ಇಸ್ರೇಲ್ ನ ನೇತನ್ಯಾಹುವನ್ನು ದ.ಸುಡಾನ್ ಮೇಲೆ ಹಾರಲು ಅನುಮತಿಸಿದ ಅಧ್ಯಕ್ಷ ಒಮರ್-ಅಲ್ ಬಶೀರ್!

0
665

ಕೃಪೆ: Memo
ಕನ್ನಡಕ್ಕೆ: ಆಯಿಷತುಲ್ ಅಫೀಫ
ಸುಡಾನ್  ಅಧ್ಯಕ್ಷ ಒಮರ್ ಅಲ್-ಬಶೀರ್ ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ದಕ್ಷಿಣ ಸುಡಾನ್ ಮೇಲೆ ಹಾರಲು ಅವಕಾಶ ನೀಡಿದ ಆಶ್ಚರ್ಯಕರ ಘಟನೆಯೊಂದು ಘಟಿಸಿರುವುದು ಇಸ್ರೇಲ್ ಮತ್ತು ಸುಡಾನ್ ನಡುವಿನ ಸಂಬಂಧಗಳ ಕುರಿತು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟದೆ .ಸುಡಾನಿನ ವಾಯುಯಾನ ಅಧಿಕಾರಿಗಳು ದಕ್ಷಿಣ ಸುಡಾನ್  ನ  ವಾಯುಪ್ರದೇಶವನ್ನು ನಿಯಂತ್ರಿಸುತ್ತಾರೆ. ಸುಡಾನ್, ಇಸ್ರೇಲ್ ನೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ ಮತ್ತು ಇತರ ಮುಸ್ಲಿಂ ಮತ್ತು ಅರಬ್ ದೇಶಗಳಂತೆ ಇಸ್ರೇಲಿ ವಿಮಾನಗಳು  ಅದರ ವಾಯುಪ್ರದೇಶವನ್ನು ಬಳಸಲು ಅನುಮತಿಸುವುದಿಲ್ಲ.

ಆದರೆ ನೆರೆಯ ಚಾಡ್ ದೇಶಕ್ಕೆ  ಒಂದು ದಿನದ ಭೇಟಿ ನೀಡಿ ಮರಳುತ್ತಿದ್ದ  ನೇತನ್ಯಾಹುವಿನ  ಅಲ್ ಅಲ್ಲೆನ್ ವಿಮಾನವನ್ನು ಖಾರ್ಟೊಮ್  ಅನುಮತಿಸಿತು, ಈ ಮೂಲಕ ಉಭಯ ದೇಶಗಳು 1972 ರ ನಂತರ ಮೊದಲ ಬಾರಿಗೆ ಸಂಬಂಧಗಳನ್ನು ಪುನಃಸ್ಥಾಪಿಸಲು ಒಪ್ಪಿಕೊಂಡವು.

ನೇತನ್ಯಾಹು ಈ ಪ್ರವಾಸವನ್ನು “ಇದು ಅರಬ್ ಮತ್ತು ಮುಸ್ಲಿಂ ಜಗತ್ತಿನಲ್ಲಿ ನಮ್ಮನ್ನು  [ಕ್ರಾಂತಿಕಾರಕ] ಕ್ರಾಂತಿಯ ಒಂದು ಭಾಗವಾಗಿ  ರೂಪಿಸುವ  ಐತಿಹಾಸಿಕ ಮತ್ತು ಪ್ರಮುಖ ಪ್ರಗತಿ ” ಎಂದು ಕರೆದಿದ್ದಾರೆ.

