ಉತ್ತರಾಖಂಡ: ಬಲವಂತದ ಮತಾಂತರಕ್ಕೆ 10 ವರ್ಷ ಜೈಲು ಶಿಕ್ಷೆ

0
171

ಸನ್ಮಾರ್ಗ ವಾರ್ತೆ

ಡೆಹ್ರಾಡೂನ್: ಬಲವಂತದ ಮತಾಂತರವನ್ನು ಹತ್ತು ವರ್ಷದವರೆಗೆ ಜೈಲು ಶಿಕ್ಷೆ ಸಿಗುವ ಅಪರಾಧವನ್ನಾಗಿ ಉತ್ತರಾಖಂಡ ಸರಕಾರ ಮಾಡಿದೆ. ಮತಾಂತರ ವಿರೋಧಿ ಕಾನೂನಿಗೆ ತಿದ್ದುಪಡಿ ತಂದು ಶಿಕ್ಷೆಯ ಅವಧಿಯನ್ನು ಹೆಚ್ಚಿಸುವುದಕ್ಕೆ ಉತ್ತರಾಖಂಡ ಪುಷ್ಕರ್ ಸಿಂಗ್ ಧಾಮಿಯವರ ಸಚಿವ ಸಂಪುಟ ಅನುಮೋದನೆ ನೀಡಿದೆ. ಜೊತೆಗೆ ನೈನಿತಾಲ್‍ನಿಂದ ಹಲ್‍ದ್ವಾನಿಗೆ ಉತ್ತರಾಖಂಡ ಹೈಕೋರ್ಟಿನ ಸ್ಥಳಾಂತರಕ್ಕೂ ಸಚಿವ ಸಂಪುಟ ಅನುಮತಿಸಿದೆ.

ಮತಾಂತರ ವಿರೋಧಿ ಕಾನೂನಿನಲ್ಲಿ ತಿದ್ದುಪಡಿಗೆ ವಿಧಾನಸಭೆಯಲ್ಲಿ ಕಾನೂನು ರೂಪಿಸಲು ಸರಕಾರ ನಿರ್ಧರಿಸಿದೆ. 2018ರ ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಕಾನೂನು ಪ್ರಕಾರ ಬಲವಂತ, ವಂಚನೆಯ ಮತಾಂತರಗಳಿಗೆ ಐದು ವರ್ಷ ಶಿಕ್ಷೆ ಇತ್ತು. ಈಗ ತಿದ್ದುಪಡಿ ಮಾಡುವ ಮೂಲಕ ಶಿಕ್ಷಾ ಅವಧಿಯನ್ನು ಹತ್ತು ವರ್ಷಕ್ಕೆ ಹೆಚ್ಚಿಸುವುದು ಸರಕಾರದ ನಿರ್ಧಾರ. ಇದೇ ವೇಳೆ ಹೈಕೋರ್ಟ್ ಸ್ಥಳಾಂತರ ಪ್ರಕ್ರಿಯೆಗೆ ವಕೀಲರ ಒಂದು ವಿಭಾಗ ವಿರೋಧಿಸುತ್ತಿದೆ.