ಶೇ.55ರಷ್ಟು ಪತ್ರಕರ್ತರು ಸಂಘರ್ಷ ರಹಿತ ಸ್ಥಳಗಳಲ್ಲಿ ಕೊಲೆಯಾಗಿದ್ದಾರೆ- ಯುನೆಸ್ಕೊ ವರದಿ

0
537

ಸನ್ಮಾರ್ಗ ವಾರ್ತೆ

ಲಂಡನ್,ನ.2: ಶೇ.55ರಷ್ಟು ಪತ್ರಕರ್ತರು ಸಂಘರ್ಷರಹಿತ ಪ್ರದೇಶಗಳಲ್ಲಿ ಕೊಲೆಯಾಗಿದ್ದಾರೆ ಎಂದು ಯುನೆಸ್ಕೊ ವರದಿಯಲ್ಲಿ ಬಹಿರಂಗವಾಗಿದೆ.

2017 ಮತ್ತು 2018ರ ಅವಧಿಯಲ್ಲಿ ಶೇ.55ರಷ್ಟು ಪತ್ರಕರ್ತರ ಕೊಲೆಗಳು ಹೀಗೆಯೇ ನಡೆದಿವೆ. ಇತ್ತೀಚೆಗೆ ರಾಜಕೀಯ ಅಕ್ರಮ, ಅಪರಾಧ, ಭ್ರಷ್ಟಾಚಾರ ಬಹಿರಂಗಕ್ಕೆ ತಂದ ಪತ್ರಕರ್ತರೇ ಹೆಚ್ಚಾಗಿ ಕೊಲೆಯಾಗಿದ್ದಾರೆ. 2006ರಿಂದ 2018ರವರೆಗೆ ಜಗತ್ತಿನಾದ್ಯಂತ 1109 ಪತ್ರಕರ್ತರ ಹತ್ಯೆ ನಡೆದಿದೆ.ಪತ್ರಕರ್ತರ ಕೊಲೆ ಪ್ರಕರಣದ ಶೇ.90ರಷ್ಟು ಅಪರಾಧಿಗಳು ಶಿಕ್ಷೆಗೊಳಗಾಗಿಯೇ ಇಲ್ಲ ಎಂದು ಯುನೆಸ್ಕೊ ವರದಿಯಲ್ಲಿ ಬೆಟ್ಟು ಮಾಡಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ 2014ರಿಂದ 2018ರವರೆಗೆ ಪತ್ರಕರ್ತರ ವಿರುದ್ಧ ದಾಳಿಯಲ್ಲಿ ಶೇ.18ರಷ್ಟು ಹೆಚ್ಚಳವಾಗಿದೆ. ಅರಬ್ ದೇಶಗಳಲ್ಲಿ ಪತ್ರಕರ್ತರ ವಿರುದ್ಧ ಹೆಚ್ಚು ದಾಳಿ ನಡೆದಿದ್ದು, ಲ್ಯಾಟಿನ್ ಅಮೆರಿಕ, ಕೆರಿಬಿಯನ್ ದೇಶಗಳು, ಏಷ್ಯ-ಪೆಸಿಫಿಕ್ ರಾಷ್ಟ್ರಗಳು ನಂತರದ ಸ್ಥಾನದಲ್ಲಿವೆ.

ಪತ್ರಕರ್ತರ ವಿರುದ್ಧ ದಾಳಿಯನ್ನು ಕೊನೆಗೊಳಿಸಲಿಕ್ಕಾಗಿ ನವೆಂಬರ್ ಎರಡನ್ನು ಎಲ್ಲ ವರ್ಷವೂ ವಿಶೇಷ ದಿನವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಯುನೆಸ್ಕೋ ಪತ್ರಕರ್ತರ ಹತ್ಯೆಗಳ ಕುರಿತ ವರದಿಯನ್ನು ಬಹಿರಂಗಪಡಿಸಿದೆ. ಈ ವರ್ಷ ಜನೆವರಿ ಯಿಂದ ಅಕ್ಟೋಬರ್‌ ವರೆಗಿನ ಅವಧಿಯಲ್ಲಿ ಜಗತ್ತಿನಲ್ಲಿ 43 ಪತ್ರಕರ್ತರು ಕೊಲೆಯಾಗಿದ್ದಾರೆ.