ಇಸ್ರೇಲ್ ಟೈಮ್ಸ್ ಪ್ರಕಾರ,”ಇಸ್ರೇಲ್ ಗೆ ಹೋರಾಟ ವಿಮಾನವು ಸೌತ್ ಸುಡಾನ್ ಮೂಲಕ ಕ್ರಮಿಸಿದೆ ಎಂಬ ಸತ್ಯವನ್ನು  ಟೆಲ್ ಅವಿವ್ ನ  ಬೆನ್-ಗುರಿಯನ್ ವಿಮಾನನಿಲ್ದಾಣದಲ್ಲಿ  ವಿಮಾನವು ಬಂದಿಳಿಯುವುದಕ್ಕೂ ಮುಂಚೆಯೇ ಪ್ರಕಟಿಸಬಾರದು” ಎಂದು  ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಚಾಡ್  ಮತ್ತು ನೆತನ್ಯಾಹು ಜೊತೆಯಲ್ಲಿದ್ದ ವರದಿಗಾರರನ್ನು ಕೇಳಿಕೊಂಡಿದೆ.

ಹಾರಾಟದ ವಿವರಗಳನ್ನು “ಭದ್ರತಾ ಕಾರಣಗಳಿಗಾಗಿ ಮತ್ತು ಸೂಡಾನ್ ಅಧಿಕಾರಿಗಳ ನಿರ್ಧಾರವನ್ನು ಬದಲಿಸಲು ಇತರ ಪಕ್ಷಗಳ ಕೊನೆಯ ನಿಮಿಷದ ಯಾವುದೇ ಪ್ರಯತ್ನಗಳನ್ನು ತಡೆಗಟ್ಟಲು   ರಹಸ್ಯವಾಗಿರಿಸಲಾಗಿತ್ತು ” ಎಂದು ಇಸ್ರೇಲಿ ದಿನಪತ್ರಿಕೆ ವರದಿ ಮಾಡಿದೆ.

ವಿಮಾನವು ಮುಂದುವರಿಯಲು ಅನುಮತಿ ನೀಡಿರುವುದು  ಇಸ್ರೇಲ್ ನೊಂದಿಗೆ  ತನ್ನ ದೇಶದ ಸಂಬಂಧದ ಬಗೆಗಿನ  ಅಲ್-ಬಶೀರ್ ರ  ನಿರ್ಣಯದ ಸಾಕ್ಷಿಯಾಗಿ ಕಂಡುಬರುತ್ತಿದೆ. ಈ ತಿಂಗಳ ಆರಂಭದಲ್ಲಿ  ಕೀನ್ಯಾದ ರಾಜಧಾನಿ ನೈರೋಬಿಯಿಂದ ಟೆಲ್ ಅವಿವ್ ಗೆ  ಹೋಗುವ ದಾರಿಯಲ್ಲಿ ಸುಡಾನ್ ವಾಯುಪ್ರದೇಶದ ಮೇಲೆ ಹಾರಿಹೋಗಲು ಕೆನ್ಯಾದ ರಾಷ್ಟ್ರೀಯ ವಿಮಾನವಾಹಕ ನೌಕೆಯನ್ನು  ಅಲ್-ಬಶೀರ್ ನಿರಾಕರಿಸಿದ್ದರು. “ಇಸ್ರೇಲ್ ನೊಂದಿಗಿನ ಯಾವುದೇ ಸಾಮಾನ್ಯೀಕರಣವನ್ನು” ನಿರಾಕರಿಸಿರುವುದಾಗಿ ಅಲ್-ಬಶೀರ್ ಆ ಸಮಯದಲ್ಲಿ ಹೇಳಿದ್ದರು.

