ಸನ್ಮಾರ್ಗ ವಾರ್ತೆ
ಮುಂಬೈ,ಅ.8: ಅಪಘಾತದಲ್ಲಿ ಮೃತಪಟ್ಟ ಭಿಕ್ಷುಕನ ಗುಡಿಸಲಲ್ಲಿ 8.77 ಲಕ್ಷ ರೂಪಾಯಿ ಫಿಕ್ಸೆಡ್ ಡಿಪೊಸಿಟ್ ದಾಖಲೆಗಳು, 1.5 ಲಕ್ಷ ರೂಪಾಯಿ ಮೌಲ್ಯದ ನಾಣ್ಯಗಳು ಲಭಿಸಿದೆ.
ಬಿರ್ಜು ಚಂದ್ರ ಆಝಾದ್ ಕಳೆದ ದಿವಸ ಅಪಘಾತದಲ್ಲಿ ಮೃತಪಟ್ಟಿದ್ದರು. ಸಾವಿನ ಕಾರಣ ತಿಳಿಯಲು ಸಂಬಂಧಿಕರನ್ನು ಹುಡುಕುತ್ತಾ ಪೊಲೀಸರು ಗೊವಂಡಿಯ ಜೋಪಡಿ ಪಟ್ಟಿಯ ಒಂದು ಕೋಣೆಯ ಮನೆಗೆ ಹೋಗಿದ್ದರು.
ಬಿರ್ಜು ಚಂದ್ರ ಆಝಾದ್ ಕೋಣೆಯಲ್ಲಿ ಒಬ್ಬರೇ ಇರುತ್ತಿದ್ದರು. ಮನೆಯ ತಪಾಸಣೆ ಮಾಡಿದಾಗ ಲಕ್ಷಾಂತರ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಕಂಡು ಬಂತು. ವಿವಿಧ ಬ್ಯಾಂಕ್‍ಗಳಲ್ಲಿ ಠೇವಣೆ ಇಡಲಾಗಿತ್ತು. ಪೊಲೀಸರು ನಾಣ್ಯವನ್ನು ಎಣಿಸಲು ಗಂಟೆಗಟ್ಟಲೆ ಸಮಯ ವಿನಿಯೋಗಿಸಬೇಕಾಯ್ತು. ಬಿರ್ಜು ಚಂದ್ರರ ಸಂಬಂಧಿಕರಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.












