ವರುಣಾದಿಂದ ವಿಜೆಯೇಂದ್ರ ಔಟ್:ಯಡಿಯೂರಪ್ಪರ ವಿರುದ್ಧ ಹೈಕಮಾಂಡ್ ನಡೆಸಿತೇ ಸಂಚು?

0
1404

ನ್ಯೂಸ್ ಡೆಸ್ಕ್

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಕ್ಕಳ ನಡುವಿನ ಜಿದ್ದಾ ಜಿದ್ದಿಗೆ ವೇದಿಕೆಯಾಗಿ ಗುರುತಿಸಿಕೊಂಡಿರುವ ಮೈಸೂರಿನ ವರುಣಾ ಕ್ಷೇತ್ರದಲ್ಲಿ  ಇವತ್ತು  ಯಡಿಯೂರಪ್ಪರು ಸ್ವಪಕ್ಷದ ಕಾರ್ಯಕರ್ತರಿಂದಲೇ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಯಿತು.

ಈವರೆಗೆ ಯಡಿಯೂರಪ್ಪರ ಮಗ ವಿಜೆಯೇಂದ್ರ ಸ್ಪರ್ಧಿಸುವುದಾಗಿ ಹೇಳಲಾಗಿದ್ದ ಮತ್ತು ಈಗಾಗಲೇ ಅವರು ಅಲ್ಲೇ ಬಿಡಾರ ಹೂಡಿ ಪ್ರಚಾರ ಕೈಗೊಳ್ಳಲಾಗಿದ್ದರೂ ಇದೀಗ  ಮಗನಿಗೆ ಟಿಕೆಟ್ ಕೈತಪ್ಪಿರುವುದನ್ನು ಯಡಿಯೂರಪ್ಪ ರು ಹತಾಶೆಯಿಂದು ಪಕ್ಷದ ಕಾರ್ಯಕರ್ತರ ಮುಂದು ಹೇಳಿಕೊಂಡಿದ್ದು, ಇದು  ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಯಕರ್ತರು ಕುರ್ಸಿ, ಮೇಜುಗಳನ್ನು ಎಸೆದು ತಳ್ಳಿ, ರಂಪಾಟ ನಡೆಸಿದ್ದಾರೆ. ಈವರೆಗೆ ವಿಜೆಯೇಂದ್ರರೇ  ಅಭ್ಯರ್ಥಿ ಎಂದು ಹೇಳಿದ್ದ ಬಿಜೆಪಿ, ಇದೀಗ ದಿಢೀರ್ ಆಗಿ ಮಾತು ಬದಲಿಸಲು ಆರೆಸ್ಸೆಸ್ ಸಮೀಕ್ಷೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಇದು ಯೆಡಿಯೂರಪ್ಪರ ಪ್ರಭಾವವನ್ನು ಪಕ್ಷದಲ್ಲಿ ಕುಗ್ಗಿಸಲು ಮಾಡಲಾದ ಯೋಜಿತ ತಂತ್ರ ಎಂದೂ ಹೇಳಲಾಗುತ್ತಿದೆ. ಯಡಿಯೂರಪ್ಪರ ಮುಖಭಾವವೂ ಏನೋ ಸಂಚು ನಡೆದಿದೆ ಎಂಬ ಸೂಚನೆಯನ್ನು ಕೊಡುವಂತಿತ್ತು. ಕಾಂಗ್ರೆಸ್ ಅಂತೂ ಈ ಬೆಳವಣಿಗೆಯನ್ನು ಚೆನ್ನಾಗಿ ಬಳಸಿಕೊಳ್ಳುವ ಸೂಚನೆ ನೀಡಿದ್ದು, ಸೋಲಿನ ಭೀತಿಯಿಂದ ಮಾಡಲಾದ ಪಲಾಯನವಾದ ಎಂದು ಕುಟುಕಿದೆ. ಬಹುಶಃ, ಯಡಿಯೂರಪ್ಪರು ಪಕ್ಷದಲ್ಲಿ ಎಲ್ಲರಂತೆ ಓರ್ವ ಅಭ್ಯರ್ಥಿಯೇ ಹೊರತು ಅವರು ಹೇಳಿದಂತೆ ಪಕ್ಷ ಇಲ್ಲ ಅನ್ನುವ ಸಸೂಚನೆಯನ್ನು ಈ ಮೂಲಕ ಪಕ್ಷ ನೀಡಿದೆ ಎಂಬ ಮಾತೂ ಕೇಳಿಬರುತ್ತಿದೆ.