ಉತ್ತರಪ್ರದೇಶ: ಪರ್ಸನಲ್ ಲಾ ಬೋರ್ಡ್ ನ ದಾರುಲ್ ಕಝಕ್ಕೆ ಪರ್ಯಾಯವಾಗಿ ಬಿಜೆಪಿಯಿಂದ ದಾರುಲ್ ಕಝ?

0
834

ಲಖನೌ: ತಲಾಕ್ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳದಿರುವ ಹಿನ್ನೆಲೆಯಲ್ಲಿ ಉತ್ತರಾಪದೇಶದಇಸ್ಲಾಮಿಕ್ ವಿದ್ವಾಂಸರು, ಮುಫ್ತಿಗಳು ಮತ್ತು ರಾಜ್ಯದಲ್ಲಿ ತ್ರಿವಳಿ ತಲಾಕ್ ಸಂತ್ರಸ್ತರ ಪ್ರಕರಣಗಳನ್ನು ವಹಿಸಿಕೊಳ್ಳುವ ವಕೀಲರನ್ನು ಸೇರಿಸಿ ಪ್ರತ್ಯೇಕ ಮುಫ್ತಿ ಸಮಿತಿಯನ್ನು ರಚಿಸಲು ಬಿಜೆಪಿ ಶ್ರಮಿಸುತ್ತಿದೆ.

ಈ ಸಮಿತಿಯನ್ನು ರಾಜ್ಯದ ಎಲ್ಲಾ ಆರು ವಲಯಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ತ್ರಿವಳಿ ತಲಾಖ್ ಪ್ರಕರಣಗಳನ್ನು ತ್ವರಿತವಾಗಿ ಪರಿಗಣಿಸುತ್ತದೆ. ಇದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಧೀನದಲ್ಲಿ ಕೆಲಸ ಮಾಡುವ ದಾರುಲ್ ಕಜಾಗೆ ಪರ್ಯಾಯದಂತಿದೆ.

ಉತ್ತರ ಪ್ರದೇಶದ ಬಿಜೆಪಿ ಅಲ್ಪಸಂಖ್ಯಾತ ವ್ಯವಹಾರ ವಿಭಾಗದ ಸದಸ್ಯೆ ನಾಜಿಯಾ ಹಸನ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರ ಪ್ರತ್ಯೇಕ ತಂಡವನ್ನು ರಚಿಸಿ ತ್ರಿವಳಿ ತಲಾಖ್ ಗೆ ಬಲಿಯಾದ ಮಹಿಳೆಯರನ್ನು ಭೇಟಿಯಾಗಲು ಬಿಜೆಪಿ ನಿರ್ಧರಿಸಿದೆ.

ತ್ರಿವಳಿ ತಲಾಕ್ ಸಂತ್ರಸ್ತರಿಗೆ ಕಾನೂನು ಬೆಂಬಲವನ್ನು ಒದಗಿಸುವುದು ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವುದು ಪ್ರತ್ಯೇಕ ಸಮಿತಿ ಹಿಂದಿನ ಉದ್ದೇಶ ” ಎಂದು ಹಸನ್ ಟೈಮ್ಸ್ ಆಫ್ ಇಂಡಿಯಾ ಗೆ ತಿಳಿಸಿದ್ದಾರೆ. ಅಂತಹ ಬಲಿಪಶುಗಳಿಗೆ ತರಬೇತಿ ನೀಡಲು ಮತ್ತು ಅವರನ್ನು ಸ್ವಾವಲಂಬಿಯಾಗಿ ಮಾಡುವಂತೆ ಪಕ್ಷವು ರಾಜ್ಯ ಸರಕಾರವನ್ನು ಕೇಳಿಕೊಳ್ಳುತ್ತದೆ ಎಂದು ಅವರು ಹೇಳಿದರು.

