ದೇಶದ ವ್ಯವಸ್ಥೆ ಕೆಟ್ಟಿಲ್ಲ, ಮೋದಿ ಸರಕಾರ ವಿಫಲವಾಗಿದೆ: ಸೋನಿಯಾ ಗಾಂಧಿ

0
444

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ : ಕೊರೋನ ಎರಡನೇ ಅಲೆಯು ದೇಶಾದ್ಯಂತ ವ್ಯಾಪಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿಯ ಅವೈಜ್ಞಾನಿಕ ಕ್ರಮಗಳಿಂದ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ. ಭಾರತದಲ್ಲಿ ಈಗ ಸಾಕಷ್ಟು ಸಂಪನ್ಮೂಲಗಳಿವೆ. ಆದರೆ, ಮೋದಿ ಸರಕಾರ ಅದನ್ನು ಕ್ರಿಯಾತ್ಮಕವಾಗಿ ಬಳಸಲು ಸೋತಿದೆ. ಆದ್ದರಿಂದ ಮೋದಿ ಸರಕಾರ ವಿಫಲವಾಗಿದ್ದು, ದೇಶದ ವ್ಯವಸ್ಥೆಯಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಆನ್‍ಲೈನ್ ಕಾಂಗ್ರೆಸ್ ಪಾರ್ಲಿಮೆಂಟ್ ಪಾರ್ಟಿ ಸಭೆಯಲ್ಲಿ ಅವರು ಹೇಳಿದರು. ಕೈಲಾಗದ ಮೋದಿ ಸರಕಾರದಿಂದಾಗಿ ದೇಶ ನಾಶವಾಗುತ್ತಿದೆ. ನಾವು ನಮ್ಮನ್ನು ಸೇವೆಗೆ ಸ್ವಯಂ ಸಮರ್ಪಿಸಬೇಕಾದ ಸಮಯವಿದು. ಈ ಯುದ್ಧ ಸರಕಾರದಿಂದೊಂದಿಗಲ್ಲ. ಕೊರೋನ ವೈರಸ್ ಹಾನಿಯ ವಿರುದ್ಧವಾಗಿದೆ. ಸದ್ಯ ಕೊರೊನ ಸಮಸ್ಯೆಯನ್ನು ಎದುರಿಸಲು ಶಾಂತವೂ ಸಮರ್ಥವೂ ದೂರದೃಷ್ಟಿಯನ್ನು ಹೊಂದಿರುವ ನಾಯಕನ ಅಗತ್ಯವಿದೆ ಎಂದು ಅವರು ಹೇಳಿದರು.

ನಾವು ನಡೆಸಿದ ಮಾತುಕತೆಗೆ ಸರಕಾರ ಅರ್ಥಪೂರ್ಣವಾದ ರೀತಿಯಲ್ಲಿ ಸ್ಪಂದಿಸಲಿಲ್ಲ. ಪ್ರಧಾನಿಗೆ ಕಾಂಗ್ರೆಸ್ ನಾಯಕರಾದ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಬರೆದ ಪತ್ರಗಳನ್ನು ಸೂಚಿಸಿ ಕಾಂಗ್ರೆಸ್ ಅಧ್ಯಕ್ಷೆ ಹೇಳಿದರು.