ಇಸ್ಲಾಮೀ ಸಂಘಟನೆಗಳ ಅಜೆಂಡಾ ಯಾರು ನಿರ್ಣಯಿಸಬೇಕು?

0
143

ಸನ್ಮಾರ್ಗ ವಾರ್ತೆ

✍️ಅಬ್ದುಸ್ಸಲಾಮ್ ವಾಣಿಯಂಬಲಮ್

ಇಂದು ಇಸ್ಲಾಮಿನ ವಿರುದ್ಧ ಇದ್ದುಕೊಂಡು ಯುದ್ಧವನ್ನು ನಡೆಸುವುದು ವಿಶ್ವದ ಶಕ್ತಿಗಳ ಕಾರ್ಯಯೋಜನೆಯಾಗಿದೆ. ಅವರಲ್ಲಿರುವ ಸಾವಿರಾರು ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳನ್ನು ರಾತ್ರಿ ಹಗಲೆನ್ನದೆ ಬಳಸಿಕೊಂಡು ತಮ್ಮ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಅದರ ತಳಹದಿಯಲ್ಲಿಯೇ ಅವರು ಮುಂದುವರಿಯುತ್ತಿದ್ದಾರೆ.

ಶತ್ರುಗಳ ಕುತಂತ್ರಗಳ ಬಗ್ಗೆ ಕುರ್‌ಆನಿನಲ್ಲಿ ಹೀಗೆ ಹೇಳಲಾಗಿದೆ:
“ಅವರು ತಮ್ಮ ಎಲ್ಲ ಕುತಂತ್ರಗಳನ್ನು ನಡೆಸಿ ನೋಡಿದರು. ಅವರ ಕುತಂತ್ರಗಳು ಪರ್ವತಗಳನ್ನೇ ಸರಿಸುವಷ್ಟು ಘೋರವಾಗಿದ್ದುವಾದರೂ ಅವರ ಪ್ರತಿಯೊಂದು ಕುತಂತ್ರದ ಪ್ರತಿ ಖಂಡನೆ ಅಲ್ಲಾಹನ ಬಳಿಯಲ್ಲಿತ್ತು.” (ಇಬ್ರಾಹೀಮ್: 46)

ಹದಿನಾಲ್ಕು ಶತಮಾನಗಳ ಹಿಂದಿನ ಅಂದಿನ ಶತ್ರುಗಳಿಗಿಂತ ಎಷ್ಟೋ ಪಟ್ಟು ಹೆಚ್ಚಿನ ತಂತ್ರಜ್ಞಾನ ಇರುವವರು ಇಂದಿನ ಶತ್ರುಗಳು ಎಂಬುದನ್ನು ಗಮನಿಸಬೇಕು.

ಇಷ್ಟೆಲ್ಲಾ ತಂತ್ರಜ್ಞಾನ ಬಳಸಿಕೊಂಡು ಕಾರ್ಯತಂತ್ರ ರೂಪಿಸುವಾಗ ಕೇವಲ ಇಖ್ಲಾಸ್‌ನಿಂದ ಮಾತ್ರ ಯುದ್ಧ ಮಾಡಬಹುದೆಂದು ಇಸ್ಲಾಮಿಸ್ಟರು ಯೋಚಿಸಬಾರದು. ಅವರಿಗೆ ಸ್ಪಷ್ಟವಾದ ಕಾರ್ಯತಂತ್ರ ಯೋಜನೆಗಳು ಇರಬೇಕು. ಅದಕ್ಕೆ ಬೇಕಾದ ಕಾರ್ಯ ಯೋಜನೆಗಳನ್ನು ರೂಪಿಸಬೇಕು. ಆ ಕಾರ್ಯಯೋಜನೆಗಳು ಕ್ಷಿಪ್ರ ಫಲಿತಾಂಶ ಮತ್ತು ದೂರದೃಷ್ಟಿಯ ಫಲಿತಾಂಶ ನೀಡುವವುಗಳಾಗಿ ವಿಂಗಡಿಸಬೇಕು. ಮುಂದಿನ ಐದು ವರ್ಷಗಳಲ್ಲಿ ಏನು ಗಳಿಸಿರಬೇಕು, ನಂತರದ ಐವತ್ತು ವರ್ಷಗಳಲ್ಲಿ ಏನಾಗಿರಬೇಕು, ಎಲ್ಲಿಗೆ ತಲುಪಿರಬೇಕು ಎಂಬ ಬಗ್ಗೆ ಸ್ಪಷ್ಟವಾದ ಕಾರ್ಯ ಯೋಜನೆಯ ಚಟುವಟಿಕೆಯಿಲ್ಲದಿದ್ದರೆ ಕೇವಲ ನಾಮ ಮಾತ್ರ ಸಂಘಟನಾ ಚಟುವಟಿಕೆಯಾಗಿ ಮುಂದುವರಿಯಬಹುದು ಅಷ್ಟೇ.

