ಜೆಎ‌ನ್‌ಯು ವಿದ್ಯಾರ್ಥಿ ಶಾರ್ಜಿಲ್ ಇಮಾಮ್ ವಿರುದ್ಧ ಪ್ರಕರಣ: ದಿಲ್ಲಿ ಸರಕಾರದಿಂದ ವಿವರಣೆ ಕೇಳಿದ ಸುಪ್ರೀಂ ಕೋರ್ಟು

0
500

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮೇ.3: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ವೇಳೆ ಭಾಷಣ ಮಾಡಿದ್ದಕ್ಕಾಗಿ ಜೆಎನ್‍ಯು ವಿದ್ಯಾರ್ಥಿ ಶಾರ್ಜಿಲ್ ಇಮಾಮ್ ವಿರುದ್ಧ ಪ್ರಕರಣಗಳನ್ನು ಒಂದು ಗೂಡಿಸಿ ವಿಚಾರಣೆಗೆ ಎತ್ತಿಕೊಳ್ಳಬೇಕೆಂಬ ಅರ್ಜಿಯಲ್ಲಿ ಸುಪ್ರೀಂಕೋರ್ಟು ದಿಲ್ಲಿ ಸರಕಾರದ ಅಭಿಪ್ರಾಯವನ್ನು ಕೇಳಿದೆ. ಜಸ್ಟಿಸ್ ಅಶೋಕ್ ಭೂಷಣ್ ನೇತೃತ್ವದ ಪೀಠ ಉತ್ತರ ನೀಡಲು ಒಂದು ವಾರದ ಗಡುವನ್ನು ದಿಲ್ಲಿ ಹೈಕೋರ್ಟಿಗೆ ನೀಡಿದೆ.

ತನ್ನ ವಿರುದ್ಧ ದಾಖಲುಗೊಂಡಿರುವ ಐದು ದೇಶದ್ರೋಹ ಪ್ರಕರಣಗಳನ್ನು ಒಂದುಗೂಡಿಸಿ ಒಂದೇ ಸಂಸ್ಥೆ ತನಿಖೆ ನಡೆಸಬೇಕೆಂದು ಶಾರ್ಜಿಲ್ ಕೋರ್ಟಿನ ಮೊರೆಹೋಗಿದ್ದರು. ಆದರೆ, ಭಾಷಣಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ಕೇಸು ಹಾಕಿರುವುದರಲ್ಲಿ ತಪ್ಪಿಲ್ಲ ಎಂದು ಸುಪ್ರೀಂಕೋರ್ಟು ಹೇಳಿತು.

ಇದೇ ವೇಳೆ ಸಮಾನ ರೀತಿಯ ಕೇಸು ಪತ್ರಕರ್ತ ಅರ್ನಬ್ ಗೋಸ್ವಾಮಿ ಸಲ್ಲಿಸಿದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಹೇಗೆ ಎತ್ತಿಕೊಳ್ಳಲಾಯಿತು ಎಂದು ಶಾರ್ಜಿಲ್ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ ದೇವ್ ಹೇಳಿದರು. ಅರ್ನಾಬ್‍ರ ವಿರುದ್ಧ ಬೇರೆ ರಾಜ್ಯಗಳಲ್ಲಿ ದಾಖಲುಗೊಂಡ ಕೇಸುಗಳನ್ನು ಕೈಬಿಟ್ಟು ನಾಗ್‍ಪುರದಲ್ಲಿ ದಾಖಲಾದ ಕೇಸನ್ನು ವಿಚಾರಣೆಗೆ ಎತ್ತಿ ಕೊಂಡರೆ ಸಾಲುತ್ತದೆ ಎಂದು ಸುಪ್ರೀಂ ಕೋರ್ಟು ಆದೇಶಿಸಿತ್ತು. ವ್ಯಕ್ತಿ ಸ್ವಾತಂತ್ರ್ಯವನ್ನೂ ಕಳಕೊಂಡ ತನ್ನ ಕಕ್ಷಿಗೆ ಸಮಾನವಾದ ಸಾಂತ್ವನವನ್ನು ಯಾಕೆ ಕೊಟ್ಟಿಲ್ಲ ಎಂದು ಸಿದ್ಧಾರ್ಥ್ ದೇವ್ ಪ್ರಶ್ನಿಸಿದರು.

ಶಾರ್ಜಿಲ್ ವಿರುದ್ಧ ದಿಲಿ ,ಉತ್ತರಪ್ರದೇಶ, ಅಸ್ಸಾಮ, ಮಣಿಪ್ಪುರ, ಅರುಣಾಚಲ ಪ್ರದೇಶದಲ್ಲಿ ಕೇಸು ದಾಖಲಿಸಿಕೊಂಡಿದ್ದರು. ದಿಲ್ಲಿ ಪೊಲೀಸರು ಬಂಧಿಸಿದ್ದರು. ಬಿಹಾರದ ನಿವಾಸಿಯಾದ ಶಾರ್ಜಿಲ್ ಜೆಎನ್‍ಯುವಿನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