ಕುಟುಂಬಗಳಿಗೆ ಸೂರಾ ಯೂಸುಫ್ ನೀಡುವ ಸಂದೇಶ

0
384

✍️ ಅಮೀನ್ ಹಮೀದ್

ಪವಿತ್ರ ಕುರ್‌ಆನಿನಲ್ಲಿ ವಿವಿಧ ಸ್ಥಳಗಳಲ್ಲಿ ಕುಟುಂಬ ಜೀವನದ ಬಗ್ಗೆ ಪರಾಮರ್ಶೆ ನಡೆಸಿರುವುದನ್ನು ಕಾಣಬಹುದು. ಆಧುನಿಕ ಮುಸ್ಲಿಮ್ ಕುಟುಂಬಗಳ ನಾಗಾಲೋಟಕ್ಕೆ ಫಲ ನೀಡುವಂತಹ ಹಲವು ಪಾಠಗಳನ್ನು ನಮಗೆ ಕುರ್‌ಆನಿನಲ್ಲಿ ಕಾಣಬಹುದು. ಪ್ರವಾದಿ ಯೂಸುಫ್(ಅ), ಸಹೋದರರು ಮತ್ತು ತಂದೆಯ ಕುರಿತ ವಿವರಗಳನ್ನು ಹೇಳುವ ಸೂರಾ ಯೂಸುಫ್‌ನಲ್ಲಿ ಅದರ ಆರಂಭವನ್ನು ಹೊರತುಪಡಿಸಿದರೆ ಹೆಚ್ಚಿನ ಎಲ್ಲಾ ಸ್ಥಳಗಳಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಪರಾಮರ್ಶೆಗಳಿಂದ ಸಂಪನ್ನವಾಗಿದೆ. ವಾಸ್ತವದಲ್ಲಿ ಸೂರಾ ಯೂಸುಫ್ ಹಲವಾರು ಕುಟುಂಬಗಳ ಪರಿಚ್ಛೇದವಾಗಿದೆ. ಈಗಿನ ಕೆಲವು ಕುಟುಂಬಗಳ ಕತೆಯು ಇದಕ್ಕಿಂತ ಭಿನ್ನವಲ್ಲ. ಒಳ್ಳೆಯದು ಕೆಟ್ಟದ್ದಾದ ಹಲವು ಸ್ಥಿತಿಗತಿಗಳು ಕುಟುಂಬದಲ್ಲಿ ಇದೆ ಎಂಬುದು ವಾಸ್ತವವಾಗಿದೆ.

ತಾನು ಕಂಡ ಕನಸಿನ ಕುರಿತು ತನ್ನ ತಂದೆಯವರಲ್ಲಿ ಹೇಳುವ ಮೂಲಕ ಸೂರಾ ಯೂಸುಫ್‌ನ ಪ್ರಾರಂಭವಾಗುತ್ತದೆ. ಯೂಸುಫರು ತಮ್ಮ ಪಿತರೊಡನೆ ಹೇಳಿದ ಸಂದರ್ಭ- ಅಪ್ಪಾ, ಹನ್ನೊಂದು ನಕ್ಷತ್ರಗಳೂ ಸೂರ್ಯನೂ ನನಗೆ ಸಾಷ್ಟಾಂಗವೆರಗುವುದನ್ನು ನಾನು ಸ್ವಪ್ನದಲ್ಲಿ ಕಂಡಿರುತ್ತೇನೆ” ಅದಕ್ಕೆ ಉತ್ತರವಾಗಿ ತಂದೆ ಇಂತೆಂದರು. “ಮಗನೇ, ಈ ಸ್ವಪ್ನವನ್ನು ನಿನ್ನ ಸಹೋದರರೊಡನೆ ಹೇಳಬೇಡ. ಅನ್ಯಥಾ ಅವರು ನಿನ್ನ ವಿರುದ್ಧ ಒಳಸಂಚು ನಡೆಸುವರು. ವಾಸ್ತವ ದಲ್ಲಿ ಶೈತಾನನು ಮಾನವನ ಪ್ರತ್ಯಕ್ಷ ಶತ್ರು.”

