ಉತ್ತರಾಖಂಡದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ: 4 ಲಕ್ಷ ಉದ್ಯೋಗ, 500 ರೂಪಾಯಿಗೆ ಅಡುಗೆ ಅನಿಲ ಭರವಸೆ

0
462

ಸನ್ಮಾರ್ಗ ವಾರ್ತೆ

ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಪ್ರಿಯಾಂಕಾ ಗಾಂಧಿ ಬಿಡಗಡೆಗೊಳಿಸಿದ್ದಾರೆ. ಇದರಲ್ಲಿ ಪೊಲೀಸ್ ಇಲಾಖೆಯಲ್ಲಿ ಶೇ.40ರಷ್ಟು ಮಹಿಳಾ ಮೀಸಲಾತಿ, 4 ಲಕ್ಷ ಉದ್ಯೋಗ, ಅಡುಗೆ ಅನಿಲ 500 ರೂಪಾಯಿಗೆ ಸಿಗುವಂತೆ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಣಾಳಿಕೆಗೆ ‘ಉತ್ತರಾಖಂಡ್ ಸ್ವಾಭಿಮಾನ್ ಪ್ರತಿಜ್ಞಾ ಪತ್ರ್’ ಎಂದು ಹೆಸರಿಸಲಾಗಿದ್ದು ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ನಡೆದ ವರ್ಚುವಲ್ ರ್ಯಾಲಿಯಲ್ಲಿ ಪ್ರಣಾಳಿಕೆ ಬಿಡುಗಡೆ ಆಗಿದೆ. ಎಪ್ಪತ್ತು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಏನೂ ಮಾಡಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಮತದಾನವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಬದಲಾವಣೆಗೆ ಮತದಾನ ದೊಡ್ಡ ಆಯುಧವಾಗಿದೆ ಎಂದೂ ಪ್ರಿಯಾಂಕಾ ಗಾಂಧಿ ಹೇಳಿದರು.

ಕೊರೋನದ ಎರಡನೆ ಅಲೆಯಲ್ಲಿ ದೇಶ ಕಠಿಣ ಪರಿಸ್ಥಿತಿ ಎದುರಿಸಿತು. ಆಕ್ಸಿಜನ್ ವ್ಯಾಕ್ಸಿನ್ ಕೇಂದ್ರ ಸರಕಾರ ವಿದೇಶಗಳಿಗೆ ರಫ್ತು ಮಾಡಿತ್ತು ಎಂದು ಪ್ರಿಯಾಂಕಾ ತಿಳಿಸಿದರು. ಜನಸಾಮಾನ್ಯರಲ್ಲಿ ಭರವಸೆ ಮೂಡಿಸುವ ಯಾವುದೂ ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿಲ್ಲ ಎಂದು ಅವರು ಹೇಳಿದರು. ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಡುವೆ ಈ ಸಲದ ಚುನಾವಣೆಯಲ್ಲಿ ಪೈಪೋಟಿ ಇದೆ. ಬಿಜೆಪಿ ಮತ್ತೊಮ್ಮೆ ಗೆದ್ದು ಅಧಿಕಾರ ಗಳಿಸುವ ಯತ್ನ ನಡೆಸುತ್ತಿದೆ.