ಸನ್ಮಾರ್ಗ ವಾರ್ತೆ
ಮಂಗಳೂರು: ವೆಲ್ಫೇರ್ ಪಾರ್ಟಿ ಮಂಗಳೂರು ಉತ್ತರ ವಲಯದ ನೂತನ ಕಾರ್ಯಾಧ್ಯಕ್ಷರಾಗಿ ರಮೀಝ್ ಕಳಾಯಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹೈದರ್ ಎಡಪದವು, ಪ್ರಧಾನ ಕಾರ್ಯದರ್ಶಿಯಾಗಿ ಆರೀಫ್ ಪದ್ರೆಂಗಿ ಮತ್ತು ಖಜಾಂಚಿಯಾಗಿ ರಿಯಾಝ್ ಕೊಳವೂರು ಆಯ್ಕೆಯಾದರು. ನೂತನ ಸಮಿತಿಯ ರಚನಾ ಪ್ರಕ್ರಿಯೆಯು ಜಿಲ್ಲಾಧ್ಯಕ್ಷರಾದ ಅಡ್ವೋಕೇಟ್ ಸರ್ಫರಾಝ್ ನೇತೃತ್ವದಲ್ಲಿ ರವಿವಾರ ವೆಲ್ಫೇರ್ ಪಾರ್ಟಿ ಕುಪ್ಪೆಪದವು ಕಾರ್ಯಾಲಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಉಪಾಧ್ಯಕ್ಷರಾದ ಎಂ. ದಿವಾಕರ್ ರಾವ್, ಜಿಲ್ಲಾ ಖಜಾಂಚಿ ಆಸಿಫ್ ಇಕ್ಬಾಲ್, ಜಿಲ್ಲಾ ವಕ್ತಾರ ಎಸ್. ಎಂ ಮುತ್ತಲಿಬ್, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಮುನೀರ್ ಪದ್ರೆಂಗಿ ಮತ್ತು ವೆಲ್ಫೇರ್ ಪಾರ್ಟಿ ಜಿಲ್ಲಾ ಸಮಿತಿ ಸದಸ್ಯ ಶರೀಫ್ ಬಿಕ್ಕೋಡ್ ಉಪಸ್ಥಿತರಿದ್ದರು.












