ದೇಶದಲ್ಲಿ ಮೊದಲ ಕೊರೋನಾ ಲಸಿಕೆ ಪಡೆದ ದೆಹಲಿಯ ಪೌರ ಕಾರ್ಮಿಕ

0
478

ಸನ್ಮಾರ್ಗ ವಾರ್ತೆ

ದೆಹಲಿ: ಭಾರತದ ಮೊದಲ ಕರೋನ ವೈರಸ್ ಲಸಿಕೆಯನ್ನು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಸಮ್ಮುಖದಲ್ಲಿ ಇಂದು ಏಮ್ಸ್ ದೆಹಲಿಯಲ್ಲಿ ನೈರ್ಮಲ್ಯ ಕೆಲಸಗಾರ ಮನೀಶ್ ಕುಮಾರ್ ಅವರಿಗೆ ನೀಡಲಾಯಿತು.

ಈ ಮೂಲಕ ದೇಶದ ಮೊದಲ ಕೊರೋನಾ ಲಸಿಕೆ ಪಡೆದ ಮೊದಲ ಪ್ರಜೆಯಾಗಿ ಮನೀಶ್ ಕುಮಾರ್ ಗುರುತಿಸಲ್ಪಟ್ಟಿದ್ದಾರೆ. ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು ಕೂಡ ಇದೇ ವೇಳೆ ಕೋವಿಡ್ ಲಸಿಕೆಯನ್ನು ಪಡೆದರು. 3 ಲಕ್ಷಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಇಂದು ಕೊರೋನ ವೈರಸ್ ಲಸಿಕೆಯನ್ನು ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹಲವಾರು ವಿವಾದಗಳ ಬಳಿಕ ಕೋರೋನಾ ಲಸಿಕೆ ನೀಡುವ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿಂದು ಚಾಲನೆ ನೀಡಿದ್ದಾರೆ.