ಗಲಭೆಗೆ ಪ್ರೇರಣೆ ಆರೋಪ: ಡೊನಾಲ್ಡ್ ಟ್ರಂಪ್ ಉಚ್ಛಾಟನೆಗೆ ಎರಡನೆ ಬಾರಿ ಪ್ರಸ್ತಾವ

0
409

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ ಜನಪ್ರತಿನಿಧಿ ಸಭೆಯಲ್ಲಿ ಡೆಮಕ್ರಾಟರು ಇಂಪೀಚ್ಮೆಂಟ್ ಪ್ರಸ್ತಾವವವನ್ನು ತಂದಿದ್ದು ಟ್ರಂಪ್ ಬೆಂಬಲಿಗರ ಮೂಲಕ ದೇಶದಲ್ಲಿ ಗಲಭೆಗೆ ಶ್ರಮಿಸಿದ್ದಾರೆ ಎಂದು ದೋಷಾರೋಪಣೆ ಮಾಡಲಾಗಿದೆ.

ಕಳೆದ ಬುಧವಾರ ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್ ಮೇಲೆ ಟ್ರಂಪ್‍ ಬೆಂಬಲಿಗರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಟ್ರಂಪ್‍ರನ್ನು ಪದಚ್ಯುತಗೊಳಿಸುವ ಹೊಸ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಆದರೆ ಟ್ರಂಪ್‍ರ ಅಧಿಕಾರವಧಿ ಮುಗಿಯಲು ಕೆಲವು ದಿನಗಳು ಮಾತ್ರ ಇದ್ದು ಟ್ರಂಪ್ ವಿರುದ್ಧ ತರಲಾಗುತ್ತಿರುವ ಎಂಡನೇ ಇಂಪೀಚ್ಮೆಂಟ್ ಪ್ರಸ್ತಾವ ಇದಾಗಿದೆ.

ಸಂವಿಧಾನದ ಅಧಿಕಾರವನ್ನು ಉಪಯೋಗಿಸಿ ಉಪಾಧ್ಯಕ್ಷ ಮೈಕ್ ಪೆನ್ಸ್ ಟ್ರಂಪ್‍ರನ್ನು ಸ್ಥಾನಭ್ರಷ್ಟಗೊಳಿಸಬೇಕೆಂದು ಪ್ರಸ್ತಾವದಲ್ಲಿ ಆಗ್ರಹಿಸಲಾಗಿದ್ದು ನಾಳೆ ಪರಿಗಣನೆಗೆ ಬರಲಿದೆ. ಟ್ರಂಪ್‍ರನ್ನು ಅಧಿಕಾರದಿಂದ ಕೆಳಗಿಳಿಸಲು ಮೈಕ್ ಪೆನ್ಸ್ ಅಸಹಮತ ವ್ಯಕ್ತಿಪಡಿಸಿದರೆ ಇಂಪೀಚ್ಮೆಂಟ್ ಕ್ರಮದತ್ತವಾಗಿ ಡೆಮಕ್ರಾಟರು ಹೋಗುವುದೆಂದು ತೀರ್ಮಾನಿಸಿದ್ದಾರೆ ಎಂಬುದಾಗಿ ನ್ಯಾನ್ಸಿ ಪಲೋಸಿ ಹೇಳಿದರು.

ಆಡಳಿತದ ಕರ್ತವ್ಯಗಳನ್ನು ಮರೆತು ವರ್ತಿಸಿದ ಟ್ರಂಪ್ ವಿರುದ್ಧ ಸಂವಿಧಾನದ 25ನೇ ತಿದ್ದುಪಡಿಯನ್ನು ಉಪಯೋಗಿಸಿ ಉಪಾಧ್ಯಕ್ಷರು ಅಧ್ಯಕ್ಷರನ್ನು ಸ್ಥಾನ ಭ್ರಷ್ಟಗೊಳಿಸಬೇಕೆಂದು ಡೆಮಕ್ರಾಟರು ಆಗ್ರಹಿಸಿದ್ದಾರೆ. ಟ್ರಂಪ್‍ರ ಅಧಿಕಾರವಧಿ ಇದೇ ತಿಂಗಳು ಇಪ್ಪತ್ತನೇ ತಾರೀಕಿಗೆ ಮುಕ್ತಾಯವಾಗಲಿದೆ.