ರಾಜ್ಯ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗವು ತ್ರಿವಳಿ ತಲಾಕ್ ಪ್ರಕರಣಕ್ಕೆ ಸಂಬಂಧಿಸಿ ಪ್ರತಿ ಜಿಲ್ಲೆಯ ಉಸ್ತುವಾರಿಗಾಗಿ ಕನಿಷ್ಠ ಒಬ್ಬ ಮಹಿಳಾ ಸದಸ್ಯರನ್ನು ನೇಮಿಸಿದೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದಿಂದ ಗರಿಷ್ಠ ತ್ರಿವಳಿ ತಲಾಖ್ ಪ್ರಕರಣಗಳು ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ. ನಾವು ಸಂತ್ರಸ್ತರ ಪಟ್ಟಿಯನ್ನು ತಯಾರಿಸುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ಭವಿಷ್ಯದ ಕ್ರಮವನ್ನು ನಿರ್ಧರಿಸುತ್ತೇವೆ” ಎಂದು ಅವರು ಹೇಳಿದರು.

ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಝಫರಿಯಾಬ್ ಜಿಲಾನಿ,, ಅಂತಹ ಸಮಿತಿಯ ಪಾವಿತ್ರ್ಯತೆಯನ್ನು ಪ್ರಶ್ನಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡುತ್ತಾ, ಪ್ರಸ್ತಾವಿತ ಸಮಿತಿಯು ಬಿಜೆಪಿಯೊಂದಿಗೆ ಜೋಡಿಸಲ್ಪಟ್ಟಿರುವ ಅಥವಾ ಅದರಿಂದ ಪ್ರಯೋಜನ ಪಡೆಯಲು ಬಯಸುವ ಮುಸ್ಲಿಮರನ್ನು ಮಾತ್ರ ಹೊಂದಿರುತ್ತದೆ. “ವಾಸ್ತವದಲ್ಲಿ , ಬಿಜೆಪಿಯಲ್ಲಿ ಮುಸ್ಲಿಮರ ಶೇಕಡಾವಾರು ಪ್ರಮಾಣ ಅತ್ಯಲ್ಪ. ಯಾವುದೇ ಮುಸ್ಲಿಂ ಈ ಸಮಿತಿಯನ್ನು ಪರಿಗಣಿಸಲಾರ ಮತ್ತು ಅದು ಸ್ವೀಕಾರಾರ್ಹವಲ್ಲ “ಎಂದು ಅವರು ಹೇಳಿದರು.

ತ್ರಿವಳಿ ತಲಾಕ್ ಗೆ ಸಂಬಂಧಿಸಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ರಚಿಸಿರುವ ಸಮಿತಿಯನ್ನು ಸಮೀಪಿಸಲು ಮುಸ್ಲಿಮರು ಬದ್ಧರಾಗಿದ್ದಾರೆ. ಇಂತಹ ಸಮಿತಿಗಳಿಗೆ ಯಾವುದೇ ‘ಮೌಲ್ಯ’ ಇರುವುದಿಲ್ಲ ಎಂದು ಅವರು ಹೇಳಿದರು.

ಮುಫ್ತಿ ಅಥವಾ ಖಾಝಿ ವಿಶೇಷವಾದ ಪದವಿಯನ್ನು ಹೊಂದಿದ್ದು, ಸಂಸ್ಥೆಯ ಮುಖ್ಯಸ್ಥರಿಂದ ನೇಮಕಗೊಳ್ಳುತ್ತಾರೆ. ಇದನ್ನು 1935 ಚಾಲ್ತಿಯಲ್ಲಿರುವ ದಾರುಲ್ ಖಝ ಅಥವಾ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿಯು ನೋಡಿಕೊಳ್ಳುತ್ತದೆ. ಬಿಜೆಪಿ ನೇಮಕ ಮಾಡಲು ಬಯಸುವ ಈ ಮುಫ್ತಿ ಗಳು ಮತ್ತು ಖಾಝಿಗಳು ಯಾರು ಎಂದು ಅವರು ಪಶ್ನಿಸಿದ್ದಾರೆ.