ಇಸ್ರೇಲ್ ಮುಸ್ಲಿಮರಿಗೆ ಹಜ್ಜ್ ನಿರ್ಬಂಧ: ಸೌದಿ ಅರೇಬಿಯಾದಿಂದ ಬದಲಾದ ವೀಸಾ ನಿಯಮ!

0
1304

ಸೌದಿ ಅರೇಬಿಯಾ: ಪಾಸ್ ಪೋರ್ಟ್ ನಿಯಮಗಳಲ್ಲಿ ಬದಲಾವಣೆ ತರುವ ಪರಿಣಾಮವಾಗಿ ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಇಸ್ರೇಲಿ ಮುಸ್ಲಿಮರು ಹಜ್ಜ್ ಯಾತ್ರೆಯಿಂದ ವಂಚಿತರಾಗಲಿದ್ದಾರೆ ಎಂದು ವರದಿಯಾಗಿದೆ.

ಸೌದಿಯ ದೊರೆ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್, ಇಸ್ರೇಲ್ ಹಾಗೂ ಸೌದಿ ಅರೇಬಿಯಾಗೆ ಯಾವುದೇ ರೀತಿಯ ರಾಜತಾಂತ್ರಿಕ ಸಂಬಂಧವಿಲ್ಲದ ಕಾರಣ ಪಾಸ್ ಪೋರ್ಟ್ ನಿಯಮಗಳನ್ನು ಬದಲಾವಣೆ ತಂದಿದ್ದು, ಇದರಿಂದಾಗಿ ಇಸ್ರೇಲಿ ಮುಸ್ಲಿಮರು ವಾರ್ಷಿಕ ಹಜ್ ಯಾತ್ರೆಗೆ ಮೆಕ್ಕಾ ತಲುಪಲು ಸಾಧ್ಯವಾಗುವುದಿಲ್ಲ.

ಈ ಬಗ್ಗೆ ಪತ್ರಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಈ ಬದಲಾವಣೆಯು ಆಡಳಿತದ ಸ್ಥಿರತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ಸೌದಿ ದೊರೆ ಮುಹಮ್ಮದ್ ಬಿನ್ ಸಲ್ಮಾನ್ ರನ್ನು ಪ್ರಶಂಸಿದ್ದಾರೆ.

ಪ್ರವಾಸವನ್ನು ಸುಲಭಗೊಳಿಸಲು ಜೋರ್ಡಾನ್ ಇಸ್ರೇಲಿ ಮುಸ್ಲಿಮರಿಗೆ ಜಾರಿಗೊಳಿಸಿರುವ ತಾತ್ಕಾಲಿಕ ಪಾಸ್‌ಪೋರ್ಟ್ ಗಳನ್ನು ತಾವು ಸ್ವೀಕರಿಸುವುದಿಲ್ಲ ಎಂದು ಸೌದಿ ಅಧಿಕಾರಿಗಳು ಘೋಷಿಸಿದ್ದಾರೆ.

ಈ ಬಗ್ಗೆ ಇಸ್ರೇಲಿ ವಿದೇಶಾಂಗ ಇಲಾಖೆಯ ವಕ್ತಾರರು “ಸರ್ಕಾರವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ” ಎಂದು ಹೇಳಿದ್ದಾರೆ.

ಜೆರುಸಲೆಮ್, ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಸ್ಟ್ರಿಪ್ ನಲ್ಲಿ ತಾತ್ಕಾಲಿಕ ಜೋರ್ಡಾನ್ ಪಾಸ್ ಪೋರ್ಟ್ ಗಳನ್ನು ಹೊಂದಿರುವ ಫೆಲೆಸ್ತೀನ್ ಜನರು ಪ್ರವಾಸ ದಾಖಲೆಗಳನ್ನು ಹೊಂದಿಲ್ಲವಾದರೂ, ಸೌದಿ ಅರೇಬಿಯಾದ ಈ ಬದಲಾವಣೆಯು ಪರಿಣಾಮ ಬೀರಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.