ನೈಜರ್ ಗಡಿ ಗ್ರಾಮಗಳಲ್ಲಿ ಭಯೋತ್ಪಾದಕರ ದಾಳಿ; 100ಕ್ಕೂ ಹೆಚ್ಚು ಮಂದಿ ಹತ

0
368

ಸನ್ಮಾರ್ಗ ವಾರ್ತೆ

ನಯಾಮೆ: ನೈಜರ್‌ನ ಗಡಿ ಗ್ರಾಮಗಳಲ್ಲಿ ಭಯೋತ್ಪಾದನಾ ದಾಳಿಯಿಂದ 100ಕ್ಕೂಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಪಶ್ಚಿಮ ಆಫ್ರಿಕದ ದೇಶವಾದ ನೈಜರ್‌ನ ಮಾಲಿಯ ಗಡಿ ಗ್ರಾಮದಲ್ಲಿ ಕಳೆದ ಶನಿವಾರ ಭಯೋತ್ಪಾದಕರು ದಾಳಿ ಮಾಡಿದ್ದರು ಎಂದು ನೈಜರ್ ಪ್ರಧಾನಿ ಬ್ರಿಗಿ ರಾಫಿನಿ ತಿಳಿಸಿದ್ದಾರೆ.

ಸ್ಥಳೀಯರು ಇಬ್ಬರು ಭಯೋತ್ಪಾದಕರ ಹತ್ಯೆ ಮಾಡುವುದರೊಂದಿಗೆ ದಾಳಿ ಆರಂಭವಾಗಿತ್ತು. ಘಟನಾ ಸ್ಥಳದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ದೇಶದ ಎರಡನೆ ಹಂತದ ಅಧ್ಯಕ್ಷೀಯ ಚುನಾವಣೆ ಘೋಷಣೆಯಾದ ಬಳಿಕ ದಾಳಿ ನಡೆದಿದೆ.