ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 6: ಜಗತ್ತಿನಾದ್ಯಂತ ಕೊರೊನಾ ವೈರಸ್ ಹರಡಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವ ಪರಿಸ್ಥಿತಿಯಲ್ಲಿ ಶೇರು ಮಾರುಕಟ್ಟೆ ಕುಸಿದಿದೆ. ಜಾಗತಿಕ ಮಾರುಕಟ್ಟೆ ಮತ್ತು ಭಾರತದ ಮಾರುಕಟ್ಟೆ ನಷ್ಟದೊಂದಿಗೆ ವ್ಯಾಪಾರಕ್ಕೆ ತೊಡಗಿದೆ. ಮುಂಬೈ ಸೂಚ್ಯಂಕ ಸೆನ್ಸನ್ 1,300 ಪಾಯಿಂಟಿಗೆ ಕುಸಿದು 37,180ಕ್ಕೂ ರಾಷ್ಟ್ರದ ಶೇರು ಸೂಚ್ಯಂಕ ನಿಫ್ಟಿ 385 ಪಾಯಿಂಟು ಪಾತಾಳಕ್ಕೆ ಬಿದ್ದು 37,180ಕ್ಕೆ ತಲುಪಿತು. ಬಿಎಸ್ಇ ಮಿಡ್ಕಾಪ್ ಇಂಡೆಕ್ಸ್ 568 ಪಾಯಿಂಟು ತಳಕ್ಕಿಳಿದು 14,002ಕ್ಕೆ ಬಂದಿದೆ. ಬಿಎಸ್ಇ ಸ್ಮಾಲ್ಕೋಪ್ ಇಂಡೆಕ್ಸ್ 426 ಪಾಯಿಂಟು ನಷ್ಟದಲ್ಲಿ 13,164 ಪಾಯಿಂಟುಗಳಿಂದ ವ್ಯಾಪಾರ ಆರಂಭಿಸಿತು. ಎಲ್ಲ ಕ್ಷೇತ್ರವೂ ನಷ್ಟದಲ್ಲಿ ವ್ಯಾಪಾರ ಆರಂಭಿಸಿದೆ. ಬ್ಯಾಂಕಿಂಗ್, ಮೆಟ್ ಶೇರು ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚಿದೆ.
ಡಾಲರ್ ಮುಂದೆ ಭಾರತದ ನೋಟಿನ ಮೌಲ್ಯ ಕುಸಿತವಾಗಿ 74.02ಕ್ಕೆ ತಲುಪಿತು. ಕಚ್ಚಾತೈಲ ಧಾರಣೆ ಬ್ಯಾರೆಲ್ಗೆ 49 ಡಾಲರ್ ಗೆ ತಲುಪಿದೆ. ಕೊರೊನಾ 60ಕ್ಕೂ ಹೆಚ್ಚು ದೇಶಗಳಲ್ಲಿ ದಾಂಧಲೆ ನಡೆಸಿದ್ದು 95,000 ಮಂದಿಗೆ ಬಾಧಿಸಿದೆ. ಇದರೊಂದಿಗೆ ಹೂಡಿಕೆದಾರರು ಆತ್ಮವಿಶ್ವಾಸ ಕಳಕೊಂಡಿದ್ದಾರೆ. ಭಾರತದಲ್ಲಿ ಇದುವರೆಗೆ 30 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ವರದಿಯಾಗಿದೆ.












