ಸನ್ಮಾರ್ಗ ವಾರ್ತೆ
ತೊಕ್ಕೊಟ್ಟು: “ಕ್ರೀಡೆಗೆ ಜಾತಿ, ಮತ, ಲಿಂಗಬೇಧವಿಲ್ಲ. ನಾವು ನಮ್ಮ ಸಾಧನೆಯಿಂದ ಜನರ ನಡುವೆ ಗುರುತಿಸಲ್ಪಡಬೇಕು” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ಕ್ಯಾಪ್ಟನ್ ಗೋಪಿನಾಥ್ ಕಾಪಿಕಾಡ್ರವರು ಹೇಳಿದರು. ಅವರು ಹಿರಾ ಮಹಿಳಾ ಕಾಲೇಜಿನ ವಾರ್ಷಿಕ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಗೋಪಿನಾಥ್ ಕಾಪಿಕಾಡ್ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಎಂ.ಸಿ. ಅಬ್ದುಲ್ ರಹಿಮಾನ್ರವರು ಉದ್ಘಾಟಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿನಿ ಅಫ್ರ ಪ್ರತಿಜ್ಞಾ ಸ್ವೀಕಾರ ಮಾಡಿದರು. ಶಾಂತಿ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಎ.ಎಚ್.ಮೆಹಮೂದ್ ಅಧ್ಯಕ್ಷೀಯ ಭಾಷಣ ಮಾಡಿದರು. ವಿದ್ಯಾರ್ಥಿ ನಾಯಕಿ ಫಹೀಮ ಮುಶ್ತಾಕ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅನಾನ್ ಫಾತಿಮಾ ಹಾಗೂ ಹಲೀಮಾ ನೌಶೀನ್ ಕುರ್ಆನ್ ಪಠಿಸಿದರು. ನಯೀಮ ಧನ್ಯವಾದವಿತ್ತರು. ಹಲೀಮ ಅಫ್ರೀನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಭಾಗೀರಥಿ, ಶಾಂತಿ ಎಜುಕೇಶನಲ್ ಟ್ರಸ್ಟ್ನ ಕಾರ್ಯದರ್ಶಿ ಅಬ್ದುಲ್ ಕರೀಂ, ಆಡಳಿತಾಧಿಕಾರಿ ಝಾಕಿರ್ ಹುಸ್ಸೇನ್, ವ್ಯವಸ್ಥಾಪಕ ಸಮೀರ್, ಸದಸ್ಯರಾದ ಜನಾಬ್ ಅಬ್ದುಲ್ ಖಾದರ್, ಉಮರ್ ಬಾವಾ ಮತ್ತು ಹಿರಾ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.












