ಫುಟ್‍ಬಾಲ್ ವಿಶ್ವಕಪ್‍ನಲ್ಲಿ ಮಹಿಳೆ: ವಿವಾದ ಮತ್ತು ನಿರೀಕ್ಷೆಗಳು

0
1319

ಸಬಾ ಅಝೀಝ್

ರಷ್ಯದಲ್ಲಿ ನಡೆದ ವಿಶ್ವಕಪ್‍ನಲ್ಲಿನ ಮಹಿಳೆ ಯರ ಸುರಕ್ಷೆ ಮತ್ತು ಮಹಿಳಾ ಸ್ವಾತಂತ್ರ್ಯ ಚರ್ಚೆಗೆ ತೆಗೆದುಕೊಂಡರೆ ಹಲವು ನಿರೀಕ್ಷೆಗಳು ಮತ್ತು ವಿವಾದಗಳು ಎದ್ದು ಬರುತ್ತಿವೆ. ಮಹಿಳೆ ಯರು ವಿವಿಧ ಕ್ಷೇತ್ರಗಳಲ್ಲಿ ಉಪಸ್ಥಿತಿಯನ್ನು ತೋರಿಸಿ ಕೊಟ್ಟ ಮೊದಲ ವಿಶ್ವಕಪ್ ಎಂದು ರಷ್ಯಕ್ಕೆ ಬೀಗಬಹುದು. ಆದರೆ ಮಹಿಳೆಯ ಸುರಕ್ಷೆಯ ವಿಚಾರದಲ್ಲಿ ಅಪವಾದವಾಗಿ ಹಲವು ಘಟನೆಗಳು ರಷ್ಯದಲ್ಲಿ ನಡೆದಿದೆ.
ಕಮೆಂಟರಿಯಲ್ಲಿ ಇತಿಹಾಸ ಸೃಷ್ಟಿಸಿದವರು:

ಬ್ರಿಟಿಷ್ ಸ್ಪೋರ್ಟ್ಸ್ ಜರ್ನಲಿಸ್ಟ್ ವಿಕ್ಕಿ ಸ್ಪಾರ್ಕ್ಸ್ ಮತ್ತು ಜರ್ಮನ್ ಫುಟ್‍ಬಾಲ್ ಕಮಾಂಡರ್ ಕ್ಲಡಿಯಾ ನ್ಯೂಮ್ಯಾನ್ ರಷ್ಯದಲ್ಲಿ ಇತಿಹಾಸ ಬರೆದರು ಎನ್ನಲಾಗುತ್ತಿದೆ. ವಿಶ್ವಕಪ್ ಫುಟ್‍ಬಾಲ್ ಸ್ಫರ್ಧೆಯ ಟೆಲಿವಿಷನ್ ಪ್ರಸಾರದ ನೇರ ದೃಶ್ಯ ವಿವರಣೆ ಮಹಿಳೆಯರು ನೀಡಿದ್ದಾರೆ. ಇಬ್ಬರು ಮಹಿಳೆಯರು ಇದನ್ನು ತಮ್ಮ ಹೆಸರಿಗೆ ಈಗ ಬರೆದುಕೊಂಡಿದ್ದಾರೆ ಎಂದು ಮಹಿಳಾ ಲೋಕ ಬೀಗಬಹುದು.
ನೂರಾರು ಮಹಿಳೆಯರು ವಿಶ್ವಕಪ್ ವರದಿಗೆ ರಷ್ಯಕ್ಕೆ ಬಂದಿದ್ದರು. ಟೆಲಿವಿಷನ್, ಪತ್ರಿಕೆ, ಆನ್‍ಲೈನ್ ಮಾಧ್ಯಮಗಳು, ರೇಡಿಯೊ ಮೊದಲಾದ ವಿವಿಧ ಮಾಧ್ಯಮಗಳಲ್ಲಿ ವಿಶ್ವಕಪ್ ವರದಿಯನ್ನು ನೀಡಲು ಅಥವಾ ವರದಿಗಾರಿಕೆಯ ಹಿನ್ನೆಲೆಯಲ್ಲಿ ಬಹಳಷ್ಟು ಮಹಿಳೆಯರು ಕೆಲಸ ಮಾಡಿದ್ದಾರೆ. ವರದಿಯಲ್ಲದೆ ವಿಶ್ವಕಪ್‍ಗೆ ಸಂಬಂಧಿಸಿ ಹಲವು ಕ್ಷೇತ್ರಗಳಲ್ಲಿ ಹಲವು ಮಹಿಳೆಯರು ತಮ್ಮ ಉಪಸ್ಥಿತಿಯನ್ನು ಖಾತರಿ ಪಡಿಸಿದರು.
ಲೈಂಗಿಕ ಶೋಷಣೆಗಳು:

