ಲೆನಿನ್ ಪ್ರತಿಮೆ: ಗಮನ ಸೆಳೆದ ರಾಜೀವ್, ಟೋನಿ ಟ್ವೀಟ್ ಸಮರ

0
1092

ಬೆಂಗಳೂರು: ಬಿಜೆಪಿ ಬೆಂಬಲಿಗರು ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಯನ್ನು ಉರುಳಿಸಿದ ತರುವಾಯ ದೇಶಾದ್ಯಾ೦ತ  ತೀವ್ರ ಚರ್ಚೆಗಳು ನಡೆದಿತ್ತು. ಆ ಪ್ರತಿಮೆ ಉರುಳಿದ ಬಳಿಕ ದೇಶದ ಇತರ ರಾಜ್ಯಗಳಲ್ಲೂ ಪ್ರತಿಮೆ ಉರುಳುವಿಕೆಗಳು ನಡೆದುವು. ಲೆನಿನ್ ಪ್ರತಿಮೆ ಉರುಳಿಸಿದುದನ್ನು ಆರಂಭದಲ್ಲಿ ಬಿಜೆಪಿಯ ಕೆಲವು ನಾಯಕರು ಮತ್ತು ಸ್ವತಃ ತ್ರಿಪುರಾದ ರಾಜ್ಯಪಾಲರು ಸಮರ್ಥಿಸಿ ಮಾತಾಡಿದ್ದರು. ಈ ಬಗ್ಗೆ  ಪರ ವಿರುದ್ಧ ಮಾತುಗಳು ಟ್ವೀಟರ್ ನಲ್ಲಿ ಜೋರಾಗಿ ನಡೆದಿತ್ತು. ಬಿಜೆಪಿಯ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮತ್ತು ಬ್ಯುಸಿನೆಸ್ ವರ್ಲ್ಡ್ ಪತ್ರಿಕೆಯ ಮಾಜಿ ಸಂಪಾದಕ ಟೋನಿ ಜೋಸೆಫ್ ನಡುವಿನ ಟ್ವೀಟ್ ಸಮರ ಟ್ವೀಟಿಗರ ಗಮನ ಸೆಳೆದಿತ್ತು.  ಅದು ಹೀಗಿದೆ.

 
ರಾಜೀವ್ ಚಂದ್ರ ಶೇಖರ್ : ನಂಗೂ ತಿಳ್ಕೊಳ್ಳುವ ಆಸೆ. ಅಲ್ಲ, ಲೆನಿನ್ ಪ್ರತಿಮೆ ಭಾರತದಲ್ಲಿ ಏನ್ ಮಾಡ್ತಿತ್ತು?
ಟೋನಿ ಜೋಸೆಫ್: ಏನನ್ನೂ ಮಾಡುತ್ತಿರಲಿಲ್ಲ. ಅದು ಸುಮ್ಮನೆ ಕದಲದೆ ಅಲ್ಲಿ ನಿಂತಿತ್ತು. ಅದು ಯಾರನ್ನೂ ಥಳಿಸಿರಲಿಲ್ಲ. ಗಲಭೆಗೆ ಪ್ರಚೋದಿಸಿ ಆ ಮೂಲಕ ಚುನಾವಣೆಯನ್ನು ಗೆಲ್ಲಲು  ಶ್ರಮಿಸಿರಲಿಲ್ಲ. ದ್ವೇಷದ ನ್ಯೂಸ್ ಚಾನೆಲನ್ನೂ ನಡೆಸಿರಲಿಲ್ಲ. ಅಲ್ಲದೆ, ಮೂರ್ಖತನದ ಪ್ರಶ್ನೆಗಳನ್ನೂ ಕೇಳುತ್ತಿರಲಿಲ್ಲ..