ಇಂಧನ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರಕಾರವನ್ನು ದೂರಬೇಡಿ: ಕೇಂದ್ರ ಸಚಿವ ವಿ. ಮುರಳೀಧರನ್

0
592

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್: ಇಂಧನ ಬೆಲೆ ಹೆಚ್ಚಿರುವುದಕ್ಕೆ ಕೇಂದ್ರ ಸರಕಾರವನ್ನು ಮಾತ್ರ ದೂಷಿಸಬೇಡಿ ಎಂದು ಕೇಂದ್ರ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ. ಇಂಧನ ಬೆಲೆ ಕಡಿಮೆ ಆಗಬೇಕಾದರೆ ರಾಜ್ಯ ಸರಕಾರ ತೆರಿಗೆ ಕಡಿಮೆ ಮಾಡಬೇಕು. ತೆರಿಗೆ ಕಡಿಮೆ ಮಾಡಲು ಸರಕಾರ ಸಿದ್ಧವಿದೆಯೇ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಕೇಂದ್ರ ತೆರಿಗೆಯಲ್ಲಿ ಲಭಿಸುವ ಹಣವನ್ನು ರಾಜ್ಯಗಳಿಗೆ ಕೊಡಲಾಗುತ್ತಿದೆ. ಇದು ಸಮಾಜ ಕಲ್ಯಾಣ ಕೆಲಸಗಳಿಗೆ ಉಪಯೋಗಿಸಲಾಗುತ್ತಿದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದನ ಬೆಲೆ ಹೆಚ್ಚುವುದು ಕಡಿಮೆಯಾಗುವುದರ ಆಧಾರದಲ್ಲಿ ರಾಜ್ಯಗಳಲ್ಲಿ ಇಂಧನ ಬೆಲೆ ಕಡಿಮೆಯಾಗುತ್ತದೆ. ಇದರಲ್ಲಿ ಹಲವು ಘಟಕಗಳಿವೆ. ಇಂಧನದಲ್ಲಿ ಅರ್ಧ ತೆರಿಗೆಯಾಗಿದೆ. ಕೇಂದ್ರ, ರಾಜ್ಯ ಸರಕಾಗಳು ತೆರಿಗೆ ವಿಧಿಸುವ ಮೂಲಕ ಜನರಿಗೆ ಹಲವು ರೀತಿಯ ಸೌಲಭ್ಯಗಳನ್ನು ಮಾಡಿಕೊಡುತ್ತಿವೆ ಎಂಬುದಾಗಿ ಕೇಂದ್ರ ಸಚಿವರು ತಿಳಿಸಿದರು.