ಆದರೆ ಎಷ್ಟೆಲ್ಲ ಸ್ವಾತಂತ್ರ್ಯ, ಸಾಧನೆ ಮಹಿಳೆ ಯರ ಬೆನ್ನಿಗಿದ್ದರೂ ಅವರ ವಿರುದ್ಧ ಹಲವಾರು ಘಟನೆಗಳು ನಡೆದಿವೆ. ಮಹಿಳೆಯರ ವಿರುದ್ಧ ದಾಳಿ, ಅತಿಕ್ರಮ, ಲೈಂಗಿಕ ಶೋಷಣೆ ಬಹಳಷ್ಟು ನಡೆದಿವೆ.
ಮಹಿಳಾ ವರದಿಗಾರರು ಕಿರುಕ್ಕೊಳಗಾಗುತ್ತಿದ್ದಾರೆ ಎನ್ನುವಂತಹ ವರದಿಗಳು ಬೆಳಕಿಗೆ ಬಂದಿವೆ. ಲೈವ್ ವರದಿಗಾರಿಕೆಯಲ್ಲಿ ತೊಡಗಿದ ವೇಳೆ ಮಹಿಳಾ ವರದಿಗಾರ್ತಿಯರನ್ನು ನೇರವಾಗಿ ಪುರುಷರು ಚುಂಬಿಸಿದ ಘಟನೆಗಳು ಅಲ್ಲಿ ನಡೆದವು. ಇದರ ವೀಡಿಯೊಗಳು, ಫೋಟೊಗಳು ಅಂತಾರಾಷ್ಟ್ರೀಯ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಪ್ರಕಟಿಸಿ ವಿವಾದ ಸೃಷ್ಟಿಸಿದವು. ಮಾಸ್ಕೋದಿಂದ ಲೈವ್ ರಿಪೋರ್ಟಿನ ವೇಳೆ ಕೊಲಂಬಿಯನ್ ಮಾಧ್ಯಮ ವರದಿಗಾರ್ತಿ ಜೂಲಿ ಯಟ್ ಗೊನ್ಸಾವಲಾಸ್, ಬ್ರೆಝಿಲಿನ ಜೂಲಿಯ ಗುಮಾರಸ್‍ಗೆ ಇಂಥ ಕೆಟ್ಟ ಅನುಭವವಾಗಿವೆ.
ಪುರುಷರ ವಿಶ್ವಕಪ್:

ಆಂಟಿ ಡಿಸ್ಕ್ರಿನೇಶನನ್ ಬಾಡಿ ಫೇರ್ ನೆಟ್ ವರ್ಕ್ ಎಂಬ ಸಂಘಟನೆಯು ಫುಟ್ ಬಾಲನ್ನು ಪುರಷ ಕೇಂದ್ರಿತ ಆಟ ಎಂದು ಎತ್ತಿತೋರಿಸಿತ್ತು. ವಿಶ್ವಕಪ್ ಆಯೋಜನೆಯ ನಾಯಕತ್ವದಲ್ಲಿ ಸ್ಟೇಡಿಯಂನಲ್ಲಿ ಮಹಿಳೆಯರಿಗಾಗಿದ್ದ ಟಾಯ್ಲೆಟ್‍ಗಳ ಸಂಖ್ಯೆಯನ್ನು ಪರಿಶೀಲಿ ಸಿದರೆ ಈ ತಾರತಮ್ಯ ಗೊತ್ತಾಗುತ್ತದೆ. ಟಿವಿ ಜಾಹೀರಾತುಗಳಲ್ಲಿ ಇತರರನ್ನು ಆಕರ್ಷಿಸಲು ಮಹಿಳೆಯರನ್ನು ಅಲಂಕಾರವಾಗಿ ಮಾತ್ರ ಬಳಸಲಾಗಿತ್ತು.
ಮಹಿಳಾ ಫುಟ್‍ಬಾಲ್ ಅಭಿಮಾನಗಳ ಮೇಲೆ ಲೈಂಗಿಕ ಶೋಷಣೆ, ಕ್ರೌರ್ಯ ನಡೆದಿವೆ. ಮಹಿಳೆಯರನ್ನು ಪುರುಷರು ಬಲವಾಗಿ ಚುಂಬಿ ಸಿದ್ದು ಅಪ್ಪಿಕೊಂಡಿದ್ದು ಹೊರ ಜಗತ್ತಿಗೆ ಸುದ್ದಿ ಯಾಗಿ ದೊರಕಿದೆ. ಸ್ಟೇಡಿಯಂನಲ್ಲಿ ಮಹಿಳೆಯರು ವಿರುದ್ದ ಅಶ್ಲೀಲ ಸನ್ನೆಗಳು, ಕೆಟ್ಟ ಪದಪ್ರಯೋಗಳಿ ತ್ಯಾದಿ ಜರಗಿದವು. ಜಗತ್ತಿನ ವಿವಿಧ ಕಡೆಗಳಿಂದ ಬಂದವರು ವಿವಿಧ ಭಾಷೆಗಳಲ್ಲಿ ಅಶ್ಲೀಲ ಮಾತುಗಳನ್ನು ಆಡಿದರು. ¸ ಸ್ಟೇಡಿಯಂನಲ್ಲಿದ್ದ ಮಹಿಳೆಯರ ಫೋಟೊಗಳನ್ನು ಕೆಲವು ಸುದ್ದಿ ಮಾಧ್ಯಮಗಳು ಅಶ್ಲೀಲವಾಗಿ ಪ್ರದರ್ಶಿಸಿದವು. ಪ್ರಚಾರಮಾಡಿದ್ದವು. ಇವೆಲ್ಲ ಮಹಿಳೆಯರನ್ನು ಬೆಂಬತ್ತಿ ಬಂದ ಕೆಟ್ಟ ಅನುಭವಗಳು. ಹೀಗಿದ್ದೂ ಮಹಿಳೆ ಈ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಾಧಿಸಿದ್ದೇನೆ ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಆದರೆ ಸಾಧಿಸಿದ್ದೇವೆ ಅನ್ನುವವರು ಅವೆಲ್ಲವನ್ನೂ ಮರೆತು ಸಮಾಧಾನಪಟ್ಟುಕೊಳ್ಳಬಹುದು.
ಪಂದ್ಯದ ವಿಶ್ಲೇಷಣೆಯಲ್ಲಿಯೂ ಮಹಿಳೆಯರು:

