ಬಂಧಿತ ಫೇಲಸ್ತೀನಿಯನ್ ಕಾರ್ಯಕರ್ತರಾದ ಮುನ ಅಲ್‍ಕುರ್ದಿ, ಮುಹಮ್ಮದ್ ಅಲ್‍ಕುರ್ದಿಯನ್ನು ಬಿಡುಗಡೆಗೊಳಿಸಿದ ಇಸ್ರೇಲ್

0
911

ಸನ್ಮಾರ್ಗ ವಾರ್ತೆ

ಜೆರುಸಲೇಮ್: ಮಸ್ಚಿದುಲ್ ಅಕ್ಸಾದ ಪರಿಸರದ ಶೇಖ್ ಜರ್ರಾಹ್‍ನಿಂದ ಒಕ್ಕಲೆಬ್ಬಿಸುವ ಇಸ್ರೇಲ್ ಸಂಚನ್ನು ವಿಶ್ವದ ಗಮನಕ್ಕೆ ತಂದೆ ಸಹೋದರರಾದ ಮುನ ಅಲ್‍ಕುರ್ದಿ ಮತ್ತು ಮುಹಮ್ಮದ್ ಅಲ್‍ಕುರ್ದಿಯವರನ್ನು ಗಂಟೆಗಳ ಕಾಲ ಜೈಲಿಗಟ್ಟಿದ ಬಳಿಕ ಇಸ್ರೇಲ್ ಪೊಲೀಸರು ಬಿಡುಗಡೆಗೊಳಿಸಿದರು. ಇವರ ಬಂಧನ ವಿರೋಧಿಸಿ ಫೆಲಸ್ತೀನಿನುದ್ದಕ್ಕೂ ಪ್ರತಿಭಟನೆ ನಡೆದಿತ್ತು. ಅಲ್‍ಜಸೀರಾ ಪತ್ರಕರ್ತೆಯನ್ನು ಬಂಧಿಸಿ ಬಿಡುಗಡೆಗೊಡಿಸಿದ ಬಳಿಕ ಇವರನ್ನು ಇಸ್ರೇಲ್ ಪೊಲೀಸರು ಬಂಧಿಸಿದ್ದರು. ಬಿಡುಗಡೆಗೊಂಡ ಮುನ ಅಲ್ ಕುರ್ದಿ ಮತ್ತು ಮುಹಮ್ಮದ್ ಅಲ್ ಕುರ್ದಿ ಮುಂದೆಯೂ ಹೋರಾಟದಲ್ಲಿ ಭಾಗವಹಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದರು.

ಮುನ ಅಲ್‍ಕುರ್ದಿಯವರನ್ನು ಮನೆಯಿಂದ ಮುಹಮ್ಮದ್ ಅಲ್‍ ಕುರ್ದಿಯನ್ನು ಠಾಣೆಗೆ ಕರೆಯಿಸಿಕೊಂಡು ಬಂಧಿಸಲಾಗಿತ್ತು. ವಿಷಯ ತಿಳಿದು ಪೊಲೀಸ್ ಠಾಣೆಯ ಮುಂದೆ ಫೆಲಸ್ತೀನಿಯರು ಜಮಾಯಿಸಿದ್ದರು. ಅವರ ವಿರುದ್ಧ ರಬ್ಬರ್ ಬುಲೆಟ್ ಸ್ಟನ್ ಗ್ರೆನೆಡ್ ಹಾರಿಸಿದ್ದರಿಂದ ಹತ್ತು ಮಂದಿ ಗಾಯಗೊಂಡಿದ್ದರು.

ಶೇಖ್ ಜರ್ರಾಹ್‍‌ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ವೇಳೆ ನಿನ್ನೆ ಅಲ್‍ಜಝೀರದ ಪತ್ರಕರ್ತೆ ಶಿವಾರ ಬುದೈರಿಯವರನ್ನು ಪೊಲೀಸರು ಬಂಧಿಸಿದ್ದರು. ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ಕೇಳಿಬಂದ ಬಳಿಕ ಗಂಟೆಗಳೊಳಗೆ ಶಿವಾರರನ್ನು ಬಿಡುಗಡೆಗೊಳಿಸಲಾಗಿತ್ತು.

LEAVE A REPLY

Please enter your comment!
Please enter your name here