ಇದು ನನ್ನ ಭಾರತ| ಮಸೀದಿಗಳಿಂದ ರೈತರಿಗೆ ಆಹಾರ ಪೂರೈಕೆ: ಭಾವೈಕ್ಯತೆಯ ಸಂದೇಶ ಸಾರಿದ ಚಿತ್ರಗಳು

0
1440

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ವಿವಿಧ ರಾಜ್ಯಗಳ ರೈತರು ದೇಶದ ರಾಜಧಾನಿಗೆ ನಡೆಸುತ್ತಿರುವ ದಿಲ್ಲಿ ಚಲೋ ರ್ಯಾಲಿಯ ನಡುವೆ ಮಸೀದಿಗಳಿಂದ ಆಹಾರ ವಿತರಣೆ ಏರ್ಪಾಟು ನಡೆಯುತ್ತಿದೆ.

ಮಸೀದಿಯಲ್ಲಿ ಆಹಾರ ಸಿದ್ಧಪಡಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟದ ವೇಳೆ ತಮಗೆ ಆಹಾರ ಒದಗಿಸಿದ ರೈತರಿಗೆ ಪ್ರತ್ಯುಪಕಾರವಾಗಿ ಆಹಾರ ನೀಡುತ್ತಿದ್ದೇವೆ ಎಂದು ಒಬ್ಬರು ಫೋಟೊ ಸಹಿತ ಟ್ವೀಟ್ ಮಾಡಿದ್ದಾರೆ.

ಆಹಾರದ ಅಗತ್ಯವಿರುವ ರೈತರು ಸಂಪರ್ಕಿಸಲು ಸುಲಭವಾಗುವಂತೆ ಮಸೀದಿಗಳ ಮೊಬೈಲ್ ನಂಬರ್ ಕೂಡ ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಲಾಗಿದೆ. ಹೋರಾಟವನ್ನು ದಮನಿಸಲು ಪೊಲೀಸರು ಶ್ರಮಿಸುವುದರಿಂದ ಮತ್ತಷ್ಟು ರೈತರು ದಿಲ್ಲಿಗೆ ಬರಲಿದ್ದಾರೆಂದು ವರದಿಯಾಗಿದೆ.