ಎಷ್ಟು ಭಯಾನಕ ಅಮೆರಿಕದ ಭಯೋತ್ಪಾದನಾ ವಿರೋಧಿ ಯುದ್ಧ!

0
997

ಟ್ರೆವಾನ್ ಆಸ್ಟಿನ್

9/11ರ ಬಳಿಕ ಅಮೆರಿಕದ ಸರಕಾರ ಪ್ರಾರಂಭಿಸಿದ ಭಯೋತ್ಪಾದನೆ ವಿರೋಧಿ ಯುದ್ಧಕ್ಕೆ ವೆಚ್ಚವಾಗಿದ್ದು 2019ರ ಆರ್ಥಿಕ ವರ್ಷ ಕೊನೆಯಲ್ಲಿ  ಆರು ಲಕ್ಷ ಕೋಟಿ ಡಾಲರ್. ಬ್ರೌನ್ ಯುನಿವರ್ಸಿಟಿಯ ಪ್ರೊಫೆಸರ್ ನೆರ ಸಿ. ಕ್ರಾಫರ್ಡ್‍ರ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ. ಕಳೆದ ಮಾರ್ಚ್‍ನಲ್ಲಿ ಅಮೆರಿಕದ ರಕ್ಷಣಾ ಇಲಾಖೆ ಪ್ರಕಟಿಸಿದ ಲೆಕ್ಕದಲ್ಲಿ 1.5 ಲಕ್ಷ ಕೋಟಿ ಡಾಲರ್ ಎಂದಿತ್ತು. ಈ ಲೆಕ್ಕದಲ್ಲಿ ಆಂತರಿಕ  ರಕ್ಷಣಾ ಇಲಾಖೆ, ಬಜೆಟ್‍ನಲ್ಲಿ ಹೆಚ್ಚಳ, ನಿವೃತ್ತ  ಸೈನಿಕರ ಚಿಕಿತ್ಸಾ ವೆಚ್ಚ ಹೆಚ್ಚಳ, ಯುದ್ಧ ಆವಶ್ಯಕತೆಗಾಗಿ ಸಾಲ ಪಡೆದ ಹಣದ ಬಡ್ಡಿಸೇರಿಲ್ಲ. ಪರೋಕ್ಷ ವೆಚ್ಚಗಳ ಸಹಿತ 2001 ರಿಂದ 2019ರ ಕೊನೆಯ ವರೆಗೆ ಒಟ್ಟು ಯುದ್ಧ ವೆಚ್ಚ 4.6 ಕೋಟಿ ಡಾಲರ್. ಸೆಪ್ಟಂಬರ್ ಹನ್ನೊಂದರ  ನಂತರ ವಿಮೋಚಿತ ಸೈನಿಕರ ಭವಿಷ್ಯದ ವೆಚ್ಚಕ್ಕಾಗಿ 2059ರ ವರೆಗೆ ಸುಮಾರು ಒಂದು ಲಕ್ಷ ಕೋಟಿ ಡಾಲರ್ ಅಮೆರಿಕನ್ ಸರಕಾರ ವೆಚ್ಚ ಮಾಡ ಬೇಕಾಗಬಹುದು. ಒಟ್ಟು ಖರ್ಚು 5.993 ಕೋಟಿ ಡಾಲರ್ ಆಗಿರುತ್ತದೆ.

ಅಮೆರಿಕದ ನೇತೃತ್ವದಲ್ಲಿ ನಡೆಯುತ್ತಿರುವ ಯುದ್ಧಗಳು ದಾಳಿಗಳು ಮುಂದಿನ ನಾಲ್ಕು ವರ್ಷ ಮುಂದುವರಿ ದರೆ ಅದು 808 ಬಿಲಿಯನ್‍ಗೂ ಮುಟ್ಟಲಿದೆ ಎಂದು ಅಧ್ಯಯನ ಮುನ್ನೆ ಚ್ಚರಿಕೆಯನ್ನು ನೀಡಿದೆ. ಯುದ್ಧ ಕೊನೆ ಗೊಳ್ಳುವವರೆಗೆ ವಿಮೋಚಿತ ಸೈನಿಕರ ಸಂಖ್ಯೆ ಹೆಚ್ಚುತ್ತಿರುತ್ತದೆ. ಆದ್ದರಿಂದ ಖರ್ಚು 6.7 ಲಕ್ಷ ಕೋಟಿ ಡಾಲರ್ ಮೀರಬಹುದು.