ಉತ್ತಮ ಉದ್ದೇಶಕ್ಕಾಗಿ ಪರಲೋಕದಲ್ಲಿ ಪ್ರತಿಫಲ ದೊರೆಯಬಹುದು. ಆದರೆ ಭೂಮಿಯಲ್ಲಿ ನಡೆಸುವ ಚಟುವಟಿಕೆಗಳಿಗೆ ಉಪಯುಕ್ತ ಫಲಿತಾಂಶ ಸಿಗಬೇಕೆಂದಿಲ್ಲ. ಇಸ್ಲಾಮಿಸ್ಟರ ಸಹಿತ ಮುಸ್ಲಿಮ್ ಸಮುದಾಯ ಕಾಲಾಂತರವಾಗಿ ನಿಂದಿತರಾಗಿಯೇ ಮುಂದುವರಿಯುವುದು ಮಾತ್ರ ಘಟಿಸಬಹುದು.

ಮೊದಲು ಮಾಡಬೇಕಾದದ್ದು ಕೊನೆಗೆ ಮಾಡಿ ಹೆಚ್ಚು ಫಲಿತಾಂಶ ದೊರೆಯುವ ಚಟುವಟಿಕೆಗಳನ್ನು ಬದಿಗಿಟ್ಟರೆ ಕಡಿಮೆ ಫಲಿತಾಂಶದ ಚಟುವಟಿಕೆಯನ್ನು ಕಾರ್ಯ ತಂತ್ರವೆನ್ನಲಾಗದು. ಸಂಘಟನೆಯ ಒಟ್ಟು ಕಾರ್ಯ ಯೋಜನೆಯ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲ ಪ್ರಾದೇಶಿಕವಾಗಿ ವೈಯಕ್ತಿಕವಾದ ಚಟುವಟಿಕೆಗಳಿಗೆ ಸ್ಪಷ್ಟವಾದ ಭವಿಷ್ಯದ ಕಾರ್ಯ ಯೋಜನೆ ನಿರ್ಣಯಿಸಬೇಕು.

ಇಬಾದತ್‌ಗಳಿಗೆ ಪ್ರಾಶಸ್ತ್ಯ ನೀಡಿ ಭವಿಷ್ಯದ ಕಾರ್ಯ ಯೋಜನೆ ನಿಶ್ಚಯಿಸಿದ ಧರ್ಮವಾಗಿದೆ ಇಸ್ಲಾಮ್. ಎಲ್ಲಾ ಆರಾಧನೆಗಳು ಒಂದೇ ರೀತಿಯಲ್ಲ. ಒಂದೇ ರೀತಿಯ ಪ್ರತಿಫಲವೂ ದೊರೆಯದು. ಆ ಭವಿಷ್ಯದ ಕಾರ್ಯ ಯೋಜನೆ ಪಾಲಿಸುವುದು ಮುಸ್ಲಿಮರ ಕರ್ತವ್ಯವಾಗಿದೆ.