ಇಲ್ಲಿ ತನ್ನ ಕಿರಿಯ ಪುತ್ರ ವಿವರಿಸಿದ ಸ್ವಪ್ನದ ವಿವರವನ್ನು ಗಮನವಿಟ್ಟು ಆಲಿಸಿದ ತಂದೆ ಪ್ರವಾದಿ ಯಾಕೂಬ್(ಅ)ರಲ್ಲಿ ಮಕ್ಕಳು ಮತ್ತು ತಂದೆಯ ಜೊತೆಗಿನ ಸಂಬಂಧ ಹೇಗಿರಬೇಕೆಂದು ನಮಗೆ ಮನದಟ್ಟಾಗುತ್ತದೆ. ತಂದೆ-ತಾಯಂದಿರು ಲೌಕಿಕ ಜಂಜಾಟದಲ್ಲಿ ಮುಳುಗಿದಾಗ ಉಂಟಾಗುವ ಅಭಾವವನ್ನು ಸಾಮಾಜಿಕ ಜಾಲತಾಣಗಳು ತುಂಬುತ್ತವೆ. ನಾವು ಪ್ರತಿಯೋರ್ವರೂ ಈ ಪ್ರಶ್ನೆಯನ್ನು ನಮ್ಮಲ್ಲಿ ಸ್ವತಃ ಕೇಳಿಕೊಳ್ಳಬೇಕಾಗಿದೆ. ಅತೀ ಮಹತ್ತರವಾದ ಜವಾಬ್ದಾರಿಕೆಗಳನ್ನು ವಹಿಸಿರುವ ಪ್ರವಾದಿಗಳು ಯಾವ ರೀತಿಯಲ್ಲಿ ತಮ್ಮ ಮಕ್ಕಳ ಸಂಭಾಷಣೆಯನ್ನು ಗಮನವಿಟ್ಟು ಆಲಿಸಲು ಸಮಯವನ್ನು ಮೀಸಲಿಟ್ಟರು. ಹಾಗೆ ಅವರನ್ನು ಅತ್ಯುತ್ತಮವಾದ ದಾರಿಯಲ್ಲಿ ಕೊಂಡೊಯ್ಯಲು ಅವರಿಗೆ ಅದರಲ್ಲಿ ಮುಂದುವರಿಯಲು ಸುಲಭವಾಗುವಂತೆ, ಮಹತ್ತರವಾದ ಅನುಭವಗಳನ್ನು ನೀಡಿ, ಅವರ ತಂದೆಯಂದಿರು ಸಾಗುವ ಹಂತಕ್ಕೆ ತಲುಪಲು ಪರಿಶ್ರಮಿಸಿ ಅವರನ್ನು ಆ ಉನ್ನತ ಸ್ಥಾನದತ್ತ ಹೇಗೆ ತಲುಪಿಸಿದರು.?”

ಮಾತಾಪಿತರು ಗಮನಿಸಬೇಕಾದ ಅತ್ಯಂತ ಮಹತ್ತರವಾದ ವಿಚಾರವೇನೆಂದರೆ ಮಕ್ಕಳಲ್ಲಿ ನ್ಯಾಯಪೂರ್ಣವಾಗಿ ವ್ಯವಹರಿಸಿರಿ. ಇದು ಬಹಳಷ್ಟು ಗಮನಹರಿಸಬೆಕಾದ ವಿಚಾರವಾಗಿದೆ. ಮಾತಾಪಿತರಿಂದ ಮಕ್ಕಳು ದೂರವಾಗಲು ಹಾಗೂ ನಿಕಟವಾಗಲು ಇದು ಕಾರಣವಾಗುತ್ತದೆ. ಪ್ರವಾದಿ ಯಾಕೂಬ್‌ರಿಗೆ ತನ್ನ ಕಿರಿಯ ಪುತ್ರ ಯೂಸುಫ್‌ರ ಬಗ್ಗೆ ಅತೀವ ವಾತ್ಸಲ್ಯವಿದ್ದದರಿಂದ ಇತರ ಮಕ್ಕಳಲ್ಲಿ ಅಸೂಯೆ ಮೂಡಿ ಅದು ಯೂಸುಫ್‌ರನ್ನು ಕೊಲ್ಲುವ ಹಂತಕ್ಕೂ ತಲುಪಿಸಿತು. “ಈ ಯೂಸುಫ್ ಅವನ ಸಹೋದರನು ನಮ್ಮ ತಂದೆಗೆ ನಮ್ಮೆಲ್ಲರಿಗಿಂತ ಹೆಚ್ಚು ಪ್ರಿಯರಾಗಿದ್ದಾರೆ. ವಸ್ತುತಃ ನಾವು ಒಂದು ಕೂಟವಾಗಿದ್ದೇವೆ. ನಿಜ ಹೇಳುವುದಾದರೆ ನಮ್ಮ ಪಿತೃವರ್ಯರು ಸ್ಪಷ್ಟ ದುರ್ಮಾರ್ಗದಲ್ಲಿದ್ದಾರೆ. ನಿಮ್ಮ ತಂದೆಯವರ ಒಲವು ನಿಮ್ಮ ಕಡೆಗೆ ಆಗುವಂತೆ ಮಾಡಲಿಕ್ಕಾಗಿ ಯೂಸುಫರನ್ನು ಕೊಂದು ಬಿಡಿರಿ. ಎಲ್ಲಾದರೂ ಎಸೆದುಬಿಡಿರಿ. ಈ ಕಾರ್ಯವನ್ನು ಮಾಡಿಯಾದ ಬಳಿಕ ಸಜ್ಜನನಾಗಬೇಕು.” ಎಂದು ಅವರು ಹೇಳಿದ ಸಂದರ್ಭ. “ಪ್ರವಾದಿಗಳ ಮಕ್ಕಳ ಸ್ಥಿತಿ ಹೀಗಾದರೆ ಜನಸಾಮಾನ್ಯರ ಸ್ಥಿತಿ ಏನಾಗ ಬಹುದು.?”

