ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಅ,8: ವಿಶ್ವಸಂಸ್ಥೆಯೇ ಬೃಹತ್ ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಅಂಟಾನಿಯೊ ಗುಟರಸ್ ಹೇಳಿದ್ದು, 230 ಮಿಲಿಯನ್ ಡಾಲರ್ ಕೊರತೆಯನ್ನು ಎದುರಿಸುತ್ತಿದೆ. ಅಕ್ಟೋಬರ್ ಕೊನೆಯಲ್ಲಿ ದೇಣಿಗೆಗಳೇ ಇಲ್ಲದಂತಾಗುವ ಪರಿಸ್ಥಿತಿಯಿದೆ ಎಂದು ಅವರು ತಿಳಿಸಿದರು.
ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ನೀಡಬೇಕಾಗಿದ್ದ ಹಣದಲ್ಲಿ ಶೇ.70ರಷ್ಟು ಮಾತ್ರ ನೀಡಿದೆ. ಇದು 2019 ಬಜೆಟ್ಗೆ ಹೋಲಿಸುವಾಗ ಆರ್ಥಿಕ ಕೊರತೆಗೆ ಕಾರಣವಾಗಿದೆ. ವಿಶ್ವಸಂಸ್ಥೆಯಲ್ಲಿ 37,00 ಉದ್ಯೋಗಿಗಳಿಗೆ ಪತ್ರ ಬರೆಯಲಾಗಿದೆ. ಮುಂದಿನ ತಿಂಗಳಿಂದ ಹಣದ ಕೊರತೆ ಆಗಲಿದೆ ಎಂದು ಅವರು ತಿಳಿಸಿದರು.
ಹಣ ಕೊರತೆಯಿರುವುದರಿಂದ ಸ್ಮಮೇಳನ, ಸಮಾಲೋಚನೆ, ಅಧಿಕೃತ ಪ್ರವಾಸ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ವಿಶ್ವಸಂಸ್ಥೆಯ ಹಣಕಾಸು ಸಮಸ್ಯೆ ಬಗೆಹರಿಸುವುದು ಸದಸ್ಯ ರಾಷ್ಟ್ರಗಳ ಜವಾಬ್ದಾರಿ ಎಂದು ಅವರು ಹೇಳಿದರು.












