ಕೊರೊನ ಚಿಕಿತ್ಸೆಗೆ ನಾವು ಪ್ಲಾಸ್ಮ ಕೊಡುತ್ತೇವೆ: ತಬ್ಲೀಗ್

0
1709

ಸನ್ಮಾರ್ಗ ವಾರ್ತೆ

ಚೆನ್ನೈ, ಎ. 23: ಕೊರೊನಾ ಚಿಕಿತ್ಸೆಗಾಗಿ ಪ್ಲಾಸ್ಮಾ ನೀಡುತ್ತೇವೆ ಎಂದು ತಮಿಳ್ನಾಡಿನ ತಬ್ಲೀಗಿ ಕಾರ್ಯಕರ್ತರು ಮುಂದೆ ಬಂದಿದ್ದಾರೆ. ದಿಲ್ಲಿ ನಿಝಾಮುದ್ದೀನ್ ತಬ್ಲೀಗ್ ಸಮ್ಮೇಳನದಲ್ಲಿ ಭಾಗವಹಿಸಿದ ಬಳಿಕ ಕೊರೊನಾ ಬಂದು ಗುಣಮುಖರಾದ 42 ಮಂದಿ ಪ್ಲಾಸ್ಮಾ ದಾನಕ್ಕೆ ಮುಂದೆ ಬಂದಿದ್ದಾರೆ.

ಕೊರೊನಾದ ವಿರುದ್ಧ ಪ್ರತಿರೋಧಿಸಿ ಗುಣಮುಖರಾದವರಲ್ಲಿ ಆಂಟಿಬೋಡಿಕ್‍ಗಳು ರಕ್ತದ ಪ್ಲಾಸ್ಮಾದಲ್ಲಿ ಸಹಜವಾಗಿ ಸೃಷ್ಟಿಯಾಗಿರುತ್ತದೆ. ಇದನ್ನು ಪ್ರತ್ಯೇಕಿಸಿ ಚಿಕಿತ್ಸೆಗೆ ಬಳಸುವ ರೀತಿ ಈಗ ಹಲವು ದೇಶಗಳು ಪರೀಕ್ಷಿಸುತ್ತಿವೆ. ಇದಕ್ಕಾಗಿ ಪ್ಲಾಸ್ಮಾ ಕೊಡಲು ತಬ್ಲೀಗ್ ಕಾರ್ಯಕರ್ತರು ಮುಂದೆ ಬಂದಿದ್ದಾರೆ. ಚೆನ್ನೈಯ ಇಲಕ್ಟ್ರಿಕ್ ಇಂಜಿನಿಯರ್ ಸುಲ್ತಾನ್ ದಿಲ್ಲಿಯಿಂದ ತಮಿಳ್ನಾಡಿಗೆ ಬಂದಿದ್ದಾರೆ. ಅವರೇ ತಬ್ಲೀಗ್ ಕಾರ್ಯಕರ್ತರನ್ನು ಒಟ್ಟುಗೂಡಿಸಿದ್ದಾರೆ. ದಿಲ್ಲಿಯ ತಬ್‍ಲೀಗ್ ಸಮ್ಮೇಳನಕ್ಕೆ ಸುಲ್ತಾನ್ ಹೋಗಿರಲಿಲ್ಲ. ಆದರೆ ತಬ್ಲೀಗ್ ಸಮ್ಮೇಳನದಲ್ಲಿ ಭಾಗವಹಿಸಿದವರನ್ನು ಬೆಟ್ಟುಮಾಡಿ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಹರಡಿದ್ದರು. ಇವೆಲ್ಲವನ್ನೂ ಮೀರಿ ನಿಲ್ಲುವುದು ನಮ್ಮ ಉದ್ದೇಶವೆಂದು ಅವರು ಹೇಳಿದ್ದಾರೆ.

ನಿರಾಧಾರ ಆರೋಪಗಳನ್ನು ಪ್ರತಿರೋಧಿಸುವುದರೊಂದಿಗೆ ರೋಗಾವಸ್ಥೆಯಲ್ಲಿರುವ ರೋಗಿಗಳಿಗೆ ನೆರವಾಗುವುದು ನಮ್ಮ ಉದ್ದೇಶವೆಂದು ಪ್ಲಾಸ್ಮಾ ದಾನಕ್ಕೆ ಮುಂದಾಗಿರವ ತಬ್ಲೀಗಿ ಕಾರ್ಯಕರ್ತರು ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.