ಅಮೆರಿಕದಲ್ಲಿ ಮೊದಲಾಗಿ ವಿಶ್ವಕಪ್ ವಿಶ್ಲೇಷಣೆಗೆ ಮಹಿಳೆಯರನ್ನು ಬಳಸಿಕೊಳ್ಳಲಾಗಿತ್ತು. ಹೋರಾಟಗಾರರು ಮತ್ತು ಪತ್ರಕರ್ತರೆಲ್ಲ ಇವರನ್ನು ಶ್ಲಾಘಿಸಿದಾಗ ಕೆಲವು ವಿಮರ್ಶಕರು ಪುರುಷರ ಫುಟ್‍ಬಾಲನ್ನು ಯಾಕೆ ಮಹಿಳೆಯರಿಂದ ವಿಶ್ಲೇಷಿಸಬೇಕೆಂದು ಕೇಳಿದರು.
ಅರ್ಜಂಟೀನ ಸೋತಿತು:

ವಿಶ್ವಕಪ್ ಆರಂಭವಾಗುವ ಒಂದು ತಿಂಗಳ ಮೊದಲು ಅರ್ಜಂಟೀನ ಫುಟ್‍ಬಾಲ್ ಅಸೋಸಿ ಯೇಶನ್ ಹೊರಡಿಸಿದ ಟ್ರಾವಲ್ ಗೈಡ್‍ನಲ್ಲಿ ರಷ್ಯದ ಮಹಿಳೆಯರನ್ನು ಹೇಗೆ ಆಕರ್ಷಿಸಬಹುದು ಎನ್ನುವ ತಲೆಬರಹವಿತ್ತು. ಇದು ವಿವಾದವಾದಾಗ ಅಸೋಸಿಯೇಶನ್ ಈ ವಿಷಯವನ್ನು ಕೈಬಿಟ್ಟಿತು. ವಿಷಾದವನ್ನೂ ಸೂಚಿಸಿತು. ಫುಟ್‍ಬಾಲ್‍ನಲ್ಲಿ ಅಲ್ಲಿ ತಂಡ ಸೋತು ಹೊರದಬ್ಬಲ್ಪಟ್ಟಿತು.
ಇರಾನಿನ ವಿಶ್ವಕಪ್:

1979ರ ನಂತರ ಇರಾನ್‍ನಲ್ಲಿ ಮೊದಲ ಬಾರಿ ಮಹಿಳೆಯರಿಗೆ ಫುಟ್‍ಬಾಲ್ ವೀಕ್ಷಿಸುವ ಅವಕಾಶ ಸಿಕ್ಕಿತು. ರಾಜಧಾನಿ ಟೆಹ್ರಾನ್‍ನ ಫುಟ್ ಬಾಲ್ ಸ್ಟೇಡಿಯಂನಲ್ಲಿ ಬೃಹತ್ ಪರದೆಗಳಲ್ಲಿ ತಮ್ಮ ದೇಶದ ಪಂದ್ಯಾಟವನ್ನು ನೋಡಲು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಯಿತು.. ಮಹಿಳೆಯರು ಸ್ಟೇಡಿಯಂಗೆ ಹರಿದು ಬಂದರು.
ಮಹಿಳೆ ಸುರಕ್ಷೆ ಎಲ್ಲೆಲ್ಲಿಯೂ ವಿಷಯವೇ ಆಗಿದೆ. ಗ್ರಾಮಗಳು, ನಗರಗಳು ಎಂದು ಇದರಲ್ಲಿ ವ್ಯತ್ಯಾಸವಿಲ್ಲ. ಇದು ಒಂದು ನಾಡಿಗೆ ಮೀಸ ಲಾದ ವಿಷಯವೂ ಅಲ್ಲ. ಈಗ ರಷ್ಯದ ವಿಶ್ವಕಪ್‍ಗೆ ಸಂಬಂಧಿಸಿದ ಘಟನೆಗಳು ಇದನ್ನು ತೋರಿಸಿಕೊಟ್ಟಿವೆ.
ಕೃಪೆ: ಅಲ್‍ಜಝೀರ