ಶೈಖ್ ಯೂಸುಫುಲ್ ಕರ್ಝಾವಿ ಹೇಳುತ್ತಾರೆ, “ಅಂತರಾಳದ ನೋಟವಿಲ್ಲದ ಜನರು ತಮ್ಮ ಕರ್ಮಗಳ ಮಧ್ಯೆಯ ಪರಿಧಿ ಮೇರೆಗಳನ್ನು ಮರೆಮಾಚುವುದನ್ನು ಹಲವು ಬಾರಿ ನಾವು ಕಂಡು ಕೊಂಡಿರುತ್ತೇವೆ. ನಂತರ ಅವರು ಅದರಲ್ಲಿ ಲೋಪ ತರುತ್ತಾರೆ ಅಥವಾ ಹೆಚ್ಚಿನದ್ದನ್ನು ಸೇರಿಸುತ್ತಾರೆ. ಹೀಗೆ ಎರಡು ದಿಕ್ಕಿನಿಂದಲೂ ಇಸ್ಲಾಮಿಗೆ ತೊಂದರೆಯಾಗುತ್ತದೆ. ಇವರಲ್ಲಿ ಹೆಚ್ಚಿನವರು ನಿಷ್ಠಾವಂತರಾದರೂ ಹಲವು ಬಾರಿ ಪ್ರಬಲವಾದುದನ್ನು ತೊರೆದು ಅಷ್ಟೇನೂ ಮಹತ್ವವಿಲ್ಲದವುಗಳನ್ನು ಅನುಷ್ಠಾನಿಸುವವರಾಗಿರುತ್ತಾರೆ. ಹೆಚ್ಚು ಶ್ರೇಷ್ಠಾವಾದವುಗಳನ್ನು ತೊರೆದು ಶ್ರೇಷ್ಠತೆಯಿಲ್ಲದ ಕರ್ಮಗಳನ್ನು ಪಾಲಿಸುತ್ತಾರೆ. ಒಂದೊಮ್ಮೆ ಒಂದು ಶ್ರೇಷ್ಠ ಕರ್ಮ ಮತ್ತೊಂದು ಸಮಯದಲ್ಲಿ ಹಾಗಿರಬೇಕೆಂದಿಲ್ಲ. ಆದರೆ ವಿವೇಕವಿಲ್ಲದೆ ಅವರು ಎಲ್ಲಾ ಸಮಯವನ್ನು ಒಂದೇ ರೀತಿ ತೆಗೆದುಕೊಳ್ಳುತ್ತಾರೆ. ಅವರಿಗೆ ಎರಡು ಸಂದರ್ಭ ಪರಿಸ್ಥಿತಿಯನ್ನು ವಿಂಗಡಿಸಿ ಅರ್ಥಮಾಡಿಕೊಳ್ಳಲಾಗುವುದಿಲ್ಲ.”

ಹಾಗೆಯೇ ಇಸ್ಲಾಮೀ ಸಂಘಟ ನೆಯು ಎಂದಿಗೂ ಪ್ರತೀಕಾರ ಮನೋಭಾವದ ಸಂಘಟನೆಯಲ್ಲ. ಯಾವುದಕ್ಕೂ ಒಂದು ಕಾರ್ಯತಂತ್ರ ಯೋಜನೆಗಳಿಲ್ಲದೆ ಯಾರಿಂದಾದರೂ ಉಂಟಾಗುವ ಸಮಸ್ಯೆಗಳಿಗೆ ಪ್ರತಿಕ್ರಿಯೆ ನೀಡಿ ಪ್ರತಿಭಟನೆ ನಡೆಸುವುದಾಗಲೀ ಮೌಲ್ಯಯುತ ಸಂಘಟನೆಯ ಕೆಲಸವಲ್ಲ. ಅದು ಅಗತ್ಯಾನುಸಾರ ಮಾಡುವಂತಹದ್ದು.

