ಗೋಲನ್ ಬೆಟ್ಟಗಳನ್ನು ಇಸ್ರೇಲಿನಿಂದ ಸ್ವತಂತ್ರಗೊಳಿಸುವುದಾಗಿ ಸಿರಿಯಾ ಘೋಷಣೆ

0
536

ನ್ಯೂಯಾರ್ಕ್,ಅ.30: ಇಸ್ಲಾಮೀ ಇತಿಹಾಸದಲ್ಲಿ ಮಹತ್ತರ ಸ್ಥಾನ ಹೊಂದಿರುವ ಗೋಲಾನ್ ಬೆಟ್ಟಗಳನ್ನು ಇಸ್ರೇಲಿನಿಂದ ವಶಪಡಿಸಿಕೊಳ್ಳುವುದಾಗಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮಾತಾಡುತ್ತ ಸಿರಿಯಾದ ಪ್ರತಿನಿಧಿ ಬಶರ್ ಜಾಫ್ರಿ ಘೋಷಿಸಿದ್ದಾರೆ.

ಗೋಲಾನ್ ಗುಡ್ಡಗಳು ಡಮಸ್ಕಸ್ ಸಮೀಪದಲ್ಲಿ ಇವೆ. ಗೋಲಾನ್‍ ಅನ್ನು ಸ್ವತಂತ್ರಗೊಳಿಸಲಾಗುವುದು. 1967ರ ಮೊದಲಿನ ಪರಿಸ್ಥಿತಿಯನ್ನು ಪುನಃ ತರಲಾಗುವುದು. ಇದು ಸಿರಿಯಾದ ಆದ್ಯತೆಯಾಗಿದೆ ಇದಕ್ಕೆ ಅಂತಾರಾಷ್ಟ್ರೀಯ ಕಾನೂನಿನ ಬೆಂಬಲವೂ ಇದೆ ಎಂದು ಜಾಫ್ರಿ ಹೇಳಿದ್ದಾರೆ.

ಸಿರಿಯಾದ ಭಾಗವಾಗಿದ್ದ ಗೋಲಾನ್ ಗುಡ್ಡಗಳನ್ನು ಸಿರಿಯಾ ವಶಪಡಿಸಿಟ್ಟುಕೊಂಡಿದ್ದು, ಇಸ್ರೇಲ್ ಇವುಗಳನ್ನು ಟೆಲ್‌ಅವಿವ್‍ನ ಭಾಗ ಎಂದು ವಾದಿಸುತ್ತಿದೆ. ಅಮೆರಿಕದ ಮಾನ್ಯತೆಯನ್ನು ಗಿಟ್ಟಿಸಿಕೊಳ್ಳಲು ಇಸ್ರೇಲ್ ಶ್ರಮಿಸುತ್ತಿದೆ.

2019 ಮಾರ್ಚ್ 25ಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‍ನ ಪರ ಗೋಲಾನ್ ಗುಡ್ಡಗಳ ಕುರಿತು ಸಹಿ ಹಾಕಿದ್ದರು. ಇಸ್ರೇಲ್ 1967ರಲ್ಲಿ ಆರು ದಿನಗಳ ಯುದ್ಧದಲ್ಲಿ ಸಿರಿಯದ ಗೋಲಾನ್ ಬೆಟ್ಟಗಳನ್ನು ಆಕ್ರಮಿಸಿ ವಶಪಡಿಸಿಕೊಂಡಿತ್ತು.