ಅವರ ಪ್ರತಿಕ್ರಿಯೆಯು ಹುಬ್ಬೇರುವಂತೆ ಮಾಡಿದೆ, ಕೆಲವೇ ದಿನಗಳ ಹಿಂದೆ, ಅಲ್-ಬಶೀರ್ ಅವರು ಸುಡಾನ್ ನಲ್ಲಿ  ವಾರಗಳ ಅವಧಿಗೆ ನಡೆದ  ಸರ್ಕಾರ  ವಿರೋಧಿ ಪ್ರತಿಭಟನೆಗಳಿಂದ ದಿಕ್ಕು ತಪ್ಪಿರುವ ಸ್ಥಿರತೆಯನ್ನು ಖಚಿತಪಡಿಸಲು ಇಸ್ರೇಲ್ ನೊಂದಿಗಿನ  ಸಂಬಂಧಗಳ ಸಾಮಾನ್ಯೀಕರಣವನ್ನು   ಆರಂಭಿಸುವಂತೆ  ಸಲಹೆ ಪಡೆದಿದ್ದರು ಎಂಬುವುದನ್ನು ಪ್ರಕಟಪಡಿಸಿದ್ದರು. ಅಂತಹ ಸಲಹೆಯನ್ನು ನೀಡಿದವರು ಯಾರು ಎಂಬುದನ್ನು ಅಲ್-ಬಶೀರ್ ಅವರು ಬಹಿರಂಗಪಡಿಸಿಲ್ಲ.

ನವೆಂಬರ್ ನಲ್ಲಿ , ಸೂಡಾನ್ ಆಡಳಿತದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಅಬ್ದೆಲ್ ಸಖಿ ಅಬ್ಬಾಸ್ ಅವರು ನೇತನ್ಯಾಹು ಖಾರ್ತೂಮ್ ಗೆ  ಭೇಟಿ ನೀಡುವ ವದಂತಿಗಳನ್ನು ನಿರಾಕರಿಸಬೇಕಾಯಿತು.ಮೂಲತಃ ಇಸ್ರೇಲ್ ನ  ಸಾರ್ವಜನಿಕ ಪ್ರಸಾರಕ ಕನ್-ಅಸ್  ಮಾಡಿದ ವರದಿಯನ್ನು- “ಸಂಪೂರ್ಣವಾಗಿ ಸುಳ್ಳು” ಎಂದು ಅಬ್ಬಾಸ್ ಕರೆದಿದ್ದರು.  ಕೆಲ ದಿನಗಳ ನಂತರ, ಇಸ್ರೇಲಿ ಮತ್ತು ಸೂಡಾನ್  ಪ್ರತಿನಿಧಿಗಳು ಸುಡಾನ್ ಗೆ  ಇಸ್ರೇಲ್  ನೆರವು ನೀಡುವ ಸಲುವಾಗಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆ ಕುರಿತು  ಚರ್ಚಿಸಲು 2017 ರಲ್ಲಿ ಟರ್ಕಿಯ ಇಸ್ತಾಂಬುಲ್ನಲ್ಲಿ ರಹಸ್ಯ ಸಭೆಯನ್ನು ನಡೆಸಿದ್ದರು ಎಂಬುವುದು ಬಹಿರಂಗಗೊಂಡಿತ್ತು.

ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್ ಸಾಮಾನ್ಯೀಕರಣದ ಪ್ರಮುಖ  ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿದೆ, ಇದು ನೇತನ್ಯಾಹು ಮತ್ತು ಇತರ ಇಸ್ರೇಲಿ  ಸಂಬಂಧಿತರು  ಒಮಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಈಗ ಚಾಡ್ ಗೆ  ಭೇಟಿ ನೀಡುವಂತೆ ಮಾಡಿದೆ. ಇಸ್ರೇಲ್ ಮತ್ತು ಅದರ ಮುಖ್ಯ ಮಿತ್ರ ರಾಷ್ಟ್ರ ಯುಎಸ್,ಇತರ ಪ್ರದೇಶಗಳ ಕಡೆಗೆ  ಏಕೀಕರಣದ ಇಸ್ರೇಲ್ ನ ಈ ನಡೆಯನ್ನು  ಧನಾತ್ಮಕ ಹೆಜ್ಜೆಯಾಗಿ ಚಿತ್ರಿಸಲು ಉತ್ಸುಕರಾಗಿದ್ದರೂ, ಅನೇಕರು ಈ ಉಪಕ್ರಮವನ್ನು ವಿರೋಧಿಸುತ್ತಿದ್ದಾರೆ.