ಪವಿತ್ರ ಕುರ್‌ಆನ್ ಇಂತಹ ಸಂದರ್ಭಗಳನ್ನು ನಮ್ಮ ಮುಂದೆ ವಿವರಿಸುವಾಗ ಪ್ರವಾದಿಗಳ ಬದುಕಿನಲ್ಲಿ ಮಾನವನ ಜೀವನದ ವಾಸ್ತವ ವಿಚಾರಗಳನ್ನು ನಮಗೆ ತೋರಿಸುತ್ತದೆ. ಅವರ ಸುತ್ತಮುತ್ತಲಿನ ವಾಸ್ತವ ವಿಚಾರಗಳ ಬಗ್ಗೆ ಅರಿಯಲು ಮತ್ತು ಸಮಸ್ಯೆಗಳು ಬಂದಾಗ ಅದನ್ನು ಎದುರಿಸಲು ಪ್ರಜ್ಞಾವಂತರಾಗಿರಬೇಕೆಂಬುದು ಅದರ ಉದ್ದೇಶವಾಗಿರುತ್ತದೆ. ಅದಕ್ಕಾಗಿ ಆ ಸಂದೇಶಗಳ ಮುಖಾಂತರ ನಮ್ಮ ಗಮನವನ್ನು ಅತ್ತ ಸೆಳೆಯ ಬಯಸುತ್ತದೆ. ಅದರಲ್ಲಿ ಉತ್ತಮವಾದುದನ್ನು ಅಳವಡಿಸಿಕೊಂಡು ಅನುಸರಣೆಗೆ ಅನರ್ಹವಾದುದರಿಂದ ದೂರವಿರಲು ನಮ್ಮನ್ನು ಅದು ಪ್ರೇರೇಪಿಸುತ್ತದೆ. ಪ್ರವಾದಿ ಯೂಸುಫ್(ಅ) ಕತೆಯನ್ನು ನಾವು ಸೂಕ್ಷ್ಮವಾಗಿ ನಮ್ಮ ಸಹೋದರರ ಮಧ್ಯೆ ಒಂದು ಕಥಾ ಪಾತ್ರ ಉದ್ಭವವಾಗುತ್ತದೆ. ಆತ ಸಂಪೂರ್ಣವಾಗಿ ಒಳಿತಿನ ಪರ ಇರುವ ವನೋ ಅಥವಾ ಕೆಡುಕಿನಲ್ಲಿ ಮುಳುಗಿರುವವನೋ ಅಲ್ಲ. ಈ ಎರಡರ ನಡುವೆ ಇರುವವನು.

ಸಹೋದರರು ಯೂಸುಫ್‌ರನ್ನು ಕೊಲ್ಲಲು ತೀರ್ಮಾನಿಸಿದಾಗ ಆ ಸಹೋದರ ಆತನನ್ನು ಬಾವಿಗೆ ತಳ್ಳಿ ಬಿಡೋಣ ಎಂದಾಗಿತ್ತು. ಅದಕ್ಕೆ ಅಲ್ಪವಾದರೂ ಆತನ ಹೃದಯದಲ್ಲಿ ಕರುಣೆ ವಾತ್ಸಲ್ಯ ಇರುವ ಕಾರಣವಾಗಿರಬಹುದು. ಅವರು ಯೂಸುಫರ ಕುರಿತು ಸ್ವಲ್ಪ ಸಹೋದರ ಭಾವ ಮೂಡಿ ಬಂದರೂ ಇತರರಂತೆ ಆತನಿಗೂ ಅಸೂಯೆ ತುಂಬಿತ್ತು. ಆದರೆ ಅದು ಇತರರಷ್ಟು ತೀವ್ರವಾಗಿರಲಿಲ್ಲ. ಅವರಲ್ಲಿ ಓರ್ವನು ಹೇಳಿದನು. “ಯೂಸುಫ್‌ರನ್ನು ನೀವು ಕೊಲ್ಲಬಾರದು. ನಿಮಗೆ ಏನಾದರೂ ಮಾಡಬೇಕೆಂದಿದ್ದರೆ ಅವನನ್ನು ನೀವು ಒಂದು ಬಾವಿಗೆ ತಳ್ಳಿರಿ. ಯಾವುದಾದರೂ ಯಾತ್ರಾ ತಂಡ ಆತನನ್ನು ಕಂಡುಕೊಂಡು ಹೋಗಬಹುದು.”

