಂತೆ ವಿದ್ಯಾರ್ಥಿಗಳು ಫೆಲೆಸ್ತೀನ್ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು “ಫ್ರೀ ಫೇಲೆಸ್ತೀನ್” ನಂತಹ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ.

ಈ ಪ್ರತಿಭಟನೆಯನ್ನು ‘ಸ್ಟೂಡೆಂಟ್ಸ್ ಫಾರ್ ಜಸ್ಟಿಸ್ ಇನ್ ಫೇಲೆಸ್ತೀನ್’ ಮತ್ತು ‘ನೋ ಟೆಕ್ ಫಾರ್ ಅಪಾರ್ಥೈಡ್’ ಸೇರಿದಂತೆ ವಿವಿಧ ಗುಂಪುಗಳು ಆಯೋಜಿಸಿದ್ದವು ಎಂದು ವರದಿಯಾಗಿದೆ.

ಇಸ್ರೇಲ್ ಸರ್ಕಾರದೊಂದಿಗೆ ಗೂಗಲ್ ಹೊಂದಿದೆ ಎನ್ನಲಾದ ಸಂಬಂಧಗಳನ್ನು, ವಿಶೇಷವಾಗಿ ಗೂಗಲ್ ಮತ್ತು ಅಮೆಝಾನ್ ಒಳಗೊಂಡಿರುವ 2021 ರಲ್ಲಿ ಸಹಿ ಮಾಡಲಾದ 1.2 ಬಿಲಿಯನ್ ಯುಎಸ್‌ ಡಾಲರ್‌ ಮೌಲ್ಯದ ಕ್ಲೌಡ್-ಕಂಪ್ಯೂಟಿಂಗ್ ಒಪ್ಪಂದವಾದ ‘ಪ್ರಾಜೆಕ್ಟ್ ನಿಂಬಸ್’ ಅನ್ನು ಪ್ರತಿಭಟನಾಕಾರರು ವಿರೋಧಿಸುತ್ತಿದ್ದಾರೆ ಎಂದು SFGate ವರದಿ ತಿಳಿಸಿದೆ.

“ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧ ಮತ್ತು ಕ್ಯಾಂಪಸ್‌ನಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಗಳ ಮೇಲಿನ ವಿಶ್ವವಿದ್ಯಾನಿಲಯದ ಕಠಿಣ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಕಳೆದ ಮೂರು ವರ್ಷಗಳ ಇತರ ಸ್ಟ್ಯಾನ್‌ಫೋರ್ಡ್ ಪದವಿದಾನ ಸಮಾರಂಭಗಳ ಬೆನ್ನಲ್ಲೇ ಈ ಸಭಾತ್ಯಾಗಗಳು ನಡೆದಿವೆ” ಎಂದು ವರದಿ ಹೇಳಿದೆ.

https://x.com/RT_com/status/2066351924522184843?ref_src=twsrc%5Etfw%7Ctwcamp%5Etweetembed%7Ctwterm%5E2066351924522184843%7Ctwgr%5Ef336e2db67cb04eb1fb5a8b4ce7c9a7f4d298b29%7Ctwcon%5Es1_&ref_url=https%3A%2F%2Ftimesofindia.indiatimes.com%2Fworld%2Fus%2Fwatch-stanford-students-boo-sundar-pichai-walk-out-during-google-ceos-commencement-speech%2Farticleshow%2F131734541.cms