ಹೆಚ್ಚಿನ ಸರ್ವಾಧಿಕಾರಿಗಳ ಹೆಸರುಗಳು ‘M’ನಿಂದಲೇ ಯಾಕೆ ಆರಂಭಗೊಳ್ಳುತ್ತಿದೆ: ರಾಹುಲ್ ಗಾಂಧಿ

0
607

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.3: ಹೆಚ್ಚಿನ ಸರ್ವಾಧಿಕಾರಿಗಳ ಹೆಸರು ‘ಎಂ’ನಿಂದಲೇ ಯಾಕೆ ಆಂಭವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಜಗತ್ತಿನ ಕೆಲವು ಸರ್ವಾಧಿಕಾರಿಗಳ ಹೆಸರುಗಳನ್ನು ಅವರು ಟ್ವೀಟ್ ಮಾಡಿದ್ದಾರೆ.

ಮಾರ್ಕೊಸ್, ಮುಸೊಲೊನಿ, ಮಿಲೊಸೊವಿಚ್, ಮುಬಾರಕ್, ಮೊಬೂಟ್ಟು, ಮುಶರಫ್, ಮೈಕೊಂಬ್ರೊ ಎಂಬ ಜಗತ್ತಿನ ಸರ್ವಾಧಿಕಾರಿಗಳ ಹೆಸರುಗಳ ಉದಾಹರಣೆಯನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದರು. ರೈತರ ಹೋರಾಟದ ಹಿನ್ನೆಲೆಯಲ್ಲಿ ಮೋದಿಯನ್ನು ಅವರು ಪರೋಕ್ಷವಾಗಿ ಈ ರೀತಿ ಸೂಚಿಸಿ ಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ತಮ್ಮ ಅಧಿಕಾರಗಳನ್ನು ದುರುಪಯೋಗಿಸುವ ಅಧಿಕಾರಿಗಳನ್ನು ಸರ್ವಾಧಿಕಾರಿಗಳೆಂದು ಕರೆಯಲಾಗುತ್ತದೆ. ಫಿಲಿಪ್ಪೀನ್ಸ್‌ನ ಮಾಜಿ ಅಧ್ಯಕ್ಷ ಫರ್ಡಿನೆಂಟ್ ಮಾರ್ಕೊಸ್, ಇಟಲಿಯ ಸರ್ವಾಧಿಕಾರಿ ಬೆನೊಟ್ಟೊ ಮುಸೊಲೊನಿ, ಯುಗೊಸ್ಲಾವಾಕಿಯದ ಅಧ್ಯಕ್ಷ ಸ್ಲೊಬೊದನ್ ಮಿಲೊಸೊವಿಚ್ಚ್, ಈಜಿಪ್ಟಿನ ಅಧ್ಯಕ್ಷ ಹುಸ್ನಿ ಮುಬಾರಕ್, ಸಯರ್ ಮಾಜಿ ಅಧ್ಯಕ್ಷ ಮೊಬೊಟ್ಟು ಸಿಕೆ ಸಿಸೊ, ಮಾಜಿ ಪಾಕಿಸ್ತಾನ ಅಧ್ಯಕ್ಷ ಪರ್ವೇಝ್ ಮುಶರಫ್, ಬುರುಂಡಿ ಮಾಜಿ ಅಧ್ಯಕ್ಷ ಮೈಕಲ್ ಮೈಕೊಂಬ್ರೊರನ್ನು ಸರ್ವಾಧಿಕಾರಿಗಳೆಂದು ಜಗತ್ತು ಕರೆಯುತ್ತಿದೆ.