ಯೆಚೂರಿ-ಕಾರಾಟ್ ಜಗಳದಲ್ಲಿ ಕೂಸು ಬಡವಾಯಿತು

0
1061

ದೇಶದಲ್ಲಿ ಕೋಮುವಾದಿ ಪಕ್ಷ ವೊಂದು ತನ್ನ ಅಜೆಂಡಾವನ್ನು ಹಂತಹಂತವಾಗಿ ಜಾರಿ ಗೊಳಿಸುತ್ತಾ ಜಾತ್ಯಾತೀತರಲ್ಲಿ ಆತಂಕ ಹುಟ್ಟಿಸು ವಂತಹ ಪ್ರಕ್ರಿಯೆಯು ಯಥಾವತ್ತಾಗಿ ನಡೆಸಿ ಕೊಂಡು ಬರುತ್ತಿರುವಾಗ ಅದಕ್ಕೆ ಪರ್ಯಾಯವಾಗಿ ಪ್ರಬಲ ಪಕ್ಷವನ್ನು ಬೆಂಬಲಿಸುವ ಅನಿ ವಾರ್ಯತೆಗೆ ಪ್ರಜ್ಞಾವಂತ ಪ್ರಜೆಗಳು ಒಳಗಾಗುವುದು ಸಹಜವಾಗಿದೆ. ಹಾಗೆಯೇ ಆಡಳಿತಾರೂಢ ಪಕ್ಷಕ್ಕೆ ಪ್ರತಿ ಪಕ್ಷಗಳ ನಡುವಿನ ಬಿಕ್ಕಟ್ಟು ವರದಾನವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಕೂಡಾ ಎಡ ಪಕ್ಷ ಗಳಿಗೆ ಇಲ್ಲವಾಯಿತೇ ಎಂಬ ಅನುಮಾನವೂ ಅದರ ಇತ್ತೀಚಿನ ನಡವ ಳಿಕೆಯಿಂದ ಮೂಡಿ
ಬರುವುದು ಸಹಜ.
ಜ. 19ರಿಂದ ಜ. 21ರ ತನಕ ಕೋಲ್ಕತ್ತದಲ್ಲಿ ನಡೆದ ಸಿ.ಪಿ.ಎಂ.ನ ಕೇಂದ್ರ ಸಮಿತಿ ಸಭೆಯ ನಿರ್ಣಯದ ಕುರಿತು ಈ ದೇಶದ ಜನರು ಕುತೂಹಲದಲ್ಲಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಅನೇಕ ಬಾರಿ ಚರ್ಚೆ ಕೂಡಾ ನಡೆದಿದೆ. ಯಾಕೆಂದರೆ ಕೋಮುವಾದಿ ಪಕ್ಷವೊಂದು ದೇಶದ ಪ್ರಜಾಪ್ರಭುತ್ವಕ್ಕೆ ಕಂಟಕವಾಗುವ ರೀತಿಯಲ್ಲಿ ಕಾರ್ಯಾಚರಿಸುತ್ತಿರುವಾಗ ಪ್ರತಿಪಕ್ಷಗಳು ಐಕ್ಯದಿಂದ ಒಗ್ಗಟ್ಟಾಗಿ ಅದನ್ನು ಎದುರಿಸಬೇಕಿತ್ತು. ಆದರೆ ಸಿ.ಪಿ.ಎಂ.ನ ಕೇಂದ್ರ ಸಮಿತಿ ಸಭೆಯು ತಳೆದ ನಿರ್ಧಾರವು ಅಂತಹದ್ದೊಂದು ಚಿಂತನೆಗೆ ತಣ್ಣೀ ರೆರಚಿದೆ. ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಮಂಡಿಸಿದ ಸಭೆ ಕರಡನ್ನು ತಿರಸ್ಕರಿಸಿದೆ. ಮುಂದಿನ ಚುನಾ ವಣೆಯಲ್ಲಿ ಕಾಂಗ್ರೆಸ್ ಜೊತೆಯ ಯಾವುದೇ ಮೈತ್ರಿ ಕೂಟವಿಲ್ಲ ಎಂಬ ಸಂದೇಶವನ್ನು ಅದು ನೀಡಿದೆ. ಸಿಪಿಎಂನ ಕೇಂದ್ರ ಸಮಿತಿ ಸಭೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪಕ್ಷದ ಕಾರ್ಯ ದರ್ಶಿಯವರು ಮಂಡಿಸಿದ ಕರಡನ್ನು ಮತದಾನಕ್ಕೆ ಹಾಕಿ ತಿರಸ್ಕರಿಸಿದೆ. ಎಡಪಕ್ಷದಲ್ಲಿ ಸೀತಾರಾಮ್ ಯೆಚೂರಿ ಮತ್ತು ಪ್ರಕಾಶ್ ಕಾರಟ್ ಬಣದ ನಡುವಿನ ಆಂತರಿಕ ತಿಕ್ಕಾಟವು ಜಾತ್ಯಾತೀತರ ಐಕ್ಯಕ್ಕೆ ತೊಡಕಾಗುವ ಸಾಧ್ಯತೆಯಿದೆ. 2018ರಲ್ಲಿ 8 ವಿಧಾನ ಸಭೆಗಳಿಗೆ ಚುನಾವಣೆ ನಡೆಯಲಿದೆ. ಅದರಲ್ಲಿ ಈಗಾಗಲೇ ಮೂರು ಘೋಷಣೆಯಾಗಿದೆ. 2019ರ ಲೋಕಸಭಾ ಚುನಾವಣೆಯೂ ನಡೆಯಲಿದೆ. ಹೀಗಿರುವಾಗ ಎಡಪಕ್ಷವು ಬಹಳ ಜವಾ ಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗಿತ್ತು. ಯಾಕೆಂದರೆ ಬಿಜೆಪಿಯು ಈ ದೇಶದ ದುರಂತ ಎಂಬುದು ಎಡಪಕ್ಷಗಳಿಗೆ ಚೆನ್ನಾಗಿ ತಿಳಿದಿದೆ. ಬಿಜೆಪಿಯನ್ನು ಮಟ್ಟ ಹಾಕಲು ಕೇವಲ ನಮ್ಮಿಂದ ಮಾತ್ರ ಸಾಧ್ಯವಿಲ್ಲ ಎಂಬುದೂ ಅದಕ್ಕೆ ತಿಳಿದಿದೆ. ಹೀಗಿರುವಾಗ ಅದನ್ನು ಮಟ್ಟಹಾಕಲು ಸಾಧ್ಯ ಇರುವವರ ಜೊತೆ ಕೈ ಜೋಡಿಸುವುದು ಜಾಣ ತನದ ನಿರ್ಧಾರವಲ್ಲವೇ. ಆದರೆ ತಮ್ಮ ಆಂತರಿಕ ಕಲಹದ ದುಷ್ಪರಿಣಾಮಕ್ಕೆ ಈ ದೇಶದ ಪ್ರಜೆಗಳು ಬಲಿಯಾಗಬೇಕೇ? ಕೇಂದ್ರ ಸಮಿತಿ ಸಭೆಯು ತಾನು ಮಂಡಿಸಿದ ಕರಡು ತಿರಸ್ಕøತವಾದ ಕಾರಣ ಯೆಚೂರಿಯವರು ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದರೂ ಅಚ್ಚರಿಯಿಲ್ಲ. ರಾಜಕೀಯ ಶತ್ರು ಬಿಜೆಪಿಯ ವಿರುದ್ಧದ ಹೋರಾಟಕ್ಕೆ ಸರಿಯಾದ ನಿರ್ಧಾರ ತಾಳದಷ್ಟು ದುರ್ಬಲವಾಗುವ ಹಂತಕ್ಕೆ ಎಡಪಕ್ಷಗಳು ತಲುಪಿರುವುದು ಶೋಚನೀಯ.