ಮಾಲಿಯಲ್ಲಿ ಉಗ್ರಗಾಮಿ ಗುಂಪು ದಾಳಿಯಿಂದ ಚಾಡ್ ನ  ಹತ್ತು  ಯುಎನ್ ಶಾಂತಿಪಾಲಕರು ಕೊಲ್ಲಲ್ಪಟ್ಟರು ಮತ್ತು  25 ರಷ್ಟು ಮಂದಿ ಗಾಯಗೊಂಡರುಅಲ್-ಖೈದಾದ ಅಂಗಸಂಸ್ಥೆಯಾದ ಜಮಾ’ಸ್ ನಸ್ರತ್ ಅಲ್-ಇಸ್ಲಾಮ್ ವಲ್ ಮುಸ್ಲಿಮೀನ್ ಅಥವಾ “ಇಸ್ಲಾಂ ಮತ್ತು ಮುಸ್ಲಿಮರ ವಿಜಯಕ್ಕಾಗಿ ಗುಂಪು”- ನೆತನ್ಯಾಹು ಚಾಡ್ ಭೇಟಿ  ಮತ್ತು ಚಾಡಿಯನ್ ಅಧ್ಯಕ್ಷ ಇಡ್ರಿಸ್ ಡೆಬಿಯವರ ಇಸ್ರೇಲ್ ನೊಂದಿಗಿನ  ಸಂಬಂಧವನ್ನು ಪುನಃಸ್ಥಾಪಿಸುವ ನಿರ್ಧಾರಕ್ಕೆ “ಪ್ರತಿಕ್ರಿಯೆಯಾಗಿ” ಕಾರ್ಯನಿರ್ವಹಿಸಿದ್ದಾಗಿ ಹೇಳಿಕೊಂಡಿದೆ. ಮಾಲಿಯ ಉತ್ತರಕಿರುವ ಕಿಡಾಲ್ ಪ್ರದೇಶದ ಅಗುಲ್ಹೋಕ್ ಬಳಿ  ದಾಳಿ ಸಂಭವಿಸಿದೆ,2012 ರಲ್ಲಿ ಸ್ಥಳೀಯ ಸೈನಿಕ ಪಡೆಗಳು ಈ ಪ್ರದೇಶದ ನಿಯಂತ್ರಣವನ್ನು ತೆಗೆದುಕೊಂಡ ನಂತರ ಹಿಂಸಾಚಾರದಿಂದ ಬಳಲುತ್ತಿದೆ.

ವರದಿ ಪ್ರಕಾರ, ಮಾಲಿಯಲ್ಲಿರುವ ವಿಶ್ವಸಂಸ್ಥೆ ನಿಯೋಗ  ಹೀಗೆ ಹೇಳಿದೆ: “ಮಹಾ ಕಾರ್ಯದರ್ಶಿ [ಆಂಟೋನಿಯೊ ಗುಟರ್ರೆಸ್] ರು  ಅಂತಹ ಕೃತ್ಯಗಳು ವಿಶ್ವಸಂಸ್ಥೆಯ ನಿರ್ಧಾರವನ್ನು ಕುಂಠಿತಗೊಳಿಸುವುದಿಲ್ಲ ಎಂದು ಹೇಳಿದ್ದಾರೆ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಟ್ಟಲು ಶ್ರಮಿಸುವ ಮಾಲಿ ಜನರ ಮತ್ತು ಸರ್ಕಾರದ ಪ್ರಯತ್ನವನ್ನು  ಬೆಂಬಲಿಸುವುದಾಗಿ ಮುಂದುವರೆಸುವುದಾಗಿ ಹೇಳಿದೆ”

ಚಾಡ್ ಅಥವಾ ಇಸ್ರೇಲಾಗಲಿ ದಾಳಿಯ ಬಗ್ಗೆ  ಯಾವುದೇ ಹೇಳಿಕೆಗಳನ್ನು ನೀಡಲಿಲ್ಲ.