ಆದರೆ ಸಮಸ್ಯೆಗಳನ್ನು ಕಂಡು ಕೊಂಡು ಸಂಘಟನೆಯು ಯೋಜನೆ ಸಿದ್ಧಪಡಿಸಬೇಕು. ಉದಾಹರಣೆಗೆ ಭಾರತದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಸಿದ್ಧಪಡಿಸುತ್ತಿರುವ ಸಿ.ಎ.ಎ., ಸಮಾನ ಸಿವಿಲ್ ಕೋಡ್, ರಾಮಮಂದಿರ ನಿರ್ಮಾಣ, ಜಾತೀಯ ರಾಜಕೀಯ ಮುಂತಾದ ವಿಚಾರಗಳಿಗೆ ಭಾರತದ ಮುಸ್ಲಿಮ್ ಸಂಘಟನೆಗಳ ಒಕ್ಕೂಟಗಳು ಪ್ರಬಲವಾಗಿ ಪ್ರತಿಕ್ರಿಯಿಸುತ್ತಾ ಬಂದಿದೆ. ಇಂತಹ ಸಂದರ್ಭ ಉದ್ಭವಿಸಿದ್ದು ಕಂಡುಕೊಂಡು ಮೊದಲೇ ಸ್ಪಷ್ಟವಾದ ಯಾವ್ಯಾವ ಯೋಜನೆಗಳನ್ನು ರೂಪಿಸಲಾಗಿದೆ? ಅಂತಹ ಯೋಜನೆಗಳು ಯಶಸ್ವಿಯಾಗಬಹುದು, ಅಥವಾ ಪರಾಜಿತವಾಗಬಹುದು. ಆದರೆ ಕನಿಷ್ಠ ಪಕ್ಷ ಅಂತಹ ವಿಶೇಷ ಯೋಜನೆಗಳಿತ್ತೇ

ಇಲ್ಲವಾದರೆ ಹೀಗೊಂದು ಸಂದರ್ಭ ಬಂದಾಗ ಹೇಗೆ ಎದುರಿಸಬಹುದು ಎಂಬ ವಿಷಯದಲ್ಲಿ ಮೊದಲೇ ರೂಪೀಕರಿಸಲಾದ ಕಾರ್ಯತಂತ್ರಗಳಿಗನುಗುಣವಾಗಿ ಇಂದು ನಡೆಸುತ್ತಿರುವ ಪ್ರತಿಕ್ರಿಯೆಗಳು ಪ್ರತಿ ಕಾರ್ಯ ಚಟುವಟಿಕೆಗಳು ಇವೆಯೇ? ಅಥವಾ ಅದು ಪ್ರಸ್ತುತ ಸಂದರ್ಭಗಳಿಗೆಂದು ಮಾಡಿದ ಸೃಷ್ಟಿಯೇ? ಭವಿಷ್ಯದ ಕಾರ್ಯ ಯೋಜನೆಯ ರೂಪೀಕರಣದಲ್ಲಿ ಇಸ್ಲಾಮೀ ಸಂಘಟನೆ ನಿರತವಾಗಿವೆಯೇ? ಅಥವಾ ಅಗಾಗ ಪ್ರತಿಕ್ರಿಯಿಸಿ ಮುಂದುವರಿಯುವ ನಿಲುವನ್ನು ಅನುಸರಿಸುತ್ತಿದೆಯೇ?

ಪ್ರತೀಕಾರಕ್ಕಾಗಿ ಸಂಘಟನೆಗಳುಂಟಾದಾಗ ಅದರ ಅಜೆಂಡಾವನ್ನು ನಿರ್ಣಯಿಸುವುದು ಶತ್ರುಗಳಾಗಿರುತ್ತಾರೆ. ಅವರು ಎಸೆದ ಕೂಡಲೇ ಹಾರಿ ಹೋಗಿ ಅದನ್ನು ಕುಕ್ಕಿ ತಿನ್ನುವ ಸಂಘಟನೆಗಳು. ಅದರ ಮಧ್ಯೆ ಸ್ವಂತ ಕಾರ್ಯ ಯೋಜನೆಗಳು ರೂಪಿಸಲಾಗದೇ ಅದರ ಕುರಿತು ಮಾತನಾಡಲು ಸಾಧ್ಯವಾಗದೇ ಇರುವವರು. ಇಸ್ಲಾಮೀ ಸಂಘಟನೆಗಳು ಎಂದಿಗೂ ಇತರರ ಅಜೆಂಡಗಳಿಗೆ ಆಹಾರವಾಗಬಾರದು. ಸ್ವತಃ ತಮ್ಮ ಅಜೆಂಡಾಗಳನ್ನು ರೂಪಿಸಿ ಆ ಅಜೆಂಡಾಗಳಿಗೆ ಇತರರನ್ನು ಸೇರಿಸಿ ಕೊಳ್ಳಲು ಪರಿಶ್ರಮಿಸಬೇಕು.
[ಸಶೇಷ]

LEAVE A REPLY

Please enter your comment!
Please enter your name here