ಟ್ರಂಪ್‍ರ ಫೆಲೆಸ್ತೀನ್‍ನಲ್ಲಿ ಅಲ್‍ ಅಕ್ಸಾ ಇಲ್ಲ

0
795

ವಾಷಿಂಗ್ಟನ್: ಪೂರ್ವ ಜರುಸಲೇಮ್ ಕೇಂದ್ರವಾಗಿರುವ ಇಸ್ರೇಲ್ ಆಕ್ರಮಿಸಿದ ವೆಸ್ಟ್ ಬ್ಯಾಂಕಿನ ಶೇ. 90ರಷ್ಟು ಭಾಗ ಫೆಲಸ್ತೀನ್ ದೇಶಕ್ಕೆ ಸೇರಿದ್ದೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇವೇಳೆ, ಮುಸ್ಲಿಮರ ಪವಿತ್ರ ಕೇಂದ್ರ ಮತ್ತು ಫೆಲಸ್ತೀನಿನ ಕೇಂದ್ರವಾಗಿ  ಪರಿಗಣಿಸಲಾಗುತ್ತಿರುವ ಮಸ್ಜಿದುಲ್ ಅಕ್ಸಾ ಸಹಿತ ಪ್ರದೇಶ ಇದಕ್ಕೆ ಸೇರಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇಸ್ರೇಲಿನ ಟಿವಿ ವರದಿ ಮಾಡಿದೆ.  ಇಂತಹ ಯೋಜನೆಯನ್ನು ರೂಪಿಸಿ ನಕ್ಷೆ ಹೊರತರುವ ಸಿದ್ಧತೆಯನ್ನು ಟ್ರಂಪ್ ಆಡಳಿತ ಕೂಟ ನಡೆಸುತ್ತಿದೆ. ಆದರೆ ಈ ವಿವರಗಳ ಮೂಲ  ನಿಗೂಢವಾಗಿದೆ.

ಇದೇ ವೇಳೆ, ಈ ಯೋಜನೆಯಲ್ಲಿ ವೆಸ್ಟ್ ಬ್ಯಾಂಕಿನಲ್ಲಿ ಇಸ್ರೇಲ್ ಅನಧಿಕೃತವಾಗಿ ಇಟ್ಟುಕೊಂಡ ಯಹೂದಿ ವಲಸೆ ಪ್ರದೇಶವನ್ನು ತೆರವುಗೊಳಿಸಲು ಮತ್ತು ಅಲ್ಲಿನ ನಿರ್ಮಿತಿಗಳನ್ನು ತೆಗೆದುಹಾಕಲು ಸೂಚಿಸಲಾಗಿದೆ. ಮಧ್ಯಪ್ರಾಚ್ಯದ ಶಾಂತಿಯ ಭಾಗವಾಗಿ ಟ್ರಂಪ್ ಇಂತಹ ಸಂದೇಶವನ್ನು ಮುಂದಿರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.