ಬಿಜೆಪಿ, ಎನ್‍ಐಎ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ದೂರು ನೀಡಲಿರುವ ತೃಣಮೂಲ ಕಾಂಗ್ರೆಸ್

0
145

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ಬಿಜೆಪಿ ನಾಯಕ ಮತ್ತು ಎನ್‌ಐಎ ಅಧಿಕಾರಿ ನಡುವಿನ ಪಾರ್ಸೆಲ್‌ಗಳ ವಿನಿಮಯದ ಪುರಾವೆಯೊಂದಿಗೆ ಪಕ್ಷವು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲಿದೆ ಎಂದು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಬಿಜೆಪಿ ನಾಯಕ ಜಿತೇಂದ್ರ ತಿವಾರಿ ಅವರು ಎನ್‌ಐಎ ಎಸ್‌ಪಿ ಧಂತಮ್ ಸಿಂಗ್ ಅವರನ್ನು ಅವರ ಕೋಲ್ಕತ್ತಾ ನಿವಾಸದಲ್ಲಿ ಪಾರ್ಸೆಲ್‌ನೊಂದಿಗೆ ಭೇಟಿ ಮಾಡಿದ ಕೆಲವು ದಿನಗಳ ನಂತರ ಬ್ಯಾನರ್ಜಿಯವರ ಈ ಹೇಳಿಕೆಗಳು ಬಂದಿವೆ.

ನಾವು ಖಂಡಿತವಾಗಿಯೂ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದ ಅಭಿಷೇಕ್ ಬ್ಯಾನರ್ಜಿ, ಬಿಜೆಪಿ ನಾಯಕ ಎನ್‌ಐಎ ಎಸ್‌ಪಿ ನಿವಾಸಕ್ಕೆ ಬಿಳಿ ಪ್ಯಾಕೆಟ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿರುವ ಎನ್‌ಐಎ ಎಸ್‌ಪಿ ಧಂತಾ ರಾಮ್ ಸಿಂಗ್ ಅವರ ನಿವಾಸಕ್ಕೆ ಬಿಜೆಪಿ ನಾಯಕ ಜಿತೇಂದ್ರ ತಿವಾರಿ ಭೇಟಿ ನೀಡಿದ್ದಾರೆ ಎಂದು ಆರೋಪಿಸಿದ ಬಳಿಕ ಎನ್‌ಐಎ ಹಲವು ಟಿಎಂಸಿ ನಾಯಕರಿಗೆ ನೋಟಿಸ್ ಕಳುಹಿಸಿದೆ ಎಂದು ಅವರು ಹೇಳಿದರು.

ಎಸ್‌ಪಿ ವಾಸವಿದ್ದ ವಸತಿ ಸಮುಚ್ಚಯದ ಪ್ರವೇಶ ಮತ್ತು ನಿರ್ಗಮನದ ದಾಖಲೆಯನ್ನು ಹೊಂದಿರುವ ರಿಜಿಸ್ಟರ್‌ನ ಪುಟಗಳನ್ನು ಟಿಎಂಸಿ ಸಾರ್ವಜನಿಕಗೊಳಿಸಿತ್ತು. ಬಿಜೆಪಿ ನಾಯಕ ಮತ್ತು ಎನ್‌ಐಎ ಅಧಿಕಾರಿಯ ನಡುವಿನ ಸಭೆಯಲ್ಲಿ ತಮ್ಮ ಪಕ್ಷದ ನಾಯಕರ ವಿರುದ್ಧ ದೊಡ್ಡ ಪಿತೂರಿ ನಡೆದಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.