ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕೇಂದ್ರದ ಪೋಸ್ಕೊ ಕಾಯ್ದೆ ತಿದ್ದುಪಡಿಯನ್ನು ಚುನಾವಣಾ ಗಿಮಿಕ್ ಎಂದು ಕರೆದಿರುವ ನಿರ್ಭಯಾಳ ತಂದೆ, ಎಲ್ಲ ಅತ್ಯಾಚಾರಿಗಳನ್ನೂ ನೇಣಿಗೆ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಅತ್ಯಾಚಾರವೆಂಬುದು ಅತ್ಯಾಚಾರವೇ. ಅದರಲ್ಲಿ ಮಕ್ಕಳು ದೊಡ್ಡವರು ಎಂಬುದಿಲ್ಲ. ಹನ್ನೆರಡು ವರ್ಷಕ್ಕಿಂತ ಕೆಳಗಿನವರನ್ನು ಅತ್ಯಾಚಾರಗೈದರೆ ಮರಣದಂಡನೆ ಎಂಬುದು ಸರಿಯಲ್ಲ. ಎಲ್ಲ ಅತ್ಯಾಚಾರಿಗಳನ್ನೂ ಒಂದೋ ಜೀವಾವಧಿ ಶಿಕ್ಷೆಗೆ ಅಥವಾ ಮರಣದಂಡನೆಗೆ ಗುರಿಪಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಸರಕಾರದ ಈ ಕಾನೂನು 2019 ರ ಚುನಾವಣೆಯನ್ನು ಗಮನದಲ್ಲಿರಿಸಿ ಮಾಡಲಾದ ಗಿಮಿಕ್ ಅಷ್ಟೇ ಎಂದವರು ಹೇಳಿದ್ದಾರೆ.
2012 ಡಿಸೆ೦ಬರ್16 ರಂದು 23 ವರ್ಷದ ನಿರ್ಭಯಳನ್ನು ಚಲಿಸುವ ಬಸ್ಸಿನಲ್ಲಿ ಅತ್ಯಾಚಾರ ಮಾಡಲಾಗಿತ್ತು. ಡಿಸೆ೦ಬರ್ 29 ರಂದು ಆಕೆ ತೀವ್ರ ಗಾಯಗಳ ಕಾರಣದಿಂದ ಆಸ್ಪತ್ರೆಯಲ್ಲಿ ನಿಧನಳಾಗಿದ್ದಳು.












