70,000 ಬಿಎಸ್‌ಎನ್‌ಎಲ್‌ ಉದ್ಯೋಗಿಗಳುವಿಆರ್‌ಎಸ್ ಮೂಲಕ ಮನೆಗೆ: ಇನ್ನಷ್ಟು ಮಂದಿಯಿಂದ ವಿಆರ್ ಎಸ್ ಸಾಧ್ಯತೆ

0
723

ಸನ್ಮಾರ್ಗ ವಾರ್ತೆ-

ದೆಹಲಿ: ನ. 11- ಕಳೆದ ವಾರ ಪ್ರಾರಂಭಿಸಲಾದ ವಿಆರ್‌ಎಸ್ ಯೋಜನೆಯನ್ನು ಬಿಎಸ್‌ಎನ್‌ಎಲ್‌ನ 70,000 ಉದ್ಯೋಗಿಗಳು ಈಗಾಗಲೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಟೆಲಿಕಾಂ ನಿಗಮದ ಅಧ್ಯಕ್ಷ ಮತ್ತು ಎಂಡಿ ಪಿ ಕೆ ಪುರ್ವಾರ್ ಸೋಮವಾರ ತಿಳಿಸಿದ್ದಾರೆ.

ಬಿಎಸ್ಎನ್ಎಲ್ ನ ಒಟ್ಟು ಸುಮಾರು 1.50 ಲಕ್ಷ ಉದ್ಯೋಗಿಗಳ ಪೈಕಿ ಸುಮಾರು ಒಂದು ಲಕ್ಷ ಬಿಎಸ್ಎನ್ಎಲ್ ಉದ್ಯೋಗಿಗಳು ಸ್ವಯಂಪ್ರೇರಿತ ನಿವೃತ್ತಿ ಯೋಜನೆಗೆ (ವಿಆರ್ಎಸ್) ಅರ್ಹರಾಗಿದ್ದಾರೆ, ಬಿಎಸ್‌ಎನ್‌ಎಲ್ ತನ್ನ ಆಂತರಿಕ ಗುರಿಯನ್ನು 77,000 ಉದ್ಯೋಗಿಗಳಿಗೆ ನಿಗದಿಪಡಿಸಿದೆ ಮತ್ತು ಪ್ರಸ್ತುತ ಯೋಜನೆಯಡಿ ಸ್ವಯಂಪ್ರೇರಿತ ನಿವೃತ್ತಿಯ ದಿನಾಂಕವನ್ನು ಜನವರಿ 31, 2020 ನಿಗದಿಪಡಿಸಿದೆ. ವಿಆರ್‌ಎಸ್ ಆಯ್ಕೆ ಮಾಡಿಕೊಂಡಿರುವ ನೌಕರರ ಸಂಖ್ಯೆ ಇಲ್ಲಿಯವರೆಗೆ ಸುಮಾರು 70,000 ತಲುಪಿದೆ ಎಂದು ಪುರ್ವಾರ್ ಹೇಳಿದರು.

ಕಳೆದ ವಾರ ರೂಪಿಸಲಾಗಿದ್ದ ‘ಬಿಎಸ್‌ಎನ್‌ಎಲ್ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು 70,000-80,000 ಸಿಬ್ಬಂದಿ ಆರಿಸಿಕೊಂಡರೆ ಬಿಎಸ್‌ಎನ್‌ಎಲ್ ಸುಮಾರು 7,000 ಕೋಟಿ ರೂ.ಗಳ ವೇತನವನ್ನು ಉಳಿಸಿಕೊಂಡಂತಾಗುತ್ತದೆ. ಯೋಜನೆಯ ಪ್ರಕಾರ 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಈ ಯೋಜನೆಯಡಿಯಲ್ಲಿ ಸ್ವಯಂಪ್ರೇರಿತ ನಿವೃತ್ತಿ ಪಡೆಯಲು ಅರ್ಹರಾಗಿದ್ದಾರೆ. ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್ಎಲ್) ಕೂಡ ತನ್ನ ಉದ್ಯೋಗಿಗಳಿಗಾಗಿ ವಿಆರ್ಎಸ್ ಅನ್ನು ಹೊರತಂದಿದೆ. ಗುಜರಾತ್ ಮಾದರಿಯನ್ನು ಆಧರಿಸಿದ ಈ ಯೋಜನೆ 2019 ರ ಡಿಸೆಂಬರ್ 3 ರವರೆಗೆ ಉದ್ಯೋಗಿಗಳಿಗೆ ಮುಕ್ತವಾಗಿರುತ್ತದೆ.