ಭಾರತದಲ್ಲಿ ಹೆಚ್ಚುತ್ತಿರುವ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಅಮೇರಿಕಾದ ಸಂಸ್ಥೆಯಿಂದ ಬಹಿರಂಗ

0
1122

 

ವಾಷಿಂಗ್ಟನ್: ಭಾರತದಲ್ಲಿ ಸರಕಾರವನ್ನು ವಿಮರ್ಶಿಸುವ ಮಾಧ್ಯಮ ಸಂಸ್ಥೆಗಳನ್ನು ಒತ್ತಡ ಹೇರುವ ಮೂಲಕ ಕಿರುಕುಳ ನೀಡಿ ಸತಾಯಿಸಲಾಗುತ್ತಿದೆಯೆಂದು ಅಮೇರಿಕದ ಟ್ರಂಪ್ ಸರಕಾರ ಹೇಳಿದೆ.
ಅಮೇರಿಕದ ಸ್ಟೇಟ್ ಡಿಪಾಟ್ ್ಮೆಂಟ್ ಬಿಡುಗಡೆಗೊಳಿಸಿದ ವಾರ್ಷಿಕ ಮಾನವ ಹಕ್ಕುಗಳ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆಯೆಂದು ಅಮೇರಿಕದ ಮಾಧ್ಯಮಗಳು ವರದಿ ಮಾಡಿದೆ. ಭಾರತದ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಆದರೂ ಪತ್ರಿಕಾ ಸ್ವಾತಂತ್ರ್ಯದ ಕುರಿತು ಸ್ಪಷ್ಟವಾಗಿಲ್ಲ. ಭಾರತದ ಸರಕಾರ ಈ ವಿಚಾರವನ್ನು ಗೌರವಿಸಿದರೂ ಸರಕಾರವನ್ನು ವಿಮರ್ಶಿಸುವ ಮಾಧ್ಯಮಗಳು ತೀವ್ರ ಒತ್ತಡವನ್ನು ಅನುಭವಿಸುತ್ತಿವೆ” ಎಂದು ಆ ವರದಿಯಲ್ಲಿ ಹೇಳಲಾಗಿದೆ.
ವಿಶ್ವದ ಹೆಚ್ಚಿನ ಎಲ್ಲಾ ದೇಶಗಳಲ್ಲಿ ನಡೆಯುವ ಮಾನವ ಹಕ್ಕು ಉಲ್ಲಂಘನೆಯ ಕುರಿತು ಅಮೇರಿಕವು ವಾರ್ಷಿಕ ವರದಿ ತಯಾರಿಸುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ತೀರಾ ಶೋಚನೀಯ ಎಂದು ವರದಿಯಲ್ಲಿ ತಿಳಸಿದೆ.
ಟ್ರಂಪ್ ಆಡಳಿತವು ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ದಕ್ಕೆ ತರುತ್ತಿರುವ ವಿಮರ್ಶೆ ಗಳು ವ್ಯಾಪಕವಾಗಿ ಕೇಳಿ ಬರುತ್ತಿರುವಾಗ ಈ ವರದಿ ಬಹಿರಂಗವಾಗಿದೆ. ಟ್ರಂಪ್‍ರ ಕಾರ್ಯ ವೈಖರಿಯನ್ನು ವಿಮರ್ಶಿಸುವ ಮಾಧ್ಯಮಗಳನ್ನು ಪೊಳ್ಳು ಮಾಧ್ಯಮವೆಂದು ಟ್ರಂಪ್ ಅವರೇ ಸ್ವತಃ ಕರೆದಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಮಾಧ್ಯಮ ರಂಗದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೂಸ್ಟ್ ಇಂಡ್ಯಾ ಫ್ರೀಡಮ್ ನ ವರದಿಯ ಅನುಸಾರ ಸಮೀಪದ ವರ್ಷಗಳಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ದಕ್ಕೆಯುಂಟಾಗಿದೆ. 2016 ಜನವರಿಯಿಂದ ಮತ್ತು 2017ರ ಎಪ್ರಿಲ್ ವರೇಗಿನ ಅವಧಿಯಲ್ಲಿ 54 ಬಾರಿ ದಾಳಿ ನಡೆದಿವೆ. ಮೂರು ಟಿ.ವಿ. ಚಾನೆಲ್ ಗಳನ್ನೂ ನಿಶೇಧಿಸಲಾಗಿದೆ.  ಅಲ್ಲದೆ ಹಲವು ವೆಬ್ ಸೈಟ್ ಗಳನ್ನೂ ಸ್ಥಗಿತ ಗೊಳಿಸಲಾಗಿದೆ.
ಪ್ರಜಾಪ್ರಭುತ್ವದ ನಾಲ್ಕನೇಯ ಸ್ಥಂಭವನ್ನು ತನ್ನ ನಿಯಂತ್ರಣದಲ್ಲಿಡಲು ಕೇಂದ್ರ ಸರಕಾರ  ಶ್ರಮಿಸುತ್ತದೆಯೆಂಬುದು ನಿಜ. ಸುಳ್ಳು ಸುದ್ದಿಗೆ ನಿಯಂತ್ರಣ ಹೇರುವ ºನೆಪದÀಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೇಡಿ ಹಾಕುವಂತಹ ಕಾನೂನು ತರುವ ಶ್ರಮದಲ್ಲಿ ಕೇಂದ್ರ ಸರಕಾರ ತೊಡಗಿಸಿಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು. ಕೊನೇಗೆ ವ್ಯಾಪಕ ವಿರೋಧ ಕೇಳಿ ಬಂದದ್ದರಿಂದ ಅದರಿಂದ  ಸರಕಾರ ಹಿಂದೆ ಸರಿಯಿತು. ಆದರೆ ಆ ಮರಣ ಶಾಸನ ಮುಂದೆ ಜಾರಿಗೆ ತರುವ ಸಾದ್ಯತೆಯೂ ಇಲ್ಲದಿಲ್ಲ.