ಹಲವು ವರ್ಷಗಳ ಬಳಿಕ ನಾವು ಕಾಣುವ ಯೂಸುಫ್ ತನ್ನ ಸಹೋದರನನ್ನು ದೊರೆಯ ಪಾತ್ರೆ ಕದ್ದ ಆರೋಪದಲ್ಲಿ ಸೆರೆಮನೆಯಲ್ಲಿ ಡುವ ಸಂದರ್ಭಾವಾಗಿದೆ. ಆ ಕಥಾ ಪಾತ್ರವನ್ನು ಕುರ್‌ಆನ್ ಸ್ಪಷ್ಟವಾಗಿ ವಿವರಿಸಿದೆ. ಮಾಡಿದ ತಪ್ಪನ್ನು ಸ್ಮರಿಸಿ ಬಿನ್ ಯಾಮೀನ್‌ಗೆ ಪಶ್ಚಾತ್ತಾಪ ಉಂಟಾಗುತ್ತದೆ. ಅವರಿಗೆ ಸಹೋದರರ ಜೊತೆ ಹಿಂದಿರುಗಿ ಹೋಗಲಾಗಲಿಲ್ಲ. ಆ ಸಂದರ್ಭವನ್ನು ಕುರ್‌ಆನ್ ಹೀಗೆ ವಿವರಿಸಿದೆ. “ಹೀಗೆ ಯೂಸುಫ್ ರಿಂದ ನಿರಾಶರಾದ ಮೇಲೆ ಅವರು ಒತ್ತಟ್ಟಿಗೆ ಹೋಗಿ ಪರಸ್ಪರ ಸಮಾಲೋಚನೆ ನಡೆಸ ತೊಡಗಿದರು. ಅವರಲ್ಲಿ ಎಲ್ಲರಿಗೂ ಹಿರಿಯವ ನಾದವನು ಹೇಳಿದನು.

`ನಿಮ್ಮ ತಂದೆ ನಮ್ಮೊಡನೆ ಅಲ್ಲಾಹನ ಹೆಸರಲ್ಲಿ ಪ್ರಮಾಣ ವಚನ ಪಡೆದಿರುವುದು ನಿಮಗೆ ತಿಳಿದಿಲ್ಲವೇ? ಇದಕ್ಕೆ ಮುಂಚೆ ಯೂಸುಫರ ವಿಷಯದಲ್ಲಿ ನೀವು ಮಾಡಿರುವುದೆಲ್ಲವೂ ನಿಮಗೆ ತಿಳಿದಿದೆ. ಇನ್ನು ನನ್ನ ತಂದೆಯವರು ನನಗೆ ಅನುಮತಿ ಕೊಡುವ ವರೆಗೆ ಅಥವಾ ಅಲ್ಲಾಹನು ನನ್ನ ಬಗ್ಗೆ ತೀರ್ಮಾನ ಮಾಡುವ ವರೆಗೆ ನಾನು ಇಲ್ಲಿಂದ ಎಷ್ಟು ಮಾತ್ರಕ್ಕೂ ಹೋಗಲಾರೆ. ಅಲ್ಲಾಹನು ಅತ್ಯುತ್ತಮ ತೀರ್ಪುಗಾರನು. ನೀವು ಮರಳಿ ಹೋಗಿ ತಂದೆಯವರೊಡನೆ ಅಪ್ಪ ನಿಮ್ಮ ಮಗನು ಕಳವು ಮಾಡಿದ್ದಾನೆ. ಅವನು ಕಳವು ಮಾಡುತ್ತಿರುವುದನ್ನು ನಾವು ನೋಡಲಿಲ್ಲ. ನಮಗೆ ತಿಳಿದುದನ್ನು ಮಾತ್ರ ನಾವು ಹೇಳುತ್ತೇವೆ. ಅದೃಶ್ಯವಾಗಿರುವುದರ ಬಗ್ಗೆ ಮೇಲ್ನೋಟ ವಹಿಸಲು ನಮ್ಮಿಂದ ಸಾಧ್ಯವಿರಲಿಲ್ಲ.”