ದುಬೈ: ಸಾಮಾಜಿಕ ಮಾಧ್ಯಮಗಳಲ್ಲಿ ಇಸ್ಲಾಮೊಫೋಬಿಯ ಹರಡಿದ ಮೂವರು ಭಾರತೀಯರ ವಿರುದ್ಧ ಕ್ರಮ- ಕೆಲಸದಿಂದ ಅಮಾನತು

0
783

ಸನ್ಮಾರ್ಗ ವಾರ್ತೆ

ದುಬೈ,ಮೇ.3: ಸಾಮಾಜಿಕ ಮಾಧ್ಯಮಗಳ ಮೂಲಕ ಧರ್ಮ ದ್ವೇಷ ಪ್ರಚಾರ ಮಾಡಿದ ರಾವತ್ ರೋಹಿತ್, ಸಚಿನ್ ಕಿನ್ನಿಗೊಳಿ, ಪ್ರಮುಖ ಸಂಸ್ಥೆಯೊಂದರ ಕ್ಯಾಶಿಯರ್ ವಿರುದ್ಧ ಅವರು ಕೆಲಸ ಮಾಡುತ್ತಿರುವ ಸಂಸ್ಥೆಯೇ ಕ್ರಮ ಜರಗಿಸಿದೆ. ಒಂದು ವಾರದಿಂದ ಇವರು ಫೇಸ್‍ಬುಕ್‍ನಲ್ಲಿ ಹಾಕಿದ ಇಸ್ಲಾಮೋಫೊಬಿಯ ಪೋಸ್ಟ್‌ಗಳು ಸಂಸ್ಥೆಯ ಮಾಲಕರ ಗಮನಕ್ಕೆ ಬಂದಿತ್ತು.

ದುಬೈಯಲ್ಲಿ ಪ್ರಮುಖ ಇಟಲಿಯನ್ ರೆಸ್ಟೊರೆಂಟ್ ಅಝಾದಿ ಗ್ರೂಪ್‍ನಲ್ಲಿ ರಾವತ್ ರೋಹಿತ್ ಶೆಫ್ ಆಗಿದ್ದಾನೆ. ಸಚಿನ್ ಕಿನ್ನಿಗೋಳಿ ಶಾರ್ಜದ ನ್ಯೂಮಿಕ್ಸ್ ಆಟೊಮೆಶನ್‍ನ ಸ್ಟೋರ್ ಕೀಪರ್ ಆಗಿದ್ದಾನೆ. ಇಬ್ಬರನ್ನು ಅಮಾನತಿನಲ್ಲಿಟ್ಟುದನ್ನು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಇಬ್ಬರ ಸಂಬಳ ತಡೆಹಿಡಿಯಲಾಗಿದೆ. ತನಿಖೆ ಮುಗಿಯುವವರೆಗೆ ಕೆಲಸಕ್ಕೆ ಬರಬೇಡಿ ಎಂದು ಇಬ್ಬರಿಗೂ ತಿಳಿಸಲಾಗಿದೆ. ಯಾವುದೇ ಧರ್ಮವನ್ನು ಅವಹೇಳನ ಮಾಡುವುದು ತಮಗೆ ತೀರ ಅಸಮ್ಮತವಿದೆ. ಯಾರಾದರೂ ತಪ್ಪಿತಸ್ಥ ಎಂದು ಸಾಬೀತಾದರೆ ತದ್ಫಲವನ್ನು ಅನುಭವಿಸಬೇಕಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದರು.

ದುಬೈಯ ಟ್ರಾನ್ಸ್‌ ಗಾರ್ಡ್ ಗ್ರೂಪ್‍ನ ಇನ್ನೊಬ್ಬ ಉದ್ಯೋಗಿ ವಿಶಾಲ್ ಠಾಕೂರ್ ಎಂಬ ಹೆಸರಿನಲ್ಲಿ ಫೇಸ್‍ಬುಕ್‍ನಲ್ಲಿ ಇಸ್ಲಾಮೊಫೋಬಿಯ ಪೋಸ್ಟ್‌ಗಳನ್ನು ಹಾಕಿದ್ದಾನೆ. ನಂತರ ತನಿಖೆ ನಡೆದು ಪೋಸ್ಟ್ ಹಾಕಿದ ನಿಜವಾದ ವ್ಯಕ್ತಿಯನ್ನು ಗುರುತಿಸಲಾಗಿದ್ದು ಈತನನ್ನು ಕೆಲಸದಿಂದ ಹೊರ ಹಾಕಿದ್ದಲ್ಲದೇ ಪೊಲೀಸರಿಗೆ ಒಪ್ಪಿಸಲಾಗಿದೆ. ಈಗ ಈತ ಪೊಲೀಸರ ವಶದಲ್ಲಿದ್ದಾನೆ. ಇದೇ ವೇಳೆ ಟ್ವಿಟರ್‍ನಲ್ಲಿ ದ್ವೇಷಪೂರಿತ ಕಮೆಂಟು ಹಾಕುತ್ತಿರುವ ಪ್ರಕಾಶ್ ಕಮಾರ್ ಎಂಬಾತನಿಗೂ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಟ್ರಾನ್ಸ್‌ಗಾರ್ಡ್ ಕಂಪೆನಿ ತಿಳಿಸಿದೆ. ಆದರೆ ಪ್ರಕಾಶ್ ಕುಮಾರ್ ತನ್ನನ್ನು ಟ್ರಾನ್ಸ್‌ ಗಾರ್ಡ್ ಕಂಪೆನಿಯ ಉದ್ಯೋಗಿ ಎಂದು ಹೇಳಕೊಂಡಿದ್ದ.

ಭಾರತೀಯರು ಯುಎಇಯಲ್ಲಿ ನಡೆಸುತ್ತಿರುವ ದ್ವೇಷ ಪ್ರಚಾರ ಕೊನೆಗೊಳಿಸಬೇಕೆಂದು ಯುಎಇಯ ಭಾರತದ ರಾಯಭಾರಿ ಪವನ್ ಕಪೂರ್ ಹೇಳಿಕೆ ನೀಡಿದ ಬಳಿಕವೂ ಇವರು ಪುನಃ ಪೋಸ್ಟ್ ಹಾಕಿದ್ದರು. ಇಂತಹವರ ವಿರುದ್ಧ ಕ್ರಮ ಜರಗಿಸುತ್ತೇವೆ ಎಂದು ಯುಎಇ ಈ ಮೊದಲು ಮುನ್ನೆಚ್ಚರಿಕೆಯನ್ನೂ ನೀಡಿತ್ತು.

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.