ರಾಜೀವ್‍ಗಾಂಧಿಯನ್ನು ಸಿಕ್ಖ್ ವಿರೋಧಿ ಗಲಭೆಯೊಂದಿಗೆ ಜೋಡಿಸುವುದು ತಪ್ಪು- ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್

0
633

ಹೊಸದಿಲ್ಲಿ,ಮೇ 11: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು 1984ರ ಸಿಕ್ಖ್ ವಿರೋಧಿ ಗಲಭೆಗೆ ಜೋಡಿಸಿ ನರೇಂದ್ರ ಮೋದಿ ಮಾತಾಡಿದ್ದು ಸರಿಯಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದರು. ಯಾರಾದರೂ ಮೋದಿಯನ್ನು ಗೋಧ್ರಾ ಸಾಮೂಹಿಕ ಹತ್ಯೆಗೆ ಜೋಡಿಸಿ ಮಾತಾಡಿದರೆ ಏನು ಆಗಬಹುದು ಎಂದು ಅವರು ಪ್ರಶ್ನಿಸಿದರು.

ಸಿಕ್ಖ್ ಸಾಮೂಹಿಕ ಹತ್ಯೆಯ ಕುರಿತು ಆಗಿದ್ದು ಆಗಿ ಹೋಯಿತು ಇನ್ನೇನು ಮಾಡುವುದು ಎಂಬ ಸ್ಯಾಂ ಪಿತ್ರೋಡರ ಮಾತನ್ನು ಅಮರೀಂದರ್ ಸಿಂಗ್ ತಿರಸ್ಕರಿಸಿದ್ದಾರೆ. 1984ರ ಸಿಕ್ಖ್ ಗಲಭೆ ದೊಡ್ಡ ದುರಂತವಾಗಿತ್ತು ಈವರೆಗೆ ಬಲಿಪಶುಗಳಿಗೆ ನ್ಯಾಯ ಸಿಕ್ಕಿಲ್ಲ. ಕೆಲವು ನಾಯಕರು ವೈಯಕ್ತಿಕವಾಗಿ ಗಲಭೆಯಲ್ಲಿ ಪಾಲ್ಗೊಂಡರೆಂಬ ಆರೋಪ ಎದ್ದಾಗ ಅವರಿಗೆ ಕಾನೂನಿನಂತೆ ಶಿಕ್ಷೆಯೂ ಸಿಕ್ಕಿದೆ. ಕೆಲವರ ಹೆಸರು ಕೇಳಿ ಬಂದಿವೆ. ಇದರರ್ಥ ಮೋದಿಗೆ, ರಾಜೀವ್‍ಗಾಂಧಿ ಅಥವಾ ಕಾಂಗ್ರೆಸ್‍ನ್ನು ಅದಕ್ಕೆ ಜೋಡಿಸಲು ಸಾಧ್ಯ ಎಂದಲ್ಲ. ಹಲವಾರು ಬಿಜೆಪಿ-ಆರೆಸ್ಸೆಸ್ ನಾಯಕರ ಹೆಸರು ಪೊಲೀಸ್ ಎಫ್‍ಐಆರ್‌ನಲ್ಲಿ ಸೇರ್ಪಡೆಯಾಗಿದೆ. ಇದು ಮೋದಿಗೂ ಗೊತ್ತಿದೆ ಎಂದು ಅಮರೀಂದರ್ ಸಿಂಗ್ ಹೇಳಿದರು.