ಮಕ್ಕಳಲ್ಲಿ ವಾಕಿಂಗ್ ನಿಮೋನಿಯಾ: ಮುನ್ನೆಚ್ಚರಿಕೆ ಅಗತ್ಯ

0
325

ಸನ್ಮಾರ್ಗ ವಾರ್ತೆ

ತಿರುವನಂತಪುರ: ನಿಮೋನಿಯಾದಂತೆ ತೀವ್ರವಲ್ಲದಿದ್ದರೂ ಅದಕ್ಕೆ ಸಮಾನವಾದ ಲಕ್ಷಣಗಳು ಇರುವ ವಾಕಿಂಗ್ ನಿಮೋನಿಯಾ ರೋಗವು ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಇದು ತಂಪಾದ ಹಾಗೂ ಧೂಳಿನಿಂದ ಕೂಡಿದ ವಾತಾವರಣದಿಂದಾಗಿ ಮಕ್ಕಳ ಶ್ವಾಸಕೋಶಕ್ಕೆ ತಗಲುವ ಸೋಂಕಾಗಿದೆ.

ಈ ಸೋಂಕಿಗೆ ಕಾರಣ ಬ್ಯಾಕ್ಟೀರಿಯ ಮತ್ತು ವೈರಸ್ ಆಗಿವೆ. ಮೈಕೋಪ್ಲಾಸ್ಮ, ಕ್ಲಾಮಿಸೋಫಿಯ ಮುಂತಾದ ಬ್ಯಾಕ್ಟೀರಿಯಾಗಳು ಈ ಸೋಂಕಿಗೆ ಕಾರಣವಾಗಿವೆ. 5 ವರ್ಷದ ವರೆಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿದೆ.

ಇದು ಅಪಾಯಕಾರಿಯಲ್ಲದಿದ್ದರೂ ಮುಂಜಾಗ್ರತೆ ಅತ್ಯಗತ್ಯ ಎಂದು ವೈದ್ಯರು ಶಿಫಾರಸು ಮಾಡಿದ್ದಾರೆ. ತಣ್ಣನೆಯ ಜ್ವರ, ಮೈಕೈ ನೋವು, ಕೆಮ್ಮು, ಆಯಾಸ, ತಲೆನೋವು ಸೇರಿ ಉಸಿರುಗಟ್ಟುವಿಕೆಯೂ ಇದರ ಲಕ್ಷಣಗಳಾಗಿವೆ. ಈ ಲಕ್ಷಣಗಳು ದೀರ್ಘಕಾಲ ಉಳಿದುಕೊಂಡಿದ್ದರೆ ವೈದ್ಯಕೀಯ ತಪಾಸಣೆಯು ಅಗತ್ಯವಾಗಿದೆ.