ಕಾಂಗ್ರೆಸ್ ಜೊತೆ ಸೇರಿ ಬಿಜೆಪಿ ಯನ್ನು ಸೋಲಿಸಬೇಕೆಂಬುದು ಸೀತಾ ರಾಮ್ ಯೆಚೂರಿಯವರ ನಿಲುವಾಗಿತ್ತು. ಅದಕ್ಕೆ ಸಿಪಿಎಂನ ಬ ಂಗಾಳ ಘಟಕದ ಬೆಂಬಲವೂ ಅವರಿಗಿತ್ತು. ಆದರೆ ಕಾಂಗ್ರೆಸ್ ಜೊತೆ ಯಾವುದೇ ರೀತಿಯ ಹೊಂದಾಣಿಕೆ ಸಾಧ್ಯವಿಲ್ಲ ವೆಂಬುದು ಪ್ರಕಾಶ್ ಕಾರಟ್‍ರ ನಿಲುವು. ಅದಕ್ಕೆ ಸಿಪಿಎಂ ಕೇರಳ ಘಟಕದ ಬೆಂಬಲವೂ ಇತ್ತು. ಈ ಗಂಭೀರ ಚರ್ಚೆ ನಡೆದು ಕೊನೆಗೆ ಮತದಾನ ನಡೆಯಿತು. ಪ್ರಕಾಶ್ ಕಾರಟ್‍ರ ನಿಲುವಿನ ಪರ 51 ಮತ ಬಿದ್ದರೆ ಯೆಚೂರಿ ಪರ 35 ಮತ ಬಿದ್ದುವು. ಈ ಮೂಲಕ ಕಾರಾಟ್‍ರ ನಿಲುವನ್ನು ಅಂಗೀಕರಿಸಲಾಯಿತು. ಇದು ಪಕ್ಷದಲ್ಲಿ ಆಂತರಿಕ ಗೊದಲಗಳಿಗೆ ಕಾರಣ ವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಪ್ರಧಾನ ಕಾರ್ಯದರ್ಶಿಯೊಬ ್ಬರು ಮಂಡಿಸಿದ ಕರಡು ಪ್ರಮೇಯನ್ನು ಮೊದಲು ಪಾಲಿಟ್ ಬ್ಯೂರೋ ಬಳಿಕ ಕೇಂದ್ರ ಸಮಿತಿಯು ತೀರ್ಮಾನ ಕೈಗೊಂಡಿರುವುದು ಸಿಪಿಎಂನ ಇತಿಹಾಸದಲ್ಲಿ ಅಪರೂಪದ ಕ್ರಮವಾಗಿದೆ. ಇದು ಯೆಚೂರಿ ಗುಂಪಿಗೆ ಹಿನ್ನಡೆಯ ಸೂಚನೆಯಾಗಿದೆ. ಎಡಪಕ್ಷದೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಇದು ತಿಳಿಸುತ್ತದೆ. ಜಾತ್ಯತೀತ ಪಕ್ಷ ವೊಂದರಲ್ಲಿ ಇಂತಹ ಬೆಳವಣಿಗೆಯು ಪ್ರಜ್ಞಾವಂತ ನಾಗರಿಕರಲ್ಲಿ ಆತಂಕ ಮೂಡಿದುದರಲ್ಲಿ ಆಶ್ಚರ್ಯವಿಲ್ಲ. ಅದನ್ನು ಪಕ್ಷವು ಗಮನಿಸಿಕೊಂಡು ಜವಾಬ್ದಾರಿಯುತ ನಿರ್ಧಾರ ತಾಳ ಬೇಕಾಗಿತ್ತು. ಅದು ಸದ್ಯ ದೇಶದ ಅಗತ್ಯ ಕೂಡ ಹೌದು. ಹಾಗೆಯೇ ಕಾಂಗ್ರೆಸ್ ಕೂಡಾ ತನ್ನ ವರ್ತನೆಯಲ್ಲಿ ಬದಲಾವಣೆ ತರಬೇಕು.

@ ಸಲೀಮ್ ಬೋಳಂಗಡಿ