ಸನ್ಮಾರ್ಗ ವಾರ್ತೆ
ಡೆಹ್ರಾಡೂನ್,ಫೆ.8: ಉತ್ತರಾಖಂಡದ ಚಮೇಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟ ದುರಂತದಲ್ಲಿ 14 ಮಂದಿಯ ಮೃತದೇಹಗಳು ಪತ್ತೆಯಾಗಿದೆ. 170 ಮಂದಿ ಈಗಲೂ ಪತ್ತೆಯಾಗಿಲ್ಲ. ಆಲಕಾನಂದ, ದೌಲಿಗಂಗ ನದಿಗಳು ಉಕ್ಕಿಹರಿಯುವಿಕೆಯು ದುರಂತದ ತೀವ್ರತೆಗೆ ಕಾರಣವಾಗಿದ್ದು ನೆರೆಯಲ್ಲಿ ಐದು ಸೇತುವೆ, ಹಲವಾರು ಮನೆಗಳು, ವಿದ್ಯುತ್ ನಿಲಯ ನಾಶವಾಗಿದೆ. ಜಲ ವಿದ್ಯುತ್ ಪ್ಲಾಟಂನಲ್ಲಿ ಕೆಲಸ ನಿರತ 148 ಮಂದಿ ನಾಪತ್ತೆಯಾಗಿದ್ದಾರೆ.
ಇದೇ ವೇಳೆ, ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಸಿಲುಕಿದ 12 ಮಂದಿಯನ್ನು ಐಟಿಬಿಪಿ ತಂಡ ಪಾರು ಮಾಡಿದೆ. ಎರಡನೇ ಸುರಂಗದಲ್ಲಿ ಮೂವತ್ತರಷ್ಟು ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸುರಂಗದ ಉದ್ದ 2.5 ಉದ್ದವಿದೆ. ಇದರೊಳಗೆ ಸಿಲುಕಿದವರನ್ನು ಪಾರು ಮಾಡುವ ಯತ್ನ ನಡೆಯುತ್ತಿದೆ.ನದಿಯ ನೆರೆಯಿಂದ ರಕ್ಷಣಾಕಾರ್ಯಕ್ಕೆ ಕೂಡ ಹಲವು ಕಡೆ ಅಡಚಣೆಯಾಗಿದೆ. ಇಲ್ಲಿ ಭೂ, ನೌಕಾ ಸೇನೆಗಳು ಹೆಚ್ಚು ಪರಿಶ್ರಮಿಸುತ್ತಿವೆ.
ಮೃತರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿಯಂತೆ ಸಹಾಯಧನವನ್ನು ಉತ್ತರಾಖಂಡ ಸರಕಾರ ಘೋಷಿಸಿದೆ. ಪ್ರಧಾನಿಯ ದುರಂತ ಪರಿಹಾರ ನಿಧಿಯಲ್ಲಿ ಎರಡು ಲಕ್ಷ ರೂಪಾಯಿ ನೀಡಲಾಗುವುದು. ಗಂಭೀರವಾಗಿ ಗಾಯಗೊಂಡವರಿಗೆ 50,000ರೂಪಾಯಿ ಪರಿಹಾರ ಘೋಷಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ಅಗತ್ಯ ಸಹಾಯ ನೀಡಲು ವಿಶ್ವಸಂಸ್ಥೆ ಮುಂದೆ ಬಂದಿದೆ.












