ರೋಹಿಂಗ್ಯನ್ ಮುಸ್ಲಿಮರ ನೆರವಿಗೆ ಮುಂದೆ ಬಂದ ಯುಎಇ: 70 ಲಕ್ಷ ಡಾಲರ್ ಕೊಡುಗೆ

0
1645

ದುಬೈ, ಅ.25: ರೋಹಿಂಗ್ಯನ್ ಮುಸ್ಲಿಮರ ಕಷ್ಟ ಕಡಿಮೆ ಮಾಡುವುದಕ್ಕಾಗಿ ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸುವುದಕ್ಕಾಗಿ ಯುಎಇ 45 ಕೋಟಿ ರೂಪಾಯಿ ಅರ್ಥಾತ್ 70 ಲಕ್ಷ ಡಾಲರ್ ನೀಡುವುದಾಗಿ ಘೋಷಿಸಿದೆ. ಈ ಘೋಷಣೆಯನ್ನು ರೋಹಿಂಗ್ಯನ್ ನಿರಾಶ್ರಿತರ ಸಂಕಷ್ಟದ ಕುರಿತು ಆಯೋಜಿಸಲಾದ ಒಂದು ವಿಶ್ವ ಸಂಸ್ಥೆಯ ಸಮ್ಮೇಳನದಲ್ಲಿ ಮಾಡಲಾಗಿದೆ.
ಯುಎಇ ಸಚಿವೆ ಮೀತಾ ಬಿನ್ತ್ ಸಲೀಲ್ ಅಲ್ ಶಮ್ಶಿ ಬಾಂಗ್ಲಾ ದೇಶದ ರೋಹಿಂಗ್ಯನ್ ನಿರಾಶ್ರಿತ ಸಮುದಾಯಕ್ಕೆ ನೀಡುವ ಪರಿಹಾರವನ್ನು ಸ್ವಾಗತಿಸಿದ್ದಾರೆ. ಮ್ಯಾನ್ಮಾರ್‍ನ ರಾಖ್ನೊ ರಾಜ್ಯದಲ್ಲಿ ಹಿಂಸೆ ಹರಡಿದ ಬಳಿಕ 6 ಲಕ್ಷಕ್ಕೂ ಅಧಿಕ ರೋಹಿಂಗ್ಯನ್ ನಿರಾಶ್ರಿತರು ಬಾಂಗ್ಲಾ ದೇಶಕ್ಕೆ ಬಂದಿದ್ದಾರೆ.
ಸಚಿವೆ ರೋಹಿಂಗ್ಯನ್ ಮುಸ್ಲಿಮರ ವಿರುದ್ಧ ನಡೆಸಲಾದ ಹಿಂಸೆ ಕೇವಲ ನಿರ್ವಸಿತರನ್ನು ಸೃಷ್ಟಿಸಲಿಲ್ಲ, ರಕ್ಷಣೆಗಾಗಿ ಮನೆ ಮಠ ಬಿಟ್ಟು ಓಡಿ ಬರಬೇಕಾದ ಸ್ಥಿತಿಯನ್ನು ನಿರ್ಮಿಸಿತು. ಸಾವಿರಾರು ಅಮಾಯಕ ನಾಗರಿಕರ ಹತ್ಯೆ ಮಾಡಲಾಯಿತು ಎಂದು ಹೇಳಿದ್ದಾರೆ. ರೋಹಿಂಗ್ಯನ್ನರಿಗೆ ಅವರ ದೇಶದಲ್ಲಿ ಮೂಲಭೂತ ಹಕ್ಕನ್ನು ಕೂಡಾ ಕಸಿಯಲಾಗಿದೆ. ಈ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಕ್ರೌರ್ಯವೆಸಗಲಾಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು. ಯುಎಇ ನೀಡಿದ ನೆರವಿಗಾಗಿ ಹಲವಾರು ದೇಶಗಳು ಅಭಿನಂದಿಸಿವೆ.