ಕೊರೋನ ವ್ಯಾಕ್ಸಿನ್ ತಯಾರಿಕೆಯನ್ನು ರಾಜಕೀಯಗೊಳಿಸಲಾಗುತ್ತಿದೆ- ಫೈಝರ್ ವ್ಯಾಕ್ಸಿನ್ ಮುಖ್ಯಸ್ಥರಿಂದ ಆರೋಪ

0
441

ಸನ್ಮಾರ್ಗ ವಾರ್ತೆ

ಜಿನಿವಾ,ಡಿ.9: ಕೊರೊನ ವ್ಯಾಕ್ಸಿನ್ ನಿರ್ಮಾಣವನ್ನು ದೊಡ್ಡ ರೀತಿಯಲ್ಲಿ ರಾಜಕೀಕರಿಸಲಾಗುತ್ತಿದೆ ಎಂದು ಫೈಝರ್ ಚೀಫ್ ಎಕ್ಸಿಕ್ಯೂಟಿವ್ ಅಲ್ಬರ್ಟ್ ಬೊರುಲ ಆರೋಪಿಸಿದ್ದಾರೆ. ವ್ಯಾಕ್ಸಿನ್ ಕುರಿತು ಜನರಲ್ಲಿ ಹಲವು ಆತಂಕಗಳಿವೆ. ಆದರೆ, ಇಂತಹ ಆತಂಕಗಳು ನಿರಾಧಾರ. ತಬಹಳ ಬೇಗನೆ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿದ್ದೇವೆ. ಆದುದರಿಂದ ವ್ಯಾಕ್ಸಿನ್ ನಿರ್ಮಾಣ ದೊಡ್ಡ ರೀತಿಯಲ್ಲಿ ರಾಜಕೀಕರಿಸುವ ಕೆಲಸ ನಡೆಯುತ್ತಿದೆ ಫೈಝರ್ ಮುಖ್ಯಸ್ಥ ಅಲ್ಬರ್ಟ್ ಬೊರುಲ ಹೇಳಿದರು.

ವ್ಯಾಕ್ಸಿನ್ ಕುರಿತು ರಾಜಕೀಯ ಚರ್ಚೆ ಆಗುತ್ತಿದೆ. ಅದಕ್ಕೂ ವಿಜ್ಞಾನಕ್ಕೂ ಯಾವುದೇ ಸಂಬಂಧ ಇಲ್ಲ. ಸುರಕ್ಷಿತ ವ್ಯಾಕ್ಸಿನ್ ಜನರಿಗೆ ತಗಲುಪಿಸುವುದಕ್ಕೆ ಕಂಪೆನಿ ಆದ್ಯತೆ ಕೊಡಲಿದೆ. ನಿಯಂತ್ರಣ ಏಜೆನ್ಸಿಗಳು ಈ ವಿಷಯದಲ್ಲಿ ಎಚ್ಚರಿಕೆ ವಹಿಸಿವೆ ಎಂದು ಅವರು ಹೇಳಿದರು.

ಹೊಸ ತಂತ್ರಜ್ಞಾನ ಉಪಯೋಗಿಸಿ ಪರೀಕ್ಷೆ ಮಾಡಿರುವುದು ಈಗ ಇರುವ ವ್ಯಾಕ್ಸಿನಷ್ಟೇ. ಸುರಕ್ಷಿತತೆ ಈ ತಂತ್ರಜ್ಞಾನಕ್ಕೂ ಇದೆ. ಉನ್ನತ ಮಟ್ಟದಲ್ಲಿ ವ್ಯಾಕ್ಸಿನ್ ಪರೀಕ್ಷೆ ಮಾಡಲಾಗಿದೆ ಫೈಸರ್ ಸಿಇಒ ಹೇಳಿದರು.