ಒಂದು ಕಡೆಯಲ್ಲಿ ಆರ್ಥಿಕ ನಷ್ಟ ಹೆಚ್ಚಳವಾಗುತ್ತಿದ್ದರೆ ಜತೆಗೆ ಜೀವ ಹಾನಿಯ ಸಂಖ್ಯೆಯೂ ಹೆಚ್ಚುತ್ತಿರುತ್ತದೆ. ಭಯೋತ್ಪಾದನಾ ವಿರೋಧಿ  ಯುದ್ಧದ ಹೆಸರಿನಲ್ಲಿ ಲಕ್ಷಾಂತರ ಮಂದಿ ಅಫ್ಘಾನಿಸ್ತಾನ, ಇರಾಕ್, ಪಾಕಿಸ್ತಾನಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಬ್ರೌನ್ ಯುನಿವ ರ್ಸಿಟಿಯ ವಾಟ್ಸನ್  ಇನ್ಸ್‍ಟಿಟ್ಯೂಟ್ ಫಾರ್ ಇಂಟರ್‍ನ್ಯಾಶನಲ್ ಆಂಡ್ ಪಬ್ಲಿಕ್ ಅಫೇರ್ಸ್ ನಡೆಸಿದ ಅಧ್ಯಯನ ಪ್ರಕಾರ, ನೇರ ಯುದ್ಧದಲ್ಲಿ ಸುಮಾರು  48,0000 ದಿಂದ 507000 ರೊಳಗೆ ಜನರು ಸತ್ತರು. ಕೊಲ್ಲಲ್ಪಟ್ಟವರಲ್ಲಿ ನಾಗರಿಕರು, ಸಶಸ್ತ್ರ ಸೈನಿಕರು, ಸ್ಥಳೀಯ ಪೊಲೀಸರು, ಸೆಕ್ಯುರಿಟಿ   ಆಫಿಸರ್ಸ್, ಅಮೆರಿಕದ ಸಖ್ಯ ಸೈನಿಕರು ಸೇರಿದ್ದಾರೆ. ಈ ಲೆಕ್ಕದಲ್ಲಿ ಇದಕ್ಕಿಂತ ಹತ್ತು ಪಟ್ಟು ಜನರು ಯುದ್ಧ ಕೇಡಿನಿಂದಾಗಿ ಪರೋಕ್ಷವಾಗಿ ಪೋಷಕಾಹಾರ ಕೊರತೆ, ಸೌಕರ್ಯಗಳ ಅಲಭ್ಯತೆಯಿಂದ ನರಳುತ್ತಿದ್ದಾರೆ. ಪರಿಸರ ಸಮಸ್ಯೆಗಳು ಸೃಷ್ಟಿ ಯಾಗಿ ಹಲವಾರು ಜನರು ಸಾಯಬೇಕಾಯಿತು.

ಭಯೋತ್ಪಾದನಾ ವಿರೋಧಿ ಯುದ್ಧದ ಹೆಸರಿನಲ್ಲಿ ಇರಾಕಿನಲ್ಲಿ 2,045,75 ನಾಗರಿಕರು ಕೊಲೆಯಾಗಿದ್ದರು. ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ  ಯಥಾಕ್ರಮ 38,480,23372 ನಾಗರಿಕರು ಹತ್ಯೆಯಾಗಿದ್ದಾರೆ ಎಂಬುದು ಲೆಕ್ಕಾಚಾರವಾಗಿದೆ. ಇದೇ ಸಮಯದಲ್ಲಿ ಇರಾಕ್, ಅಫ್ಘಾನಿಸ್ತಾನದಲ್ಲಿ ಸುಮಾರು 7000 ಅಮೆರಿಕನ್ ಸೈನಿಕರು ಕೊಲೆಯಾಗಿದ್ದಾರೆ.

ಅಮೆರಿಕದ ಸಮಾಜ, ಮಾಧ್ಯಮ ಗಳು, ಕಾನೂನು ನಿರ್ಮಾಪಕರು ಮತ್ತು ಅಮೆರಿಕನ್ ಸರಕಾರವು ಭಯೋತ್ಪಾದನಾ ವಿರೋಧಿ  ಹೋರಾಟದ ಇನ್ನೊಂದು ಮುಖವನ್ನು ಗಮನಿಸಿದವ ರಂತೆ ಆಡುತ್ತಿದ್ದಾರೆ. ಯುದ್ಧ ಸದಾ ಮುಂದುವರಿಯಲಿದೆ ಎಂಬುದನ್ನು ಸಾವಿನ ಸಂಖ್ಯೆ ನಮಗೆ ತೋರಿಸಿಕೊಡುತ್ತಿದೆ. ಉದಾಹರಣೆಗೆ, ಅಫ್ಘಾನಿಸ್ತಾನದ ಅಮೆರಿಕ ಅತಿಕ್ರಮಣವನ್ನು ತೆಗೆದು ಕೊಳ್ಳಿ-ಕಳೆದ ಕೆಲವಾರು  ವರ್ಷಗಳಲ್ಲಿ ಅದರ ತೀವ್ರತೆ ಕಡಿಮೆಯಾಗಿದ್ದರೂ 2018ರಲ್ಲಿ ಬಹಳ ಹೆಚ್ಚು ಸಂಖ್ಯೆಯಲ್ಲಿ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ.

ಮಧ್ಯೇಶ್ಯದಲ್ಲಿ ಯುದ್ಧ ಬಹುದೊಡ್ಡ ಸಂದಿಗ್ಧತೆಯನ್ನು ಸೃಷ್ಟಿಸಿದೆ.10 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿ ಸ್ವಂತ ಊರನ್ನು ತೊರೆದು ಪ ಲಾಯನ ಮಾಡ ಬೇಕಾಯಿತು.ಅಮೆರಿಕ ಮತ್ತು ಅದರ ಮಿತ್ರರು ಸೇರಿ ನಡೆಸಿದ ಯುದ್ಧಗಳು ಅದಕ್ಕಾಗಿ ಖರ್ಚಾಗಿರುವ ಹಣವೆಲ್ಲ ಬಂಡವಾಳಶಾಹಿ ಬಿಕ್ಕಟ್ಟನ್ನೇ ಎತ್ತಿ ಹಿಡಿಯುತ್ತದೆ. ಮುಂದೆ ಸಾಗಲು ಯುದ್ಧವನ್ನಲ್ಲದೆ ಬೇರೆ ದಾರಿಯನ್ನು ಆಡಳಿತಗಾರರು ಕಂಡಿಲ್ಲ.ಮುಂದಕ್ಕೆ ಸಮಾಜದ ಸರ್ವನಾಶದಲ್ಲಿ ಅದು ಕೊನೆಗೊಳ್ಳಬಹುದು.