ಉತ್ತರಾಖಂಡ: ಮದ್ರಸ ಬೋರ್ಡ್ ರದ್ದು

0
328

ಸನ್ಮಾರ್ಗ ವಾರ್ತೆ

ಮದರಸಾ ಬೋರ್ಡನ್ನು ರದ್ದುಪಡಿಸಲು ಉತ್ತರ ಖಂಡದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಮೂಲಕ ದೇಶದಲ್ಲಿಯೇ ಮದ್ರಸ ಬೋರ್ಡನ್ನು ರದ್ದುಪಡಿಸಿದ ಮೊಟ್ಟಮೊದಲ ರಾಜ್ಯವಾಗಿ ಗುರುತಿಸಿಕೊಳ್ಳಲಿದೆ. ಮದರಸ ಬೋರ್ಡ್ ಮತ್ತು ರಾಜ್ಯದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಮುಖ್ಯ ವಾಹಿನಿಯ ಶಿಕ್ಷಣದೊಂದಿಗೆ ಜೋಡಿಸಲಾಗುವುದು. ಈ ಬಗೆಗಿನ ಪ್ರಸ್ತಾಪಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಈ ಮೂಲಕ ಮದ್ರಸ ಹಾಗೂ ಅಲ್ಪಸಂಖ್ಯಾತರು ನಡೆಸುತ್ತಿರುವ ಶಾಲೆಗಳ ವಿಷಯದಲ್ಲಿ ಭಾರಿ ದೊಡ್ಡ ಬದಲಾವಣೆಗೆ ಉತ್ತರಖಂಡ ಸರಕಾರ ಮುಂದಾಗಿದೆ.

ಎಲ್ಲಾ ಮದ್ರಸಗಳು ಉತ್ತರಖಂಡದ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ ನಿಂದ ಮಾನ್ಯತೆ ಪತ್ರವನ್ನು ಇನ್ನು ಮುಂದೆ ಪಡಕೊಳ್ಳಬೇಕಾಗಿದೆ. ಈ ಮೂಲಕ ಮದರಸ ಬೋರ್ಡ್ ಅಂತ್ಯವಾಗಿದೆ. ಈ ಬೆಳವಣಿಗೆಯು ಸಮಾನತೆ ಮತ್ತು ಆಧುನಿಕ ಶಿಕ್ಷಣವನ್ನು ಪಡಕೊಳ್ಳುವ ವಿಷಯದಲ್ಲಿ ಐತಿಹಾಸಿಕ ಕ್ರಮ ಎಂದು ಉತ್ತರಾಖಂಡದ ಮುಖ್ಯಮಂತ್ರಿ , ಪುಷ್ಕರ ಸಿಂಗ್ ಧಾಮಿ ಹೇಳಿದ್ದಾರೆ. 2026 ಶೈಕ್ಷಣಿಕ ವರ್ಷದಿಂದ ಎಲ್ಲಾ ಅಲ್ಪಸಂಖ್ಯಾತ ಶಾಲೆಗಳು ನ್ಯಾಷನಲ್ ಕರಿಕುಲಮ್ ಫ್ರೆಮ್ ವರ್ಕ್ ಮತ್ತು ನ್ಯಾಷನಲ್ ಎಜುಕೇಶನ್ ಪಾಲಿಸಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಉತ್ತರಾಖಂಡ ಸರ್ಕಾರದ ನಿರ್ಧಾರದ ವಿರುದ್ಧ ಮುಸ್ಲಿಮರು ಮತ್ತು ಮಾನವ ಹಕ್ಕು ಕಾರ್ಯಕರ್ತರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವು ಸಾಂಪ್ರದಾಯಿಕ ಧಾರ್ಮಿಕ ಶಿಕ್ಷಣವನ್ನು ಮುಸ್ಲಿಮರಿಗೆ ನಿರಾಕರಿಸಬಹುದು ಮತ್ತು ಮದರಸಗಳ ಸಸ್ವಾಯತ್ತತೆಯನ್ನು ಕಸಿಯಬಲ್ಲದು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ತಗಾದೆ ಎತ್ತಿದೆ. ಈ ಕ್ರಮವು ಇಸ್ಲಾಮಿ ಅಧ್ಯಯನ ನಡೆಸುವುದಕ್ಕೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ ಒದಗಿಸಬಹುದು ಎಂದು ಅದು ಹೇಳಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುಸ್ಲಿಂ ಸಮುದಾಯದ ಜೊತೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದೆ.