ಹೊಸದಿಲ್ಲಿ, ನ.11: ಮೂರು ವರ್ಷಗಳ ತರುವಾಯ ವಿಳಂಬವಾದರೂ 2016ರಲ್ಲಿ ಆಗಿರುವ ರೈತ ಆತ್ಮಹತ್ಯೆಯ ಲೆಕ್ಕವನ್ನು ಮೋದಿ ಸರಕಾರ ಬಿಡುಗಡೆಗೊಳಿಸಿದೆ. 11, 370 ರೈತರು ದೇಶಾದ್ಯಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ದಿನಕ್ಕೆ 31ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ಇವುಗಳಲ್ಲಿ ಕಾರ್ಮಿಕರು, ಜಮೀನು ಮಾಲಕರು , ಕೊಯ್ಲುಗಾರರು ಸೇರಿದ್ದಾರೆ.
ಮಹಾರಾಷ್ಟ್ರದಲ್ಲಿ ಅತಿಹೆಚ್ಚು ರೈತ ಆತ್ಮಹತ್ಯೆ ನಡೆದಿದ್ದು 3661 ಮಂದಿ ಮೃತಪತ್ತಿದ್ದಾರೆ. ಆತ್ಮಹತ್ಯೆ ಮಾಡುವ ಪ್ರತಿ ಮೂವರಲ್ಲಿ ಒಬ್ಬರು ಮಹಾರಾಷ್ಟ್ರದ ರೈತರು. ಕೇಂದ್ರ ಗೃಹ ಸಚಿವಾಲಯದ ನ್ಯಾಶನಲ್ ಕ್ರೈಂ ರೆಕಾಡ್ ಬ್ಯೋರೊ ಅಕ್ಟೋಬರ್ 21ಕ್ಕೆ ದೇಶದ ಅಪರಾಧ ಕೃತ್ಯಗಳ ಪಟ್ಟಿಯನ್ನೂ ಬಿಡುಗಡೆಗೊಳಿಸಿತ್ತು. ಎನ್ ಸಿಆರ್ಬಿ ರೈತ ಆತ್ಮಹತ್ಯೆಯ ಲೆಕ್ಕ ಬಹಿರಂಗಗೊಳಿಸಬೇಕಾಗಿಲ್ಲ ಎಂದು ಈ ಹಿಂದೆ ತೀರ್ಮಾನಿಸಿತ್ತು. 2015ರಿಂದ ಇರುವ ಲೆಕ್ಕದಂತೆ ಬ್ಯಾಂಕ್ ಸಾಲವೇ ಶೇ. 80ರಷ್ಟು ರೈತರ ಆತ್ಮಹತ್ಯೆಗೆ ಕಾರಣವಾಗಿದೆ. ಈಗ ಬಿಡುಗಡೆಯಾದ ಲೆಕ್ಕವನ್ನು ಹದಿನೆಂಟು ತಿಂಗಳ ಹಿಂದೆ ಕ್ರೈಂ ಬ್ಯೂರೊ ಎನ್ಸಿಆರ್ಬಿ ಕೇಂದ್ರ ಸರಕಾರಕ್ಕೆ ನೀಡಿತ್ತು.












