ಕೇಜ್ರಿವಾಲ್‍ಗೆ ಈ ದಿಲ್ಲಿ ಕೋರ್ಟಿನಿಂದ ಸಮನ್ಸ್

0
208

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ.7: ಮದ್ಯ ನೀತಿಯಲ್ಲಿ ಅರವಿಂದ್ ಕೇಜ್ರಿವಾಲ್ ರಿಗೆ ದಿಲ್ಲಿಯ ರೋಸ್ ಅವೆನ್ಯೂ ಕೋರ್ಟ್ ಸಮನ್ಸ್ ಕಳುಹಿಸಿದೆ. ಸಮನ್ಸ್ ಪ್ರಕಾರ ಮಾರ್ಚ್ 16ಕ್ಕೆ ಕೋರ್ಟಿಗೆ ಹಾಜರಾಗಬೇಕು. ಮದ್ಯ ನೀತಿ ಪ್ರಕರಣದಲ್ಲಿ ಇಡಿ ಕೇಜ್ರಿವಾಲ್‍ಗೆ ಹಲವು ಬಾರಿ ಸಮನ್ಸ್ ಕಳುಹಿಸಿದರೂ ಅವರು ವಿಚಾರಣೆಗೆ ಹಾಜರಾಗಿಲ್ಲ.

ರೋಸ್ ಅವೆನ್ಯೂ ಕೋರ್ಟು ಅಲ್ಲದೆ ಇಡಿ ಸಮನ್ಸ್ ಗಳಿಗೆ ಕೇಜ್ರಿವಾಲ್ ಹಾಜರಾಗದಿರುವ ಘಟನೆಯಲ್ಲಿ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯ ಮಲ್ಹೋತ್ರ ಇಂದು ವಿಚಾರಣೆ ನಡೆಸಲಿದ್ದಾರೆ.

ಇಡಿಯನ್ನು ಉಪಯೋಗಿಸಿ ಪ್ರತಿಪಕ್ಷ ನಾಯಕರಿಗೆ ಪೀಡನೆ ನೀಡಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಎಕ್ಸ್ ನಲ್ಲಿ ಬರೆದಿದ್ದಾರೆ.

ಕೇಜ್ರಿವಾಲ್ ನಿರಂತರವಾಗಿ ಸಮನ್ಸ್ ನಿರ್ಲಕ್ಷಿಸುತ್ತಿದ್ದಾರೆ ಎಂದು ಇಡಿ ಸ್ಥಳೀಯ ಕೋರ್ಟುಗಳಿಗೆ ದೂರು ನೀಡಿತ್ತು. ಇಡಿ ನೀಡಿದ್ದ ಮೊದಲ ಮೂರು ಸಮನ್ಸ್ ಗಳನ್ನು ಕೇಜ್ರಿವಾಲ್ ನಿರ್ಲಕ್ಷಿಸಿದ್ದರು. ಇದೇ ವೇಳೆ ಇಡಿಯ ಸಮನ್ಸ್ ಗಳು ಕಾನೂನಿಗೆ ವಿರುದ್ಧವಾಗಿದೆ ಎನ್ನುವುದು ಕೇಜ್ರಿವಾಲ್ ನಿಲುವಾಗಿದೆ. ಮದ್ಯ ನೀತಿ ಭ್ರಷ್ಟಾಚಾರದಲ್ಲಿ ತನಗೆ ಅಡಗಿಸಿಡುವುದು ಯಾವುದೂ ಇಲ್ಲ ಎಂದು ಕೇಜ್ರಿವಾಲ್‍ರ ನಿಲುವಾಗಿದೆ.