ಕೊರೋನ ರೋಗಿಗಳಿಗೆ ಬೆಡ್ ಕೊಡಿಸುವುದಾಗಿ ವಂಚನೆ: ನಕಲಿ ನರ್ಸ್ ವಶಕ್ಕೆ

0
588

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನರ್ಸ್ ಎಂದು ಹೇಳಿಕೊಂಡು ಹಾಸಿಗೆ ಕೊಡಿಸುವುದಾಗಿ ಕೊರೋನ ರೋಗಿಗಳಿಂದ ಹಣ ಎಗರಿಸಿದ ಘಟನೆಯಲ್ಲಿ ದಿಲ್ಲಿ ಪೊಲೀಸರು ಗೀತಾ ಸರೋಜ ಎಂಬಾಕೆಯನ್ನು ಬಂಧಿಸಿದ್ದಾರೆ. ಏಮ್ಸ್ ನರ್ಸ್ ಮತ್ತು ಸ್ವಯಂ ಸೇವಾ ಕಾರ್ಯಕರ್ತೆ ಎಂಬ ನಕಲಿ ಗುರುತುಚೀಟಿಯನ್ನು ಈ ಮಹಿಳೆ ಇಟ್ಟುಕೊಂಡಿದ್ದಳು. ದಿಲ್ಲಿಯಲ್ಲಿ ದೊಡ್ಡ ಕೊರೋನ ಕೇರ್ ಆಸ್ಪತ್ರೆಯಾದ ಲೋಕ್‍ನಾಯಕ್ ಆಸ್ಪತ್ರೆಯಲ್ಲಿ ಬೆಡ್ ಕೊಡಿಸುವುದಾಗಿ ರೋಗಿಗಳಿಂದ ಮಹಿಳೆ ಹಣ ಪಡೆದುಕೊಂಡಿದ್ದಾಳೆ.

ಆಸ್ಪತ್ರೆಯ ಮುಖ್ಯ ಅಧಿಕಾರಿಯಾದ ಗುರುಪ್ರೀತ್ ಸಿಂಗ್‍ರ ದೂರಿನಡಿಯಲ್ಲಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು ಏಮ್ಸ್‌ನ ನಕಲಿ ಗುರುತು ಚೀಟಿ ಉಪಯೋಗಿಸಿ ಪಿಪಿಇ ಕಿಟ್ ಹಾಕಿಕೊಂಡು ಖಾಯಂ ಆಗಿ ಆಸ್ಪತ್ರೆಗೆ ಮಹಿಳೆ ಬರುತ್ತಿದ್ದಳು ಎಂದು ಮೂಲಗಳು ತಿಳಿಸಿವೆ. ಮಹಿಳೆ ಮಾತ್ರವೇ ವಂಚನೆ ನಡೆಸಿದ್ದಳೋ ಅಥವಾ ತಂಡವೇ ಆಕೆಯ ಜೊತೆಗಿದೆಯೋ ಎಂಬ ತನಿಖೆ ನಡೆಸಬೇಕೆಂದು  ಚೀಫ್ ಮೆಡಿಕಲ್ ಆಫಿಸರ್ ಶಂಕೆ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದಾರೆ.