ಪಾಟ್ನ, ಮಾ.12: ಬಿಜೆಪಿ ಬೆಂಬಲಿತ ಚ್ಯಾನೆಲ್ಗಳನ್ನು ಬಹಿಷ್ಕರಿಸಲು ಪ್ರತಿಪಕ್ಷಗಳಿಗೆ ಬಿಹಾರದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಪತ್ರ ಬರೆದಿದ್ದಾರೆ. ತೇಜಸ್ವಿ ಯಾದವ್ರ ತಂದೆ ಆರ್ಜೆಡಿ ನಾಯಕ ಲಾಲುಪ್ರಸಾದ್ ಯಾದವ್ರು ಕೂಡ ತೇಜಸ್ವಿಯ ಕರೆಗೆ ಬೆಂಬಲ ಸೂಚಿಸಿದ್ದಾರೆ. ಮೋದಿ ಮಾಧ್ಯಮಗಳನ್ನು ಬಹಿಷ್ಕರಿಸಿರಿ ಎಂದು ಲಾಲು ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದೇ ವೇಳೆ ತೇಜಸ್ವಿ ಯಾದವ್ರ ಪತ್ರವನ್ನು ಕಟುವಾಗಿ ಬಿಜೆಪಿ ಟೀಕಿಸಿದ್ದು ಮಾಧ್ಯಮಗಳನ್ನು ಶಕ್ತಿಶಾಲಿಯಾಗಿ ಉಪಯೋಗಿಸಿದ ಕಾಂಗ್ರೆಸ್ನ ಮಡಿಲಲ್ಲಿ ಕೂತು ತೇಜಸ್ವಿ ಯಾದವ್ ಹೀಗೆ ಮಾತಾಡುತ್ತಿದ್ದಾರೆ ಎಂದು ಹೇಳಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಎಸ್ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ತೇಜಸ್ವಿ ಟ್ವಿಟರ್ ಮೂಲಕ ಪತ್ರ ಬರೆದಿದ್ದಾರೆ.
ಎಲ್ಲ ಪ್ರತಿಪಕ್ಷಗಳನ್ನು ಕೆಳಮಟ್ಟದಲ್ಲಿ ತೋರಿಸುವ ರೀತಿಯಲ್ಲಿ ಪ್ರತಿ ಸಂಜೆಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ಬೆಂಬಿತ ಚ್ಯಾನೆಲ್ಗಳು ಮಾಡುತ್ತಿವೆ. ಇದು ಎಲ್ಲರಿಗೂ ಗೊತ್ತಿರುವ ನಗ್ನ ಸತ್ಯವಾಗಿದೆ ಎಂದು ತೇಜಸ್ವಿ ಹೇಳಿದರು.
ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ತೇಜಸ್ವಿ ಯಾದವ್ರ ಟ್ವೀಟ್ನ್ನು ರಿಟ್ವೀಟ್ ಮಾಡಿದ್ದು #ಃoಥಿಛಿoಣಣ_ಒoಜi_ಒeಜiಚಿ ಎಂಬ ಹ್ಯಾಶ್ ಟ್ರಾಗ್ ಹಾಕಿದ್ದಾರೆ. ಟೈಮ್ಸ್ ನೌ, ರಿಪಬ್ಲಿಕ್ ಟಿವಿ, ಝಿ ನ್ಯೂಸ್ ಮೊದಲಾದ ಸಂಘಪರಿವಾರ ಬೆಂಬಲಿತ ಚ್ಯಾನೆಲ್ಗಳು ಮಾತ್ರವಲ್ಲ ಎಲ್ಲ ಚ್ಯಾನೆಲ್ಗಳ ಬಗ್ಗೆಯೂ ಎಚ್ಚರ ವಹಿಸಬೇಕೆಂದು ತೇಜಸ್ವಿ ಮುನ್ನೆಚ್ಚರಿಕೆ ರವಾನಿಸಿದ್ದಾರೆ.












