ಯಮನ್‍ನಲ್ಲಿ ಹೂಥಿ ಬಂಡುಕೋರರಿಂದ ಡ್ರೋನ್ ದಾಳಿ; 21 ಮಂದಿ ಹತ

0
448

ಸನ್ಮಾರ್ಗ ವಾರ್ತೆ

ಸನಾ: ಸೆಂಟ್ರಲ್ ಯಮನ್‍ನಲ್ಲಿ ನಡೆದ ಮಿಸೈಲ್ ಡ್ರೋನ್ ದಾಳಿಯಲ್ಲಿ 21 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಾರಿಬ್ ನಗರದ ಗ್ಯಾಸ್ ಸ್ಟೇಶನ್ ಸ್ಫೋಟ ನಡೆಸಲಾಗಿತ್ತು. ಮೃತಪಟ್ಟಿರುವವರಲ್ಲಿ ನಿರಾಶ್ರಿತ ಐದು ವರ್ಷದ ಹೆಣ್ಣು ಮಗು ಕೂಡ ಸೇರಿದೆ.

ಹೂಥಿ ಬಂಡುಕೋರರ ಕೃತ್ಯ ಇದು. ಈ ದಾಳಿಯ ಕುರಿತು ಯೆಮನ್ ಪ್ರಧಾನಿ ಮಯೀನ್ ಅಬ್ದುಲ್ ಮಾಲಿಕ್ ಹೂಥಿಗಳ ಕೃತ್ಯವೆಂದು ದೃಢಪಡಿಸಿದ್ದಾರೆ. ಇತ್ತೀಚೆಗೆ ಇದೇ ನಗರದಲ್ಲಿ ಹೂಥಿ ಬಂಡುಕೋರರ ದಾಂಧಲೆಯಿಂದ ಹದಿನಾರು ಮಂದಿ ಮೃತಪಟ್ಟಿದ್ದರು. ಅಂದು ಹೂಥಿಗಳು ಮಿಸೈಲ್ ದಾಳಿ ನಡೆಸಿದ್ದರು.